ಬೆಂಗಳೂರು;ಇ-ಸ್ವತ್ತು2021 ರಲ್ಲಿ ಕರ್ನಾಟಕ ಸರ್ಕಾರವು ಪ್ರಾರಂಭಿಸಿದ ಆನ್‌ಲೈನ್ ಪೋರ್ಟಲ್ ಆಗಿದೆ. ಇದು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ನೆಲೆಗೊಂಡಿರುವ ಆಸ್ತಿಗಳ ಮಾಲೀಕತ್ವದ ವಿವರಗಳನ್ನು ಪಡೆಯಲು ನಾಗರಿಕರಿಗೆ ಅನುವು ಮಾಡಿಕೊಡುತ್ತದೆ. ಈ ಪೋರ್ಟಲ್ ಅನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ವಹಿಸುತ್ತದೆ. ಇ- ಸ್ವತ್ತು ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವುದಾಗಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.
ರಾಜಧಾನಿ ಬೆಂಗಳೂರು ಮಹಾನಗರದ ಲಕ್ಷಾಂತರ ಆಸ್ತಿ ಮಾಲೀಕರಿಗೆ ‘ಎ’ ಖಾತಾ ಭಾಗ್ಯ ಶೀಘ್ರದಲ್ಲೇ ಸಿಗಲಿದೆ. ಅಷ್ಟೇ ಅಲ್ಲ, 18,52,802 ಆಸ್ತಿಗಳು ತೆರಿಗೆ ಜಾಲದ ವ್ಯಾಪ್ತಿಗೆ ಬರಲಿವೆ.ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಖರೀದಿಸಿದ ಜಮೀನು ಅಥವಾ ಆಸ್ತಿ, ಅಥವಾ ಮನೆ ಖರೀದಿ ಮಾಡಿದ್ದರೆ ಅಥವಾ ಈಗಾಗಲೇ ನಿಮ್ಮ ಆಸ್ತಿ, ಮನೆಗಳಿದ್ದರೆ ಸರ್ಕಾರ ಸಿದ್ದಪಡಿಸಿರುವ ಇ ತಂತ್ರಾಂಶದ ಮೂಲಕ ಆಸ್ತಿಗೆ ಗ್ರಾಮ ಪಂಚಾಯತಿನಲ್ಲಿ ಅರ್ಜಿ ಸಲ್ಲಿಸಿ ವಿಶಿಷ್ಟ ಸಂಖ್ಯೆಯನ್ನು ಪಡೆದುಕೊಳ್ಳುವುದನ್ನು ಇ ಸ್ವತ್ತು ಎನ್ನುವರು.
ನೂತನ ನಿಯಮದ ಪ್ರಕರ ಈ-ಸ್ವತ್ತು ತಂತ್ರಾಂಶ ಬಳಸಿ ಆನ್ ಲೈನ್ ಮೂಲಕ ವಿತರಿಸಿದ ನಮೂನೆ 9 ಮತ್ತು ನಮೂನೆ 11 ನ್ನು ಆಸ್ತಿ ನೋಂದಣಿಗೆ ಬಳಸಬಹುದು. ಕೈ ಬರಹದ ಮೂಲಕ ನೀಡುವ ಹಾಗೂ ಹಳೆ ಮಾದರಿಯ ನಮೂನೆ 9 ಹಾಗೂ ನಮೂನೆ 11ನ್ನು ಇನ್ನೂಮುಂದೆ ರದ್ದುಗೊಳ್ಳಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 18.52 ಲಕ್ಷ ಆಸ್ತಿಗಳಿಂದಷ್ಟೇ ತೆರಿಗೆ ಸಂಗ್ರಹವಾಗುತ್ತಿದೆ. ಈ ಪೈಕಿ 6.16 ಲಕ್ಷ ಬಿ ಖಾತಾ ಸ್ವತ್ತುಗಳಿವೆ. 2007ಕ್ಕಿಂತ ಮೊದಲು ನಗರದಲ್ಲಿ ‘ಬಿ’ ಖಾತಾ ವ್ಯವಸ್ಥೆಯೇ ಜಾರಿಯಲ್ಲಿರಲಿಲ್ಲ. ಅಲ್ಲಿಯವರೆಗೆ ಸುಧಾರಣಾ ಶುಲ್ಕ ಕಟ್ಟಿಸಿಕೊಂಡು ಎಲ್ಲ ಆಸ್ತಿಗಳಿಗೂ ‘ಎ’ ಖಾತಾ ನೀಡಲಾಗುತ್ತಿತ್ತು. 2006ರಲ್ಲಿ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ಭೂಪರಿವರ್ತನೆಯಾಗದ ನಿವೇಶನಗಳಿಗೆ ‘ಎ’ ಖಾತಾ ನೀಡಬಾರದೆಂದು ಸುಗ್ರೀವಾಜ್ಞೆ ಹೊರಡಿಸಲಾಯಿತು.
ಉದ್ಯಾನ ನಗರಿಯಲ್ಲಿ 2006ರಲ್ಲಿ ಭೂಮಿಯ ಬೆಲೆ ಗಗನಮುಖಿಯಾಯಿತು. ಪಾಲಿಕೆಗೆ ಹೊಸದಾಗಿ ನಗರಸಭೆ, ಪುರಸಭೆ ಸೇರಿ 110 ಹಳ್ಳಿಗಳು ಸೇರ್ಪಡೆಯಾದವು. ಈ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರಿಗಳಿಂದ ನಕ್ಷೆ ಮಂಜೂರಾತಿಗೆ ಅನುಮೋದನೆ ಪಡೆಯದೆ, ಭೂಪರಿವರ್ತನೆ ಮಾಡಿಸದೆಯೇ ಬಡಾವಣೆಗಳನ್ನು ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡಲಾಯಿತು.
