ಬೆಂಗಳೂರು, ಡಿ. 28: ಮನೆಯಲ್ಲಿ ಗೋಡೆ ಗಡಿಯಾರ ಇರಲೇ ಬೇಕು. ಇದರಲ್ಲಿ ಸಮಯ ನೋಡಿದರೆ, ನಿತ್ಯದ ಕೆಲಸ ಸಾಗುವುದು. ಈ ಅಭ್ಯಾಸ ಎಲ್ಲರಿಗೂ ಇರುತ್ತದೆ. ಕೈನಲ್ಲೇ ಮೊಬೈಲ್ ಇದ್ದರೂ ಕೂಡ ಗೋಡೆಯಲ್ಲಿನ ಗಡಿಯಾರದ ಸಮಯವನ್ನು ನೋಡುವವರೇ ಹೆಚ್ಚು. ಮನೆಯ ಅಲಂಕಾರಕ್ಕೆ ಗೋಡೆಯ ಗಡಿಯಾರಗಳು ಕೂಡ ಈಗ ಟ್ರೆಂಡಿಯಾಗಿವೆ. ಮನೆ ಮತ್ತು ಕೆಲಸದ ಸ್ಥಳಗಳಲ್ಲಿ ಎಲ್ಲಾ ಕಡೆಗಳಲ್ಲೂ ವಾಲ್ ಕ್ಲಾಕ್ ಇದ್ದೇ ಇರುತ್ತದೆ. ಮನೆಯ ಯಾವ ಕೋಣೆಯಲ್ಲೇ ಗಡಿಯಾರಗಳನ್ನು ನೇತು ಹಾಕಬಹುದು. ಇದರಿಂದ ಮನೆಯ ಸದಸ್ಯರು ಸಮಯವನ್ನು ನೋಡಲು ಸುಲಭವಾಗುತ್ತದೆ.
ಆಕರ್ಷಣೀಯವಾಗಿ ಕಾಣಲು ವಾಲ್ ಕ್ಲಾಕ್ ಗಳನ್ನು ಆಯ್ಕೆ ಮಾಡುವಾಗ ಎಚ್ಚರದಿಂದ ಇರಬೇಕು. ಮನೆಗೆ ಯಾವ ಗಡಿಯಾರವನ್ನು ತಂದು ನೇತಾಕಿದರು ಅದರ ಪಾಡಿಗೆ ಅದು ತಿರುಗುತ್ತಿರುತ್ತದೆ. ಆದರೆ, ನಮ್ಮ ಮನೆಗೆ ಯಾವ ರೀತಿಯ ವಾಲ್ ಕ್ಲಾಕ್ ಇದ್ದರೆ ಚೆನ್ನಾ ಎಂಬುದನ್ನು ನಾವೇ ಡಿಸೈಡ್ ಮಾಡಬೇಕು. ಈಗಂತೂ ಮಾರುಕಟ್ಟೆಯಲ್ಲಿ ತರಹೇವಾರಿ ಬಗೆಯ ವಾಲ್ ಕ್ಲಾಕ್ ಗಳು ಬಂದಿವೆ. ಒಂದಕ್ಕಿಂತ ಒಂದರ ಅಂದ ಹೆಚ್ಚಾಗಿರುತ್ತದೆ. ಹಲವು ವಿಧಗಳ ವಾಲ್ ಕ್ಲಾಕ್ ಹಾಗೂ ಗೋಡೆ ಗಡಿಯಾರದ ವಿವಿಧ ಡಿಸೈನ್ ಗಲ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.
