25.6 C
Bengaluru
Monday, December 23, 2024

ಈ ಕಾರಣಗಳಿಗಾಗಿ ಆಸ್ತಿಯಲ್ಲಿ ಹೂಡಿಕೆ ಮಾಡಿರಿ…

ಜನಪ್ರಿಯ ಮತ್ತು ವ್ಯಾಪಕವಾಗಿ ಬಳಕೆಯಲ್ಲಿರುವ ಪರ್ಯಾಯ ಆಸ್ತಿ ವಿಭಾಗ ಎಂದರೆ ರಿಯಲ್ ಎಸ್ಟೇಟ್. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ಸದ್ಯದ ಆರ್ಥಿಕ ಸ್ಥಿತಿಗತಿಯಲ್ಲಿ, ರಿಯಲ್‌ ಎಸ್ಟೇಟ್‌ನಲ್ಲಿ ಏಕೆ ಹೂಡಿಕೆ ಮಾಡಬೇಕು ಎಂಬ ಪ್ರಮುಖ ಕಾರಣಗಳು ಇಲ್ಲಿವೆ.

1. ಪ್ರತಿಷ್ಠೆ, ಹಣ, ಅಧಿಕಾರದ ಸಂಕೇತ
ಚಿನ್ನದ ಜೊತೆಗೆ, ಹಣವನ್ನು ಸುರಕ್ಷಿತವಾಗಿಸುವ ಮತ್ತೊಂದು ವಿಧಾನ ರಿಯಲ್‌ ಎಸ್ಟೇಟ್‌ ಹೂಡಿಕೆ. ಆಧುನಿಕ ಜಗತ್ತಿನಲ್ಲಿ ಹೂಡಿಕೆಯ ಸಾಕಷ್ಟು ಹೊಸ ಮಾದರಿಗಳು ಹುಟ್ಟಿಕೊಂಡಿವೆ. ಆದರೆ ಪ್ರತಿಯೊಬ್ಬರಿಗೂ ವಾಸಕ್ಕೆ ಒಂದು ಸ್ಥಳಾವಕಾಶ ಬೇಕಿರುವುದರಿಂದ ರಿಯಲ್‌ ಎಸ್ಟೇಟ್‌ ಅತ್ಯಗತ್ಯ. ಇದರಲ್ಲಿನ ಹೂಡಿಕೆಯಿಂದ ಹಣವನ್ನು ಸೂಕ್ತ ಮಾರ್ಗದಲ್ಲಿ ಹೂಡಿಕೆ ಮಾಡಿದಂತಾಗುವುದರ ಜೊತೆಗೆ, ಭವಿಷ್ಯದ ಅಗತ್ಯವನ್ನೂ ಪೂರೈಸುತ್ತದೆ. ರಿಯಲ್‌ ಎಸ್ಟೇಟ್ ಮಾಲೀಕತ್ವವು ಪ್ರತಿಷ್ಠೆ, ಹಣ ಮತ್ತು ಅಧಿಕಾರದ ಸಂಕೇತವಾಗಿದೆ.

2. ತೆರಿಗೆ ಲಾಭಗಳು
ರಿಯಲ್ ಎಸ್ಟೇಟ್‌ಗೆ ನೀಡಲಾದ ತೆರಿಗೆ ವಿನಾಯಿತಿಗಳು ಆದಾಯವನ್ನು ಸಮತೋಲನಗೊಳಿಸಬಹುದು ಮತ್ತು ಒಟ್ಟಾರೆ ತೆರಿಗೆ ವೆಚ್ಚವನ್ನು ಕಡಿಮೆ ಮಾಡಬಹುದು. ಬಾಡಿಗೆ ಆದಾಯವು ಸ್ವಯಂ ಉದ್ಯೋಗ ತೆರಿಗೆಗಳಿಗೆ ಒಳಪಟ್ಟಿಲ್ಲ. ಅದೂ ಅಲ್ಲದೇ, ಸರ್ಕಾರವು ಅಡಮಾನ ಸಾಲದ ಬಡ್ಡಿ, ವಿಮೆ, ನಿರ್ವಹಣೆ ಮತ್ತು ದುರಸ್ತಿ ವೆಚ್ಚಗಳು ಹಾಗೂ ಆಸ್ತಿ ಸವಕಳಿಗೆ ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ದೀರ್ಘಾವಧಿಯ ಹೂಡಿಕೆಗಳಿಗಾಗಿ, ರಿಯಲ್ ಎಸ್ಟೇಟ್ ಹೂಡಿಕೆದಾರರು ಕಡಿಮೆ ತೆರಿಗೆ ಪಾವತಿಸುತ್ತಾರೆ.

