ಅಡುಗೆ ಮನೆ ಇಡೀ ಮನೆಯ ಆರೋಗ್ಯ ತಾಣ. ಇಡೀ ಮನೆಯ ಮಂದಿಯ ಆರೋಗ್ಯ ಅಡಗಿರುವ ಅಡುಗೆ ಮನೆಯಲ್ಲಿ ಹದವಾಗಿ ಬೆಂದು, ಹುರಿದ, ಕುದಿದ, ಘಮ ಘಮ ಪರಿಮಳದ ಅಡುಗೆ ನಾಲಿಗೆ ರುಚಿ ತಣಿಸುವುದರ ಜೊತೆಯಲ್ಲಿ ಮನೆ ಮಂದಿಯ ಗೆಲ್ಲುವ ರಹಸ್ಯ ಜಾಗವು ಹೌದು.
ಇದೀಗ ಕಾಲಘಟಕ್ಕೆ ಅನುಗುಣವಾಗಿ ಅಡುಗೆ ಮನೆಯ ಚಿತ್ರಣ ಬದಲಾಗುವುದರ ಜೊತೆಯಲ್ಲಿ ಎಲ್ಲಾ ಕಾಲದ ತರಹೇವಾರಿ ಅಡುಗೆ ಕ್ಷಣ ಮಾತ್ರದಲ್ಲಿ ಸಿದ್ಧವಾಗುತ್ತದೆ. ಹೀಗೆ ಆಹಾರ ಸಿದ್ಧವಾಗುವ ಅಡುಗೆ ಮನೆಯು ಮಾಡ್ಯುಲರ್ ಕಿಚನ್ ರೂಪ ಪಡೆದುಕೊಳ್ಳುತ್ತಿದ್ದು, ನೂತನ ವಿನ್ಯಾಸದೊಂದಿಗೆ ಇಡೀ ಮನೆಗೊಂದು ಬೆಸ್ಟ್ ಲುಕ್ ನೀಡುತ್ತದೆ.
ಮನೆಯ ಚಟುವಟಿಕೆಯು ಬೆಳಿಗ್ಗೆ ಪ್ರಾರಂಭವಾಗಿ ರಾತ್ರಿಯಲ್ಲಿ ಕೊನೆಗೊಳ್ಳುವುದು ಅಡುಗೆ ಮನೆಯಲ್ಲಿ. ಪ್ರಸ್ತುತ ದಿನಗಳಲ್ಲಿ, ಪ್ರತಿ ಚದರ ಇಂಚಿನ ಮನೆಯ ಜಾಗವು ಅತ್ಯಂತ ಮೌಲ್ಯಯುತವಾಗಿದೆ, ಲಭ್ಯವಿರುವ ಜಾಗದಲ್ಲಿ ನಿಮ್ಮ ಕುಟುಂಬಕ್ಕೆ ಉತ್ತಮವಾದ ಅಡುಗೆಮನೆಯನ್ನು ವಿನ್ಯಾಸಗೊಳಿಸಲು ಬಹಳಷ್ಟು ಚಿಂತನೆ ಮತ್ತು ಕಲ್ಪನೆಗಳು ಬೇಕಾಗುತ್ತದೆ.
ಈ ಹಿಂದೆಯೆಲ್ಲಾ ಅಡುಗೆ ಮನೆಗೆಂದೇ ಒಂದು ಕೋಣೆಯನ್ನು ಮಾಡಲಾಗುತ್ತಿತ್ತು. ಇದೀಗ ಹಾಗಿಲ್ಲ, ಒಪನ್ ಕಿಚನ್ ಹೆಚ್ಚು ಟ್ರೆಂಡಿಯಾಗಿದ್ದು, ಎಲ್ ಆಕಾರದ ಅಥವಾ ಸಮಾನಾಂತರ (ಪ್ಯಾರಲಲ್) ರೂಪದ ವಿನ್ಯಾಸ ಜನಪ್ರಿಯಗೊಳ್ಳುತ್ತಿದೆ. ಇದು ಅಡುಗೆ ಮನೆ ದೊಡ್ಡದಿರಲಿ, ಚಿಕ್ಕದಿರಲಿ ಎಲ್ಲಾ ರೀತಿಯ ಅಡುಗೆ ಮನೆಗಳಿಗೆ ಹೊಂದಿಕೊಳ್ಳುವ ಒಂದು ಉತ್ತಮ ಮಾದರಿಯಾದರೂ ಸಣ್ಣ ಸ್ಥಳಗಳಿಗೆ ಸೂಕ್ತವಾದ ವಿನ್ಯಾಸಗಳಲ್ಲಿ ಒಂದಾಗಿದೆ.
