26.7 C
Bengaluru
Sunday, December 22, 2024

ಮನೆಯಲ್ಲಿ ಮಣ್ಣಿನ ಮಡಿಕೆಯನ್ನು ಇಡಲು ಯಾವ ದಿಕ್ಕು ಒಳ್ಳೆಯದು.

ಮನೆಯಲ್ಲಿ ಮಣ್ಣಿನ ವಸ್ತುಗಳಿಂದ ಈ ರೀತಿ ಮಾಡಿದರೆ ಆರ್ಥಿಕ ಸಮಸ್ಯೆಯ ಜೊತೆಗೆ ಮಾನಸಿಕ ಒತ್ತಡಗಳು ನಿವಾರಣೆಯಾಗುತ್ತದೆ ಹಾಗೂ ಸಾಕಷ್ಟು ಅನುಕೂಲತೆಗಳು ಕಂಡುಬರುತ್ತದೆ ಎಂದು ಹೇಳಲಾಗುತ್ತದೆ. ಮಣ್ಣಿನ ಮಡಿಕೆಯನ್ನು ಉತ್ತರದ ದಿಕ್ಕಿನಲ್ಲಿ ಇಡಬೇಕು ಅನ್ನುತ್ತಾರೆ. ಹೀಗೆ ಮಾಡಿದರೆ ಮನೆಯಲ್ಲಿ ಹಣದ ಕೊರತೆ ತಲೆದೋರುವುದಿಲ್ಲ ಆರ್ಥಿಕ ಲಾಭಗಳು ಹೆಚ್ಚಾಗುತ್ತದೆ. ಕುಬೇರನ ಅನುಗ್ರಹ ಹೊಂದಬಹುದು. (Source) ಮನೆಯಲ್ಲಿ ಮಡಿಕೆಯಿದ್ದರೆ ಬುಧ ಮತ್ತು ಚಂದ್ರನ ಸ್ಥಾನಗಳು ಬಲಪಡುತ್ತವೆ. ಮುಖ್ಯವಾದ ವಿಷಯವೆಂದರೆ ಮಡಿಕೆಯನ್ನು ಎಂದಿಗೂ ಖಾಲಿ ಬಿಡಬಾರದು.

ಜನ ತಮ್ಮ ಮನೆಗಳಲ್ಲಿ ತಂಪು ತಂಪಾದ ಕುಡಿಯುವ ನೀರು ಹಿಡಿದಿಡಲು ಮಣ್ಣಿನಿಂದ ಮಾಡಿದ ಮಡಿಕೆ ಅಥವಾ ಹೂಜಿಯನ್ನು ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಇಂದಿನ ಮನೆಗಳಲ್ಲಿ ಅವು ಮಾಯವಾಗಿವೆ. ಏಕೆಂದರೆ ರೆಫ್ರಿಜರೇಟರ್, ಕೂಲಿಂಗ್​ ಫಿಲ್ಟರ್​​ ಅಥವಾ ಜಸ್ಟ್​ ಬಾಟಲ್​ಗಳಲ್ಲಿ ನೀರು ಶೇಖರಿಸಿಟ್ಟುಕೊಂಡು ಕುಡಿಯುತ್ತಾರೆ. ಆದರೆ ವಾಸ್ತವವಾಗಿ ಮತ್ತು ವಾಸ್ತು ಪ್ರಕಾರ ಈ ಮಣ್ಣಿನಿಂದ ಮಾಡಿದ ಮಡಿಕೆಗಳನ್ನು ಬಳಸುವುದರಿಂದ ಪ್ರಯೋಜನಗಳಿವೆ. ಉತ್ತಮ ಆರೋಗ್ಯಕ್ಕೆ ಇದು ಹೇಳಿಮಾಡಿಸಿದಂತಿದೆ. ಅಷ್ಟೆ ಅಲ್ಲ; ಉತ್ತರದ ದಿಕ್ಕಿನ ವಾಸ್ತು ದೋಷನಿವಾರಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.   ವಾಸ್ತು ಶಾಸ್ತ್ರದ ಪ್ರಕಾರ ಈ ಮಡಿಕೆಗಳನ್ನು ಉಪಯೋಗಿಸಿದರೆ ಹಣಕಾಸು ತೊಂದರೆ ನಿವಾರಣೆಯಾಗುತ್ತದೆ. ಯಾವುದೇ ಕೆಲಸಕ್ಕೆ ಕೈಹಾಕಿದರೂ ಅದು ಸಫಲವಾಗುತ್ತದೆ.

