#Announcement # Congress #candidates# First list # 39 candidates #published
ನವದೆಹಲಿ;ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಲೋಕಸಭೆ ಚುನಾವಣೆಗೆ ಕಾಂಗ್ರೆಸ್(Congress) ತನ್ನ 39 ಅಭ್ಯರ್ಥಿಗಳನ್ನು ಘೋಷಿಸಿದೆ. ಅಭ್ಯರ್ಥಿಗಳ ಪೈಕಿ 15 ಜನ ಸಾಮಾನ್ಯ ವರ್ಗದವರು ಮತ್ತು ಉಳಿದ 24 ಮಂದಿ ಎಸ್‌ಸಿ(SC), ಎಸ್‌ಟಿ(ST) ಮತ್ತು ಒಬಿಸಿ(OBC) ವರ್ಗದವರು. ಇಂದು (ಮಾರ್ಚ್ 08) ನವದೆಹಲಿಯ ಎಐಸಿಸಿ(AICC) ಕಚೇರಿಯಲ್ಲಿ ಕೆ.ಸಿ.ವೇಣುಗೇಪಾಲ್, ಅಜಯ್ ಮಕೇನ್, ಪವನ್ ಖೇರಾ ಅವರು ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು. ಮೊದಲ ಪಟ್ಟಿಯಲ್ಲಿ 15 ಸಾಮಾನ್ಯ ವರ್ಗದವರಿಗೆ, 24 ಎಸ್ಸಿ, ಎಸ್ಟಿ ಓಬಿಸಿ ಹಾಗೂ ಮೈನಾರಿಟಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದರು.ದೇಶದ ಯುವ ಜನತೆಗೆ ಉದ್ಯೋಗವನ್ನು ಒದಗಿಸುವ ನಿಟ್ಟಿನಲ್ಲಿ ನಾವು ನೆರವಾಗಲಿದ್ದೇವೆ. 30 ಲಕ್ಷ ಉದ್ಯೋಗವನ್ನು ಯುವ ನ್ಯಾಯ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ನೀಡಲಾಗುತ್ತದೆ ಎಂದರು.
ಕರ್ನಾಟಕದ 7 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
ಚಿತ್ರದುರ್ಗ – ಬಿಎನ್ ಚಂದ್ರಪ್ಪ
ಬಿಜಾಪುರ – ಹೆಚ್ ಆರ್ ರಾಜು ಆಲಗೂರು
ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್
ಹಾಸನ- ಎಂ. ಶ್ರೇಯಸ್ ಪಟೇಲ್
ತುಮಕೂರು – ಮುದ್ದಹನುಮೇಗೌಡ
ಮಂಡ್ಯ – ವೆಂಕಟರಾಮೇಗೌಡ ( ಸ್ಟಾರ್ ಮಂಜು)
ಬೆಂಗಳೂರು ಗ್ರಾಮಾಂತರ – ಡಿ.ಕೆ ಸುರೇಶ್
ತೆಲಂಗಾಣ
ಝಹೀರಾಬಾದ್ – ಸುರೇಶ್ ಕುಮಾರ್ ಶೆಟ್ಕರ್
ನಾಲ್ಗೊಂಡ – ರಘುವೀರ್ ಕುಂದುರು
ಮೆಹಬೂಬ್ ನಗರ್ – ಚೆಲ್ಲವಂಶಿ ಚಂದ್ರ ರೆಡ್ಡಿ
ಮೆಹಬೂಬ್ ಬಾದ್ – ಬಲರಾಂ ನಾಯ್ಕ್ ಪೊರಿಕ
ಛತ್ತೀಸ್ ಗಢ :
ಜಾನ್ ಗಿರ್ ಚಾಂಪ – ಡಾ ಶಿವಕುಮಾರ್ ದಹರಿಯಾ
ಕೋರ್ಬಾ – ಜ್ಯೋತ್ಸ್ನಾ ಮಹಂತ್
ರಜ್ನಾನ್ದೊಗಾಂವ್ – ಭೂಪೇಶ್ ಬಘೇಲ್
ದುರ್ಗ್ – ರಾಜೇಂದ್ರ ಸಾಹು
ರಾಯ್ಪುರ – ವಿಕಾಸ್ ಉಪಾಧ್ಯಾಯ್
ಮಹಾಸಮುಂದ್ – ತಾಮರ್ ಧ್ವಜ್ ಸಾಹು
ಕೇರಳ
ಕಾಸರಗೋಡು – ರಾಜ್ ಮೋಹನ್ ಉನ್ನಿತಾನ್
ಕಣ್ಣೂರು – ಕೆ ಸುಧಾಕರನ್
ವಡಕರ – ಶಾಫಿ ಪರಂಬಿಲ್
ವಯನಾಡ್ – ರಾಹುಲ್ ಗಾಂಧಿ
ಕೋಝಿಕ್ಕೋಡ್ – ಎಂ ಕೆ ರಾಘವನ್
ಪಾಲಕ್ಕಾಡ್ – ವಿ ಕೆ ಶೀಕಂಠನ್
ಅಲತೂರು – ರೆಮ್ಯಾ ಹರಿದಾಸ್
ತ್ರಿಶೂರು – ಕೆ ಮುರುಳೀಧರನ್
ಚಾಲಾಕುಡಿ – ಬೆನ್ನಿ ಬಹನ್ನಾನ್
ಎರ್ನಾಕುಲಂ – ಹಿಬಿ ಏಡನ್
ಆಲಪ್ಪುಳ – ಕೆ ಸಿ ವೇಣುಗೋಪಾಲ್
ಇಡುಕ್ಕಿ – ಡೀನ್ ಕುರಿಯಾಕೋಸ್
ಮಾವೆಲಿಕರ – ಕೋಡಿಕುನ್ನಿಲ್ ಸುರೇಶ್
ಪಟ್ಟಣಂತಿಟ್ಟ – ಆಂಟೊ ಆಂಟೋನಿ
ಅಟ್ಟಿಂಗಲ್ – ಅಡೂರು ಪ್ರಕಾಶ್
ತಿರುವನಂತಪುರಂ – ಶಶಿ ತರೂರ್
ಲಕ್ಷದ್ವೀಪ – ಮುಹಮ್ಮದ್ ಹಂದುಲ್ಲಾ ಸಯೀದ್
ಮೇಘಾಲಯ :
ಶಿಲ್ಲಾಂಗ್ – ವಿನ್ಸೆಂಟ್ ಎಚ್ ಪಾಲ
ತುರಾ – ಸಲೇಂಗ್ ಅ ಸಂಗ್ಮಾ
ನಾಗಲ್ಯಾಂಡ್ – ಎಸ್ ಸುಪೋಗ್ಮೆರೆನ್ ಜಮಿರ್
ಸಿಕ್ಕಿಂ – ಗೋಪಾಲ್ ಚೆಟ್ರಿ
ತ್ರಿಪುರ (ವೆಸ್ಟ್) – ಆಶೀಶ್ ಕುಮಾರ್ ಸಾಹಾ