ಮಾನವ್ ರಚನಾ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ರಿಸರ್ಚ್ ಅಂಡ್ ಸ್ಟಡೀಸ್‌ನ ಫ್ಯಾಕಲ್ಟಿ ಆಫ್ ಆರ್ಕಿಟೆಕ್ಚರ್ ಅಂಡ್ ಡಿಸೈನ್ ವಿಭಾಗದ ಮುಖ್ಯಸ್ಥರಾದ ಶ್ರುತಿ ಜೈನ್, ಈ ಅಡಿಗೆಮನೆಗಳನ್ನು ವಿನ್ಯಾಸಗೊಳಿಸುವಾಗ ಪರಿಗಣಿಸಬೇಕಾದ ಕೆಲವು ಅಂಶಗಳನ್ನು ಪಟ್ಟಿ ಮಾಡಿದ್ದಾರೆ:
1. ಎರಡು ಸಮಾನಾಂತರ ಕೌಂಟರ್‌ಗಳ ನಡುವೆ ಕನಿಷ್ಠ 3 ಅಡಿಯಿಂದ 4 ಅಡಿ ಅಂತರವನ್ನು ಇಡಬೇಕು. ಅಡುಗೆ ಸ್ಟೌವ್ ಮತ್ತು ರೆಫ್ರಿಜರೇಟರ್ ವಿರುದ್ಧವಾಗಿ ಇರಿಸಬೇಕು. ಸಿಂಕ್ ಗೆ ಅಡುಗೆ ಸ್ಟೌವ್ ಬದಿಯ ಅಂತ್ಯಕ್ಕೆ ಆದ್ಯತೆ ನೀಡಬೇಕು. ಈ ಜಾಗವನ್ನು ಹೆಚ್ಚಾಗಿ ಸದುಪಯೋಗಪಡಿಸಿಕೊಳ್ಳುವ ರೀತಿಯಲ್ಲಿ ಅಂಡರ್ ಕೌಂಟರ್ ಮಾಡ್ಯುಲರ್ ಫಿಟ್ಟಿಂಗ್ ಗಳನ್ನು ಎಚ್ಚರಿಕೆಯಿಂದ ಯೋಜಿಸಬೇಕು.
2. ತಿಳಿ ಬಣ್ಣಗಳು ಮತ್ತು ಛಾಯೆಗಳು ಜಾಗವನ್ನು ಹೆಚ್ಚು ದೊಡ್ಡದಾಗಿ ಕಾಣುವಂತೆ ಮಾಡುತ್ತವೆ. ಬೆಳಕು ವಿಶಾಲವಾಗಿ ಇರುವಲ್ಲಿ ಗಾಢ ಬಣ್ಣಗಳ ಬಳಕೆಯನ್ನು ಸೂಚಿಸಲಾಗುತ್ತದೆ. ಗಾಢವಾದ ಬಣ್ಣದಿಂದ ಕೌಂಟ್ರಿಸ್ ಮತ್ತು ತಿಳಿ ಬಣ್ಣದ ಡ್ಯುಯಲ್ ಶೇಡ್ ವಿನ್ಯಾಸ ಸಾಕಷ್ಟು ಟ್ರೆಂಡಿಯಾಗಿ ಕಾಣುತ್ತದೆ. ಅಡಿಗೆಮನೆಗಳನ್ನು ವಿನ್ಯಾಸಗೊಳಿಸುವಾಗ ಕಾಂಟ್ರಸ್ಟ್ ಮಹಡಿಗಳು, ಕೌಂಟರ್ ಟಾಪ್ ಗಳನ್ನು ಕಾರ್ ಕೇಸ್ ಬಣ್ಣಗಳಿರುವಂತೆ ನೋಡಿಕೊಳ್ಳಿ
3. ಅಡುಗೆಮನೆಯಲ್ಲಿ ಸೂಕ್ತವಾದ ಬೆಳಕು ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದಾಗ್ಯೂ, ಮರೆಮಾಚುವ ಸೀಲಿಂಗ್ ದೀಪಗಳು ಮತ್ತು ಪ್ರೊಫೈಲ್ ದೀಪಗಳು ಮನೆಯ ಪ್ರಮುಖ ಸ್ಥಳವಾದ ಅಡುಗೆಮನೆಗೆ ಪರಿಪೂರ್ಣ ಬೆಳಕನ್ನು ಒದಗಿಸುತ್ತದೆ.
4. ಕುಟುಂಬದ ಅಗತ್ಯತೆಗಳು, ಸ್ಥಳದ ನಿರ್ಬಂಧಗಳು, ಹಣಕಾಸು ಮತ್ತು ಇತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಡಿಗೆಮನೆಗಳಿಗೆ ಉತ್ತಮ ವಿನ್ಯಾಸವನ್ನು ತರಲು ಸಹಾಯ ಮಾಡುತ್ತದೆ.
