ನಟಿ-ಮಾಡೆಲ್ ಪೂನಂ ಪಾಂಡೆ ನಿಧನ-ಗರ್ಭಕೋಶದ ಕ್ಯಾನರ್ ಗೆ ಬಲಿ
ವಿವಾದಿತ ನಟಿ ಅಂತಾನೇ ಖ್ಯಾತಿ ಪಡೆದಿದ್ದ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಇವತ್ತು ನಿಧನರಾಗಿದ್ದಾರೆ. 32 ವರ್ಷದ ಪೂನಮ್ ಪಾಂಡೆ ಗರ್ಭಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಪೂನಂ ಉತ್ತರ ಪ್ರದೇಶದ ಕಾನ್ಪುರದ ತಮ್ಮ ನಿವಾಸದಲ್ಲೇ ಕೊನೆಯುಸಿರೆಳಿದ್ದಾರೆ. ಇವರ ನಿಧನದ ಸುದ್ದಿಯನ್ನು ಪೂನಮ್ ಅವರ ಮ್ಯಾನೇಜರ್ ಅಧಿಕೃತವಾಗಿ ಖಚಿತ ಪಡಿಸಿದ್ದಾರೆ
ನಟಿ ಪೂನಂ ಪಾಂಡೆ ಅವರ ಬಗ್ಗೆ ಹೇಳಬೇಕು ಅಂದರೆ, ಇವರು ತಮ್ಮ ಬೋಲ್ಡ್ ನಟನೆಯಿಂದಲೇ ಹೆಸರುವಾಸಿ ಆಗಿದ್ದರು. ಅಲ್ಲದೇ ಸದಾ ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಗಮನ ಸೆಳೆಯುತ್ತಿದ್ದರು. ಇನ್ನು ಪೂನಂ ಪಾಂಡೆ ಮೂಲತಃ ಬಿಹಾರದವರು ಆದರೆ ಬೆಳೆದಿದ್ದು ಮಾತ್ರ ಮುಂಬೈನಲ್ಲಿ. ಮುಂಬೈನಲ್ಲಿ ಬೆಳೆದಿದ್ದರಿಂದ ಸಹಜವಾಗಿ ಬಣ್ಣದ ಬದುಕಿಗೆ ಬಹು ಬೇಗನೆ ಕಾಲಿಟ್ಟರು. ಮೊದಲಿಗೆ ನಶಾ ಅನ್ನೋ ಸಿನಿಮಾದಿಂದ ಬಣ್ಣದ ಲೋಕಕ್ಕೆ ಎಂಟ್ರಿ ಆದರು. ಬಳಿಕ ಭೋಜ್ ಪುರಿಯ ಅದಾಲತ್, ಟಾಲಿವುಡ್ ನಲ್ಲಿ ಮಾಲಿನಿ ಆ್ಯಂಡ್ ಕೋ ಅನ್ನೋ ಸಿನಿಮಾಗೆ ಬಣ್ಣ ಹಚ್ಚಿದ್ರು. ಅಲ್ಲದೇ ಹಿಂದಿಯ ಜಿಎಸ್ ಟಿ- ಗಲ್ತಿ, ಸಿರ್ಫ್ ದಿ ಜರ್ನಿ ಅಫ್ ಕರ್ಮ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರಿಂದ ಸೈ ಅನ್ನಿಸಿಕೊಂಡಿದ್ದರು. 2011ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದರೆ ತಾವು ಸಂಪೂರ್ಣವಾಗಿ ಬೆತ್ತಲಾಗುವುದಾಗಿ ಹೇಳಿ ಸುದ್ದಿ ಮಾಡಿದ್ರು.
ಇನ್ನು ಸ್ಯಾಂಡಲ್ ವುಡ್ ನಲ್ಲೂ ಇವರು ನಟಿಸಿದ್ದು, ಲವ್ ಇಸ್ ಪಾಯ್ಸನ್ ಅನ್ನೋ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ರು. ಆದ್ರೆ ತಮ್ಮ ಸಣ್ಣ ವಯಸ್ಸಿನಲ್ಲೇ ಗರ್ಭಕೋಶದ ಕ್ಯಾನ್ಸರ್ ಇವರನ್ನ ಆವರಿಸಿಕೊಂಡು ಬಿಟ್ಟಿತ್ತು ಅನ್ನೋದು ಮಾತ್ರ ದುರಂತ.