ಬಿಬಿಎಂಪಿ ವ್ಯಾಪ್ತಿಯಲ್ಲಿ 1200 ಕೋಟಿ ರೂ. ವೆಚ್ಚದಲ್ಲಿ 128 ಕಿ.ಮೀ ಉದ್ದದ ಕಿರು ಕಾಲುವೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದೇ ವರ್ಷ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಪರಿಷತ್‌ನಲ್ಲಿ ಸಿಎಂ ತಿಳಿಸಿದರು.ರಾಜಕಾಲುವೆಗಳ 1912 ಪ್ರಕರಣಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ. 98 ಮಾಲೀಕರು ಹಾಗೂ 20 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 382 ಎಕರೆಗೆ ಸಂಬಂಧಿಸಿದ 2626 ಒತ್ತುವರಿ ಪ್ರಕರಣಗಳಿವೆ.
‘ರಾಜಕಾಲುವೆಗಳ 1912 ಪ್ರಕರಣಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ. 98 ಮಾಲೀಕರು ಹಾಗೂ 20 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 382 ಎಕರೆಗೆ ಸಂಬಂಧಿಸಿದ 2626 ಒತ್ತುವರಿ ಪ್ರಕರಣಗಳಿವೆ. 2020 ಡಿಸೆಂಬರ್ 24ರವರೆಗೆ 1912 ಪ್ರಕರಣಗಳ ಒತ್ತುವರಿ ತೆರವುಗೊಳಿಸಲಾಗಿದೆ’ ಎಂದು ಸಿಎಂ ಮಾಹಿತಿ ನೀಡಿದರು.
ಈ ಸ್ವತ್ತು ಮಾಡಿಸಲು ಬೇಕಾಗುವ ದಾಖಲೆಗಳು:
ಮಾಲೀಕನ ವಿಳಾಸದ ಕುರಿತು ಪತ್ರ, (ಆಧಾರ್ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿ) ಆಸ್ತಿಯ ಮಾಲೀಕತ್ವದ ದಾಖಲೆಗಳು, ಜಮೀನಿನ ದಾಖಲಾತಿಗಳು ಮುಖ್ಯವಾಗಿ ಚೆಕ್ ಬಂದಿ ಬೇಕಾಗುತ್ತದೆ. ಜಮೀನು ಮಾಲೀಕರ passport size ಫೋಟೊಗಳು, ನಿವೇಶನದ ನಕ್ಷೆ ಅಂದರೆ ಆಸ್ತಿಯ ನಕ್ಷೆ ಬೇಕು. ಕ್ರಯಪತ್ರ ಬೇಕು. ಪಹಣಿ ಪತ್ರ ಇದ್ದರೆ ಲಗತ್ತಿಸಬೇಕು. ಕಟ್ಟಡಗಳ ತೆರಿಗೆ ಪತ್ರ, ಅಥವಾ ವಿದ್ಯುತ್ ಬಿಲ್ ಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಯಾತಿಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳಬೇಕು. ಪಿಡಿಓ ಸ್ಥಳ ಪರಿಶೀಲನೆ ಮಾಡಿದ ನಂತೆರ ಪಿಡಿಓ ರವರು ಇ ಸ್ವತ್ತು ತಂತ್ರಾಂಶದ ಮೂಲಕ ಅರ್ಜಿಯನ್ನು ಆಸ್ತಿ ನಕ್ಷೆ ಪಡೆಯಲು ಮೋಜಿನಿಗೆ ಅಂದರೆ ಅಳತೆಗಾಗಿ ವರ್ಗಾಯಿಸುತ್ತಾರೆ. ನಂತರ ಮೋಜಿನಿಯಾದ ನಂತರ 800 ರುಪಾಯಿ ಶುಲ್ಕ ಪಾವತಿಸಿ ಸ್ವೀಕೃತಿ ಪಡೆದುಕೊಳ್ಳಬೇಕು. ಇದಾದ ನಂತರ 21 ದಿನಗಳ ನಂತರ ಅರ್ಜಿದಾರರ ಸಮ್ಮುಖದಲ್ಲಿ ಪಿಡಿಓ ಸ್ಥಳ ಪರಿಶೀಲನೆ ಮಾಡಿದ ನಂತರ ಡಿಜಿಟಲ್ ಸಹಿ ಮಾಡಿ ಇ-ಸ್ವತ್ತು ನೀಡುತ್ತಾರೆ.
ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಪಿಡಿಓ ಸ್ಥಳ ಪರಿಶೀಲನೆ ಮಾಡಿದ ನಂತರ ಈ ಸ್ವತ್ತಿನ ಮೇಲೆ ಪಿಡಿಓರವರು ಡಿಜಿಟಲ್ ಸಹಿ ಮಾಡುವ ಮೂಲಕ ಅರ್ಜಿ ಸಲ್ಲಿಸಿದ 45 ದಿನಗಳೊಳಗಾಗಿ ಇ-ಸ್ವತ್ತು ಮಾಡಬೇಕೆಂಬ ನಿಯಮವಿದೆ.