ಛಾವಣಿಯ ಮೇಲೂ ಹಕ್ಕಿಗಳಿಗೆ ಮಣ್ಣಿನ ಮಡಕೆಯಲ್ಲಿ ಆಹಾರವನ್ನು ಇಡಿ. ಇದು ದುಡ್ಡಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ ಮತ್ತು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಅಕ್ಕಿಯನ್ನು ಮಣ್ಣಿನ ಮಡಕೆಯಲ್ಲಿ ಬೇಯಿಸಿದರೆ, ಲೋಹದ ಪಾತ್ರೆಗಿಂತಲೂ ಅಕ್ಕಿ ನಿಧಾನವಾಗಿ ಬೇಯುತ್ತದೆ. ಮಣ್ಣು ಶಾಖದ ಕಳಪೆ ವಾಹಕವಾಗಿರುವ ಕಾರಣ ಶಾಖದ ಆವಗೆಂಪು ಕಿರಣಗಳು ಒಳಗೆ ತಲುಪುವುದೇ ಇಲ್ಲ. ಹಾಗಾಗಿ, ಪಾತ್ರೆಯ ಒಳಗೆ ಬೇಯುತ್ತಿರುವ ಅಕ್ಕಿ ತನ್ನ ಮೂಲ ಗುಣವನ್ನು ಕಳೆದುಕೊಳ್ಳುವುದಿಲ್ಲ. ಇದೇ ಕಾರಣಕ್ಕೆ ಸ್ಟೀಲ್ ಅಥವಾ ಸಿರಾಮಿಕ್ ಪಾತ್ರೆಗಳಲ್ಲಿ ಮಾಡಿದ ಅನ್ನ ವಿಷಕಾರಿ ಎಂದು ಪರಿಗಣಿಸಲಾಗುತ್ತದೆ.

ಮಣ್ಣಿನ ಮಡಿಕೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು;
ನೀವು ಮನೆಗೆ ಹೊಸದಾದ ಮಡಕೆಯನ್ನು ತಂದಿದ್ದರೆ ವಿನ್ಯಾಸದ ಪ್ರಕಾರ ಅದನ್ನು ಸರಿಯಾದ ದಿಕ್ಕಿ(direction)ನಲ್ಲಿ ಇಡಬೇಕು. ಉತ್ತರ ಭಾಗವು ಕುಬೇರನಿಗೆ ಬಹಳ ಪ್ರಿಯವಾಗಿದೆ. ಅದಕ್ಕಾಗಿಯೇ ಮಣ್ಣಿನ ಮಡಕೆಯನ್ನು ಉತ್ತರ ಭಾಗದಲ್ಲಿ ಇಡಲು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆಯಾಗುವುದಿಲ್ಲ. ಕುಬೇರನ ಅನುಗ್ರಹ ಸಂಪೂರ್ಣವಾಗಿ ದೊರೆಯುತ್ತದೆ. ಉತ್ತರ ದಿಕ್ಕು ನೀರನ್ನು ಇಡಲು ಯಾವಾಗಲೂ ಪ್ರಶಸ್ತ ಸ್ಥಳ. ಅಲ್ಲದೆ, ಕಿವುಡುತನ ಸಮಸ್ಯೆಗಳಿಗೆ ಇದು ಉತ್ತಮ ಪರಿಹಾರವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಈ ಮಡಿಕೆಗಳನ್ನು ಉಪಯೋಗಿಸಿದರೆ ಹಣಕಾಸು ಮುಗ್ಗಟ್ಟು ನಿವಾರಣೆಯಾಗುತ್ತದೆ. ಯಾವುದೇ ಕೆಲಸಕ್ಕೆ ಕೈಹಾಕಿದರೂ ಯಶಸ್ಸು ದೊರಕುತ್ತದೆ.