ವಿನ್ಯಾಸದ ಸೌಂದರ್ಯಶಾಸ್ತ್ರ ಮತ್ತು ಕಾರ್ಯಚಟುವಟಿಕೆಗೆ ಸಂಬಂಧಿಸಿದಂತೆ ಸಮಾನಾಂತರ ಅಡುಗೆಮನೆಯು ಮಾಡ್ಯುಲರ್ ಕಿಚನ್ ವಿನ್ಯಾಸದ ಅತ್ಯುತ್ತಮ ರೂಪವಾಗಿದೆ ಎಂದು ಪ್ರತಿಪಾದಿಸಿದ ವುರ್ಫೆಲ್‌ನ ಸಹ-ಸಂಸ್ಥಾಪಕ ಖನೀಂದ್ರ ಬರ್ಮನ್, ಇತ್ತೀಚಿನ ದಿನಗಳಲ್ಲಿ ಅತ್ಯಂತ ಜನಪ್ರಿಯ ಅಡುಗೆ ಮನೆ ವಿನ್ಯಾಸ – ಐಲ್ಯಾಂಡ್ ಕಿಚನ್ ಸಹ ಸಮಾನಾಂತರದಿಂದ ಪಡೆಯಲಾಗಿದೆ ಎಂದು ಹೇಳಿದರು.
1. ಕೆಲಸದ ಸ್ಥಳ: ಸಮಾನಾಂತರ ಅಡುಗೆಮನೆಯು ನಿಮಗೆ ಹೆಚ್ಚು ಕೌಂಟರ್ ಜಾಗವನ್ನು ಒದಗಿಸುತ್ತದೆ, ಇದು ಕೆಲಸಕ್ಕೆ ಅಗತ್ಯವಾದ ಹೆಚ್ಚುವರಿ ಸ್ಥಳವನ್ನು ಹೊಂದಲು ಅನುವು ಮಾಡಿಕೊಡುತ್ತದೆ ಮತ್ತು ಅದೇ ಸಮಯದಲ್ಲಿ ಕೌಂಟರ್‌ಟಾಪ್‌ನ ಕೆಳಗೆ ಅಥವಾ ಕೌಂಟರ್ ಟಾಪ್‌ಗಳ ಮೇಲಿನ ಗೋಡೆಯಲ್ಲಿ ನಿಮಗೆ ಸಾಕಷ್ಟು ವಸ್ತುಗಳನ್ನು ಇರಿಸಿಕೊಳ್ಳಲು ಸಹ ಸಹಾಯಕವಾಗಲಿದೆ.
2. ಅಡುಗೆಗೆ ಸುಲಭ: ಸಮಾನಾಂತರ ಅಡುಗೆ ವಿನ್ಯಾಸವು ತ್ರಿಕೋನ ರೂಪದಲ್ಲಿ ಅಂದರೆ ಸ್ಟೌವ್, ಸಿಂಕ್ ಮತ್ತು ರೆಫ್ರಿಜರೇಟರ್ ಅನ್ನು ಪರಿಪೂರ್ಣ ಕೈಗೆಟಕುವ ರೀತಿಯಲ್ಲೇ ರೂಪಿಸಲು ಅನುಮತಿಸುತ್ತದೆ. ಇನ್ನು ಮುಂದುವರೆದು ಅಡುಗೆಮನೆಯ ಒಂದು ಬದಿಯ ಮಧ್ಯಭಾಗದಲ್ಲಿ ಸ್ವೌವ್ ಮತ್ತು ಹಿಂಭಾಗದಲ್ಲಿ ಸಿಂಕ್ ಮತ್ತು ರೆಫ್ರಿಜರೇಟರ್ ಅನ್ನು ಹೊಂದಿದ್ದರೆ ಈ ಅಡುಗೆ ಮನೆಯ ಸ್ವರೂಪವು ಅತ್ಯಂತ ಪರಿಣಾಮಕಾರಿ ಮತ್ತು ಅಡುಗೆಗೆ ಆರೋಗ್ಯಕರವಾಗಿದೆ.
3. ಜನಸ್ನೇಹಿ ಅಡುಗೆ ಮನೆ: ಸಮಾನಾಂತರ ಅಡುಗೆಮನೆಯಲ್ಲಿ ಹಲವಾರು ಮಂದಿ ಏಕಕಾಲದಲ್ಲಿ ನಿಂತು ಅಡುಗೆ ಮಾಡಬಹುದಾಗಿರುವುದರಿಂದ ಜನಸ್ನೇಹಿ ಅಡುಗೆ ಮನೆ. ಒಂದೇ ಅಡುಗೆಮನೆಯಲ್ಲಿ 2-3 ಕ್ಕಿಂತ ಹೆಚ್ಚು ಜನರಿಗೆ ಕೆಲಸ ಮಾಡಲು ಸ್ಥಳವಿರುವುದರಿಂದ ತರಕಾರಿ ಕತ್ತರಿಸುವ, ಪೂರ್ವ-ತಯಾರಿ, ಮಿಶ್ರಣ ಮಾಡುವುದು ಹೀಗೆ ನಾನಾ ಕಾರ್ಯಗಳು ಒಂದೇ ವೇಳೆಯಲ್ಲಿ ಮುಗಿಯುತ್ತದೆ.