3. ಸಣ್ಣ ಬಂಡವಾಳ
ಆಸ್ತಿ ಖರೀದಿಗೆ ಸಣ್ಣ ಪ್ರಮಾಣದ ಸ್ವಂತ ಹಣವನ್ನು ಹೂಡಿಕೆ ಮಾಡುವ ಸಾಮರ್ಥ್ಯ ಮತ್ತು ಹೆಚ್ಚುವರಿ ಅಗತ್ಯವಿರುವ ಹಣಕ್ಕಾಗಿ ಸಾಲ ಮಾಡುವ ಅವಕಾಶ ಇರುವುದು ರಿಯಲ್‌ ಎಸ್ಟೇಟ್‌ ಹೂಡಿಕೆಯಲ್ಲಿನ ಪ್ರಮುಖ ಅನುಕೂಲ. ಉಳಿತಾಯದ ಹಣವನ್ನು ಡೌನ್‌ ಪೇಮೆಂಟ್‌ಗಾಗಿ ಬಳಸಿಕೊಂಡು, ಉಳಿದ ಹಣಕ್ಕಾಗಿ ಅಡಮಾನ ಸಾಲ ಪಡೆಯಬಹುದು.

4. ಭೌತಿಕ ಆಸ್ತಿ
ಭೌತಿಕ ಆಸ್ತಿಯಾದ ರಿಯಲ್ ಎಸ್ಟೇಟ್ನ ಪ್ರಬಲ ಮತ್ತು ಸ್ಪಷ್ಟವಾದ ಆಸ್ತಿ ಮೌಲ್ಯವು, ಕನಿಷ್ಠ ಅಥವಾ ಯಾವುದೇ ಸ್ಪಷ್ಟವಾದ ಮೌಲ್ಯವನ್ನು ಹೊಂದಿರದ ಷೇರುಗಳಂತಹ ಇತರ ಹೂಡಿಕೆಗಳಿಗೆ ಹೋಲಿಸಿದಲ್ಲಿ ಶಾಶ್ವತ ಭದ್ರತೆಯನ್ನು ನೀಡುತ್ತದೆ; ಏಕೆಂದರೆ ಅದರ ಮೌಲ್ಯವು ಎಂದಿಗೂ ಕುಸಿಯುವುದಿಲ್ಲ. ರಿಯಲ್ ಎಸ್ಟೇಟ್ ಯಾವುದೇ ದುಸ್ತರ ಹಣಕಾಸಿನ ಅಡೆತಡೆಗಳನ್ನು ಹೊಂದಿಲ್ಲ. ತೆರಿಗೆ ಪ್ರಯೋಜನಗಳ ಕಾರಣ, ಹಣಕಾಸು ಅಗತ್ಯ ಪೂರೈಸಲು ಮತ್ತು ಜೀವನಶೈಲಿ ಸುಧಾರಿಸಲು ಅನುಕೂಲಕರವಾಗಿದೆ.

5. ಹಣಕಾಸು ಭದ್ರತೆಯ ಭಾವ
ರಿಯಲ್‌ ಎಸ್ಟೇಟ್ನಲ್ಲಿಯೂ ಏರಿಳಿತಗಳಿವೆ. ಆದರೆ ಹೂಡಿಕೆ ದೀರ್ಘಾವಧಿಗೆ ಇದ್ದರೆ ಅದರ ಮೌಲ್ಯ ಹೆಚ್ಚಳವಾಗುತ್ತದೆ. ಹಲವರು ತಮ್ಮ ನಿವೃತ್ತಿ ಅವಧಿಯ ಆದಾಯವನ್ನು ಹೆಚ್ಚಿಸಲು ರಿಯಲ್ ಎಸ್ಟೇಟ್ ಹೂಡಿಕೆ ಮಾಡುತ್ತಾರೆ

6. ವಾರಸುದಾರರಿಗೆ ಬಿಟ್ಟುಹೋಗಬಹುದು
ಸಾಧ್ಯವಿದ್ದರೆ ಆಸ್ತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಅತ್ಯುತ್ತಮ ಮಾದರಿ ಆಗಿದೆ. ಆದಾಯ ತರುವ ಆಸ್ತಿಯನ್ನು ಮುಂದಿನ ತಲೆಮಾರಿಗೆ ಬಿಟ್ಟುಹೋಗುವುದು ಮಾತ್ರವಲ್ಲದೇ, ಆಸ್ತಿ ಮೌಲ್ಯವೂ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತದೆ.

Related News

spot_img

Revenue Alerts

spot_img

News

spot_img