ಮಣ್ಣಿನ ಪಾತ್ರೆಯಲ್ಲಿ ಬೇಯಿಸಿದ ಬಗೆ-ಬಗೆಯ ಪದಾರ್ಥ, ಖಾದ್ಯ ಹೆಚ್ಚು ರುಚಿಕರ, ಆರೋಗ್ಯಕ್ಕೂ ಉತ್ತಮ. ಅಂದಿನ ದಿನಗಳಲ್ಲಿ ಮಣ್ಣಿನಿಂದ ಮಾಡಿದ ಉತ್ಪನ್ನಗಳಿಗೆ ಎಲ್ಲಿಲ್ಲದ ಬೇಡಿಕೆಯಿತ್ತು. ಈಗಿನ ಜೆನೆರೇಶನ್‌ ಬಹುತೇಕವಾಗಿ ಅಲ್ಯುಮೀನಿಯಂ, ಸ್ಟೀಲ್‌ ಪಾತ್ರೆ ಖರೀದಿಗೆ ಮಾರುಹೋಗುತ್ತಿದ್ದಾರೆ.

ಕುಡಿಯುವ ನೀರನ್ನು ಕಡಿಮೆ ವೆಚ್ಚದಲ್ಲಿ ತಂಪಾಗಿಡಲು ಸುಲಭ ಹಾಗೂ ಸರಳ ವಿಧಾನ ಮಣ್ಣಿನ ಮಡಕೆ. ಬಿಸಿಲ ಬೇಗೆಗೆ ನಗರ-ಗ್ರಾಮೀಣ ಪ್ರದೇಶವೆನ್ನದೆ ಎಲ್ಲರೂ ಇದೀಗ ಮಣ್ಣಿನ ಫಿಲ್ಟರ್‌ ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ಮಣ್ಣಿನ ಮಡಿಕೆಯಲ್ಲಿ ನೀರು ತುಂಬಿಸಿಡುವುದು ಆರೋಗ್ಯಕರ ಮಾತ್ರವಲ್ಲದೆ ಫ್ಯಾಶನ್‌ ಆಗಿಯೂ ಬದಲಾಗಿದೆ. ಇದು ಕುಲಕಸುಬುದಾರರಿಗೆ ಪ್ರೋತ್ಸಾಹ ನೀಡಿದಂತಾಗುವುದಲ್ಲದೆ, ಸಂಸ್ಕೃತಿ ಮರುಕಳಿಸುವಂತೆಯೂ ಮಾಡಿದೆ.

ಫ್ರಿಜ್‌ ಇದ್ದರೂ ಕೆಲವರಿಗೆ ಮಣ್ಣಿನ ಮಡಕೆಯ ನೀರು ಕುಡಿದರೆ ಮಾತ್ರ ಸಮಾಧಾನ.ಬಿಸಿಲ ಬೇಗೆಗೆ ನಗರ-ಗ್ರಾಮೀಣ ಪ್ರದೇಶವೆನ್ನದೆ ಎಲ್ಲರೂ ಇದೀಗ ಮಣ್ಣಿನ ಫಿಲ್ಟರ್‌ ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ.ಮನೆಯಲ್ಲಿ ಮಣ್ಣಿನ ಮಡಿಕೆ ಇಡುವುದು ಸಂತೋಷ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಮಾತೆಯನ್ನು ಪೂಜಿಸುವ ಸಮಯದಲ್ಲಿ, ಅವಳ ಬಳಿ ಮಣ್ಣಿನ ದೀಪವನ್ನು ಬೆಳಗಿಸಿ. ಮನೆಯಲ್ಲಿ ಧನಾತ್ಮಕ ಶಕ್ತಿಯು ಹರಡುತ್ತದೆ ಮತ್ತು ಲಕ್ಷ್ಮಿ ದೇವಿಯು ಸಂತೋಷವಾಗಿರುತ್ತಾಳೆ ಮತ್ತು ಅವಳ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಮಣ್ಣಿನ ದೀಪವನ್ನು ಬೆಳಗಿಸುವುದರಿಂದ ಮನೆಯಲ್ಲಿ ದುಷ್ಟ ಶಕ್ತಿಗಳು ನಾಶವಾಗುತ್ತವೆ.

Related News

spot_img

Revenue Alerts

spot_img

News

spot_img