17.5 C
Bengaluru
Friday, November 22, 2024

ಶೇ 8ರಿಂದ 9ರ ವರೆಗೆ FD ಗೆ ಬಡ್ಡಿ ನೀಡುತ್ತಿವೆ ಈ ಬ್ಯಾಂಕುಗಳು

ಬ್ಯಾಂಕುಗಳು ನಮ್ಮ ದೇಶದ ಹಣಕಾಸು ವ್ಯವಸ್ಥೆಯ ಆಧಾರ ಸ್ತಂಭಗಳು. ಇವು ಸುಭದ್ರವಾಗಿದ್ದರೆ ಹಣಕಾಸು ಪರಿಸ್ಥಿತಿ ಭದ್ರವಾಗಿದ್ದಂತೆ. ಈಗ ಬ್ಯಾಂಕುಗಳಿಗೆ ಬಂಡವಾಳ ಬೇಕಾಗಿದೆ.ಹೂಡಿಕೆಗೆ ಸ್ಥಿರ ಠೇವಣಿ (FD) ಕೂಡ ಒಂದು ಉತ್ತಮ ಆಯ್ಕೆಯಾಗಿದೆ. ಎಸ್​ಬಿಐ (SBI), ಎಚ್​ಡಿಎಫ್​ಸಿ (HDFC), ಐಸಿಐಸಿಐ ಬ್ಯಾಂಕ್​ (ICICI Bank) ಹಾಗೂ ಇತರ ಕೆಲವು ಬ್ಯಾಂಕ್​ಗಳು ಕಳೆದ ಕೆಲವು ತಿಂಗಳುಗಳಲ್ಲಿ ಹಿರಿಯ ನಾಗರಿಕರ ಮತ್ತು ಜನಸಾಮಾನ್ಯರ ಎಫ್​ಡಿ ಬಡ್ಡಿ ದರವನ್ನು (FD Rates) ಹೆಚ್ಚಿಸಿವೆ. ಆರ್​ಬಿಐ ಮೇ ತಿಂಗಳ ಬಳಿಕ ಈವರೆಗೆ ಒಟ್ಟಾರೆಯಾಗಿ ರೆಪೊ ದರವನ್ನು 225 ಮೂಲಾಂಶ ಹೆಚ್ಚಳ ಮಾಡಿದೆ. ಪರಿಣಾಮವಾಗಿ ವಿವಿಧ ಬ್ಯಾಂಕ್​ಗಳಲ್ಲಿ ಸಾಲದ ಮೇಲಿನ ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರವೂ ತುಸು ಹೆಚ್ಚಾಗಿದೆ. ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್,ಇತರ ಬ್ಯಾಂಕುಗಳು ಹಿರಿಯ ನಾಗರಿಕರ ಎಫ್​ಡಿಗೆ ನೀಡುತ್ತಿರುವ ಬಡ್ಡಿ ವಿವರ ಇಲ್ಲಿದೆ.

1.ಎಚ್​ಡಿಎಫ್​ಸಿ ಬ್ಯಾಂಕ್ ಹಿರಿಯ ನಾಗರಿಕರ ಎಫ್​ಡಿ ಬಡ್ಡಿ ದರ   ಎಚ್​​ಡಿಎಫ್​ಸಿ ಬ್ಯಾಂಕ್​ 7 ದಿನಗಳಿಂದ 10 ವರ್ಷಗಳ ವರೆಗಿನ ವಿವಿಧ ಅವಧಿಯ ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 3.5ರಿಂದ 7.75ರ ವರೆಗೆ ಬಡ್ಡಿ ನೀಡುತ್ತಿದೆ. ಪರಿಷ್ಕೃತ ಬಡ್ಡಿ ದರ ಡಿಸೆಂಬರ್ 14ರಿಂದ ಜಾರಿಯಲ್ಲಿದೆ.

2.ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನವೆಂಬರ್ 21ರಿಂದ ಅನ್ವಯವಾಗುವಂತೆ ಎಫ್​ಡಿ ಬಡ್ಡಿ ದರವನ್ನು ಶೇಕಡಾ 8.50ರ ವರೆಗೆ ಹೆಚ್ಚಿಸಿದೆ. ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 9ರ ಬಡ್ಡಿ ನಿಗದಿಪಡಿಸಿದೆ. ಎಫ್​ಡಿ ಅವಧಿ 181ರಿಂದ 501 ದಿನಗಳವರೆಗಿನದ್ದಾಗಿದೆ.

3.ಉಜ್ಜೀವನ್ ಸ್ಮಾಲ್ ಫೈನಾನ್ಸ್ ನವೆಂಬರ್ 5ರಿಂದ ಜಾರಿಗೆ ಬರುವಂತೆ ಎಫ್​ಡಿ ಬಡ್ಡಿ ದರವನ್ನು ಶೇಕಡಾ 8ರ ವರೆಗೆ ಹೆಚ್ಚಿಸಿದೆ. ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 8.75ರ ವರೆಗೆ ಬಡ್ಡಿ ಸಿಗುತ್ತದೆ. ಎಫ್​ಡಿ ಅವಧಿ 80 ವಾರಗಳದ್ದಾಗಿದೆ.

4.ಫಿನ್​ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನವೆಂಬರ್ 22ರಿಂದ ಜಾರಿಗೆ ಬರುವಂತೆ ಎಫ್​​ಡಿ ಬಡ್ಡಿ ದರವನ್ನು ಶೇಕಡಾ 8ರ ವರೆಗೆ ಹೆಚ್ಚಿಸಿದೆ. ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 8.50 ವರೆಗೆ ಬಡ್ಡಿ ನಿಗದಿಪಡಿಸಿದೆ. ಎಫ್​ಡಿ ಅವಧಿ 1000 ದಿನಗಳದ್ದಾಗಿದೆ.

5.ಇಎಸ್​​ಎಎಫ್​ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಡಿಸೆಂಬರ್ 15ರಿಂದ ಜಾರಿಗೆ ಬರುವಂತೆ ಎಫ್​ಡಿ ಬಡ್ಡಿ ದರವನ್ನು ಶೇಕಡಾ 8ರ ವರೆಗೆ ಹೆಚ್ಚಿಸಿದೆ. ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 8.50 ವರೆಗೆ ಬಡ್ಡಿ ನೀಡುತ್ತಿದೆ. ಎಫ್​ಡಿ ಅವಧಿ 999 ದಿನಗಳದ್ದಾಗಿದೆ.

Related News

spot_img

Revenue Alerts

spot_img

News

spot_img