ಮಾರುಕಟ್ಟಗಳಲ್ಲಿ ಸಾಕಷ್ಟು ಬಗೆಯ ಗೋಡೆ ಗಡಿಯಾರಗಳು ಲಭ್ಯವಿದೆ. ಮರದ ಗೋಡೆ ಗಡಿಯಾರ, ಕೂಕೂ, ಡಿಜಿಟಲ್, ಹಳೆಯ ಕಾಲದ ಹಿತ್ತಾಳೆಯ ಪೆಂಡಾಲಂ, ಪ್ಲಾಸ್ಟಿಕ್, ಗಾಜು ಸೇರಿದಂತೆ ಇತರೆ ಲೋಹದ ಗಡಿಯಾರಗಳು ಕೂಡ ಸಿಗುತ್ತವೆ. ಈ ಗಡಿಯಾರಗಳನ್ನು ನಿಮ್ಮ ಮನೆಗೆ ಆಯ್ಕೆ ಮಾಡುವಾಗ ಬಹಳ ಎಚ್ಚರದಿಂದ ಆರಿಸಿ. ಒಮ್ಮೆ ಗೋಡೆ ಗಡಿಯಾರವನ್ನು ಖರೀದಿಸಿದರೆ ಆಯ್ತು. ಮತ್ತೆ ಜೀವನದಲ್ಲಿ ಗೋಡೆ ಗಡಿಯಾರವನ್ನೂ ಖರೀದಿಸುವ ಅಗತ್ಯವೇ ಬೀಳುವುದಿಲ್ಲ. ಅಕಸ್ಮಾತ್ ಆಗಿ ಗಡಿಯಾರ ಹಾಳಾದರೆ, ಬಿದ್ದು ಒಡೆದರೆ, ಗಡಿಯಾರದ ಮುಳ್ಳುಗಳು ಕೆಟ್ಟೋದರೆ ಮಾತ್ರವೇ ಹೊಸ ಗಡಿಯಾರವನ್ನು ಖರೀದಿಸಬೇಕಾಗುತ್ತದೆ.
ಆದರೆ, ಗೋಡೆಯ ಮೇಲೆ ಗಡಿಯಾರವನ್ನು ನೇತು ಹಾಕುವುದರಿಂದ ಅದು ಹಾಳಾಗುವ ಸಂದರ್ಭಗಳು ತೀರಾ ಕಡಿಮೆಯೇ. ಇನ್ನು ನಿಮ್ಮ ಮನೆಯ ಗೋಡೆಯ ಬಣ್ಣಕ್ಕೆ ಹೊಂದುವಂತಹ ಗಡಿಯಾರನ್ನು ಆರಿಸಿಕೊಳ್ಳಿ. ಮನೆಯ ಪಿಠೋಪಕರಣಗಳ ಬಣ್ಣವೇ ಇರಬೇಕು ಎಂದು ಬಯಸಿದರೆ, ಮರದ ಗಡಿಯಾರಗಳು ಸುಂದರವಅಗಿರಯತ್ತವೆ. ನಿಮ್ಮ ಮನೆಯಲ್ಲಿ ಗಾಜಿನ ಪಿಠೋಪಕರಣಗಳಿದ್ದರೆ, ಗಾಜಿನ ಗಡಿಯಾರಗಳು ಚೆನ್ನಾಗಿ ಹೊಂದಿಕೊಳ್ಳುತ್ತವೆ. ಇನ್ನು ಗಡಿಯಾರದಲ್ಲಿ ಗಂಟೆಯನ್ನು ತಿಳಿಯಲು ನಂಬರ್ ಇರಬೇಕಾ, ಇಲ್ಲವೇ ರೋಮನ್ ನಂಬರ್ ಇರಲಾ ಎಂಬುದನ್ನೂ ಆರಿಸಬಹುದು.
ಅಷ್ಟೇ ಅಲ್ಲದೇ, ವಾಲ್ ಕ್ಲಾಕ್ ಗಳಲ್ಲಿ ಮನೆಯವರ ಫೋಟೋಗಳನ್ನು ಹಾಕಬಹುದು. ಇದಕ್ಕೆ ಮನೆಯ ಗೋಡೆ ಬಹಳಷ್ಟು ವಿಶಾಲವಾಗಿರಬೇಕಾಗುತ್ತದೆ. ನಿಮ್ಮ ಮನೆಯಲ್ಲಿರುವ ಸದಸ್ಯರ ವಯೋಮಾನಕ್ಕೆ ತಕ್ಕಂತೆಯೂ ಈ ವಾಲ್ ಕ್ಲಾಕ್ ಅನ್ನು ಡಿಸೈನ್ ಮಾಡಿಸಬಹುದು. ಪ್ರಕೃತಿಯ ಫೊಟೋ ಇರುವ ಗಡಿಯಾರ, ಮಕ್ಕಳ ನಗು ಮುಖದ ಗಡಿಯಾರ ಇದ್ದರೆ ತುಂಬಾನೇ ಚೆಂದ. ಟ್ರೆಡಿಷನಲ್ ಲುಕ್ ಇರುವಂತಹ ಗಡಿಯಾರಗಳನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಮನೆಗೆ ಸಕರಾತ್ಮಕವಾಗಿರುವಂತಹ ಗೋಡೆ ಗಡಿಯಾರಗಳನ್ನು ಆಯ್ಕೆ ಮಾಡಿ.