23.6 C
Bengaluru
Thursday, December 19, 2024

ಹೊಸ ಮನೆ ಖರೀದಿಸುವಾಗ ಅನುಸರಿಸಬೇಕಾದ ವಾಸ್ತು ನಿಯಮಗಳು

ಹೊಸಮನೆ ಕಟ್ಟುವುದು ಅಥವಾ ಖರೀದಿಸುವುದು ಎಲ್ಲರ ಕನಸಾಗಿರುತ್ತದೆ. ಕನಸಿನ ಮನೆ ಕಟ್ಟುವ ಸಂಭ್ರಮದಲ್ಲಿ ಈ ವಾಸ್ತು ನಿಯಮಗಳನ್ನು ಅನುಸರಿಸುವುದನ್ನು ಮರೆಯಬಾರದು

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ವಾಸ್ತುವಿಗೆ ಹೆಚ್ಚಿನ ಗಮನ ನೀಡುತ್ತಾರೆ. ಅದರಲ್ಲೂ ತಾವು ಜೀವನಪರ್ಯಂತ   ಕಳೆಯುವ ಮನೆಯು ವಾಸ್ತುಶಾಸ್ತ್ರದ ಪ್ರಕಾರ ಇದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಮರೆಯುವುದಿಲ್ಲ. ಮುಖ್ಯ ಬಾಗಿಲಿನ ಮೂಲಕ ಶಕ್ತಿಗಳು ಒಳಗೆ ಮತ್ತು ಹೊರಗೆ ಹರಿಯುತ್ತವೆ. ಮುಖ್ಯ ದ್ವಾರವನ್ನು ಹೊಂದಲು ಅನುಕೂಲಕರವಾದ ದಿಕ್ಕುಗಳು ಉತ್ತರ, ಪೂರ್ವ ಅಥವಾ ಈಶಾನ್ಯ. ನಿಮ್ಮ ಹೊಸ ಮನೆಯನ್ನು ಖರೀದಿಸುವ ಮೊದಲು ಸರಿಯಾಗಿದೆ ಇಲ್ಲವೇ ಎಂಬುದನ್ನೂ ಖಚಿತಪಡಿಸಿಕೊಳ್ಳಿ.

Vastu Tips: ಮನೆಯ ವಾಸ್ತು ದೋಷಗಳನ್ನು ಹೋಗಲಾಡಿಸಲು ಹಲವು ಪರಿಹಾರಗಳನ್ನು ನೀಡಲಾಗಿದೆ. ವಾಸ್ತು ಶಾಸ್ತ್ರದ ಪರಿಣಿತರ ಪ್ರಕಾರ ಮನೆ ಕೊಳ್ಳುವಾಗ ಅಥವಾ ಕಟ್ಟುವಾಗ ವಾಸ್ತು ನಿಯಮಗಳನ್ನು ಪಾಲಿಸಬೇಕು. ಇದನ್ನು ನಿರ್ಲಕ್ಷಿಸಿದರೆ ವಾಸ್ತು ದೋಷ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ನೀವು ಸಹ ನೂತನ ವರ್ಷದಲ್ಲಿ ಮನೆ ನಿರ್ಮಿಸಲು ಅಥವಾ ಖರೀದಿಸಲು ಯೋಚಿಸುತ್ತಿದ್ದರೆ, ಈ ವಾಸ್ತು ನಿಯಮಗಳು ನಿಮಗೆ ಉಪಯುಕ್ತವಾಗಬಹುದು.

1.ಮನೆಯ ದಿಕ್ಕು
ಮನೆಯ ಮುಖ್ಯ ದ್ವಾರವು ಉತ್ತರ, ಈಶಾನ್ಯ ಅಥವಾ ಪಶ್ಚಿಮದ ಕಡೆಗೆ ಇರುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ದಕ್ಷಿಣ, ನೈಋತ್ಯ, ವಾಯುವ್ಯ ಅಥವಾ ಆಗ್ನೇಯದಲ್ಲಿ ಮುಖ್ಯ ದ್ವಾರವನ್ನು ಹೊಂದಿರುವುದು ಅಶುಭ ಎಂದು ಹೇಳಲಾಗುತ್ತದೆ.

ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ದಕ್ಷಿಣಾಭಿಮುಖವಾಗಿರುವ ಮನೆಯನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನೆ ಕಟ್ಟುವಾಗ ಅಥವಾ ಖರೀದಿಸುವಾಗ ಈ ವಾಸ್ತು ನಿಯಮದ ಬಗ್ಗೆ ವಿಶೇಷ ಕಾಳಜಿ ವಹಿಸಿ.

2.ಮನೆಯ ಆಕಾರ ಹೀಗಿರಲಿ:
ಮನೆಯನ್ನು ಖರೀದಿಸುವಾಗ, ಮನೆಯನ್ನು ನಿರ್ಮಿಸುವ ಪ್ಲಾಟ್ ಅಥವಾ ಚೌಕಾಕಾರವಾಗಿದೆಯೇ ಅಥವಾ ಆಯತಾಕಾರವಾಗಿದೆಯೇ ಎಂಬುದನ್ನು ನೋಡಬೇಕು. ವಾಸ್ತು ಪ್ರಕಾರ, ಇದು ಅಡ್ಡ ಅಥವಾ ಓರೆಯಾಗಿರಬಾರದು. ತಪ್ಪಾಗಿ ಪ್ಲಾಟ್‌ಗಳನ್ನು ಖರೀದಿಸಬೇಡಿ.

3. ಮನೆಯ ಕೋಣೆಗಳ ದಿಕ್ಕು

ಮಾಸ್ಟರ್ ಬೆಡ್‌ರೂಮ್ ಅನ್ನು ನೈಋತ್ಯ ದಿಕ್ಕಿನಲ್ಲಿ ನಿರ್ಮಿಸಬೇಕು. ನಿಮ್ಮ ಮಕ್ಕಳ ಕೋಣೆಗಳು ಮನೆಯಲ್ಲಿ ನೈಋತ್ಯ ದಿಕ್ಕಿನಲ್ಲಿ ಇರಬೇಕು. ಮನಸ್ಸಿನ ಶಾಂತಿಗಾಗಿ ನಿಮ್ಮ ಮಕ್ಕಳು ದಕ್ಷಿಣ ಅಥವಾ ಪೂರ್ವಕ್ಕೆ ತಲೆಯಿಟ್ಟು ಮಲಗುವಂತೆ ನೋಡಿಕೊಳ್ಳಿ.

4.ಅಡುಗೆ ಮನೆಯ ದಿಕ್ಕು:
ಮನೆ ಖರೀದಿಸುವಾಗ ಮನೆಯ ಅಡುಗೆ ಮನೆ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಸಹ ನೋಡಿ. ಅಗ್ನಿ ಮೂಲೆಯನ್ನು ಅಡುಗೆಗೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಇದು ಆಗ್ನೇಯದಲ್ಲಿರುತ್ತದೆ. ಮನೆಯ ಅಡುಗೆ ಮನೆಯನ್ನು ಈ ದಿಕ್ಕಿಗೆ ಇಡುವುದರಿಂದ ಮಹಿಳೆಯರ ಆರೋಗ್ಯ ಸುಧಾರಿಸುತ್ತದೆ ಮತ್ತು ಲಕ್ಷ್ಮಿ ದೇವಿಯು ಮನೆಯಲ್ಲಿ ಸದಾ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ.

5.ಬೆಡ್ ರೂಮ್
ಸಾಮಾನ್ಯವಾಗಿ ಬೆಡ್‌ರೂಂ ಮನೆಯ ನೈಋತ್ಯ ದಿಕ್ಕಿನಲ್ಲಿದ್ದರೆ ಆರೋಗ್ಯ ಹಾಗೂ ಸಂಪತ್ತು ವೃದ್ಧಿಯಾಗುತ್ತದೆ ಎನ್ನಲಾಗುತ್ತದೆ. ಹಾಗೂ ಮನೆಯ ಯಜಮಾನನೂ ದೀರ್ಘಾಯುಷಿಯಾಗುತ್ತಾನೆ. ಆದರೆ ಬೆಡ್‌ರೂಂ ಈಶಾನ್ಯ ಹಾಗೂ ಆಗ್ನೇಯ ದಿಕ್ಕಿನಲ್ಲಿರಬಾರದು. ಆಗ್ನೇಯ ದಿಕ್ಕಿನಲ್ಲಿ ಬೆಡ್‌ರೂಂ ಇದ್ದರೆ ದಂಪತಿಗಳ ಮಧ್ಯೆ ಜಗಳಗಳು ಹೆಚ್ಚಾಗುತ್ತವೆ ಎನ್ನಲಾಗುತ್ತದೆ.

6.ಪೂಜಾಗೃಹ
ಮನೆಯಲ್ಲಿ ಪೂಜಾಗೃಹ(pooja room) ನಿರ್ಮಿಸಿದ್ದರೆ, ಶುಭ ಫಲ ಪಡೆಯಲು ಅಲ್ಲಿ ನಿಯಮಿತವಾಗಿ ಪೂಜೆ ಮಾಡಬೇಕು ಮತ್ತು ನೈಋತ್ಯ ದಿಕ್ಕಿನಲ್ಲಿ ನಿರ್ಮಿಸಲಾದ ಕೋಣೆ ಪೂಜೆಗೆ ಬಳಸಬಾರದು. ಇದರಿಂದ ಪೂಜೆಗೆ ಫಲ ಸಿಗೋದಿಲ್ಲ ಎನ್ನಲಾಗುತ್ತೆ. ಪೂಜೆಯ ಕೋಣೆ ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿರಬೇಕು. ಉತ್ತರ ಪೂರ್ವ ದಿಕ್ಕನ್ನು ಈಶಾನ್ಯ ಎಂದೂ ಕರೆಯುತ್ತಾರೆ ಮತ್ತು ಈ ದಿಕ್ಕಿನಲ್ಲಿ ಶಕ್ತಿಯ ಸಂಗ್ರಹವಿದೆ. ಈಶಾನ್ಯವನ್ನು ದೇವರ ದಿಕ್ಕು ಎಂದೂ ಕರೆಯುತ್ತಾರೆ. ಆದುದರಿಂದ ದೇವತೆಗಳ ಮನೆ ಅಂದರೆ ನಿಮ್ಮ ಮನೆಯ ದೇವಸ್ಥಾನವು ಈ ದಿಕ್ಕಿನಲ್ಲಿರಬೇಕು.

7. ಸೆಪ್ಟಿಕ್ ಟ್ಯಾಂಕ್ ನಿಮ್ಮ ಗಮನದಲ್ಲಿರಲಿ
ಸೆಪ್ಟಿಕ್ ಟ್ಯಾಂಕ್ ಅನ್ನು ನಿಮ್ಮ ಮನೆಯ ವಾಯುವ್ಯ ದಿಕ್ಕಿನಲ್ಲಿ ಮಾತ್ರ ಇಡಬೇಕು. ಯಾವುದೇ ಕಾರಣಕ್ಕೂ ಕಾಂಪೌಂಡ್ ಗೋಡೆಗೆ ತಾಗದಂತೆ ನೋಡಿಕೊಳ್ಳಿ. ಮನೆಗಾಗಿ ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಸೆಪ್ಟಿಕ್ ಟ್ಯಾಂಕ್ ಅನ್ನು ನಿಮ್ಮ ಕೌಂಪೌಂಡ್‌ ಗೋಡೆಯಿಂದ ಎರಡು ಅಡಿ ದೂರದಲ್ಲಿ ಇಡಬೇಕು. ಅದು ಧನಾತ್ಮಕ ಶಕ್ತಿಯನ್ನು ತುಂಬುತ್ತದೆ.

​8.ಸ್ನಾನ ಗೃಹದ ದಿಕ್ಕು:
ಸ್ನಾನ ಗೃಹವನ್ನು ನಿರ್ಮಿಸುವಾಗ ಮನೆಯ ನಿರ್ಮಾಣದಲ್ಲಿ ಪೂರ್ವ, ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಇರಬೇಕು. ವಾಸ್ತು ಪ್ರಕಾರ ಸ್ನಾನ ಮಾಡಲು ಉತ್ತರ ದಿಕ್ಕು ಅತ್ಯಂತ ಸೂಕ್ತವಾದ ಸ್ಥಳ ಎಂದು ಹೇಳಲಾಗುವುದು.

Related News

spot_img

Revenue Alerts

spot_img

News

spot_img