ಬೆಂಗಳೂರು: ಯಾವುದೇ ಸ್ಥಿರ ಸ್ವತ್ತುಗಳಿಗೆ ಸಂಬಂಧಿಸಿದಂತೆ ಸರ್ಕಾರದ ಕಡೆಯಿಂದಾಗಲೀ ಅಥವಾ ಪಾರ್ಟಿಗಳ ನಡುವೆ ವಿವಾದಗಳು ಸೃಷ್ಟಿಯಾದರೆ, ಅಂತಹವರು ನೋಂದಣಿ ಮಾಡದಂತೆ ಉಪ ನೋಂದಣಾಧಿಕಾರಿಗಳಿಗೆ ತಹಶೀಲ್ದಾರ್ ರವರಿಗೆ ಅಥವಾ ಬೇರೆ ಸರ್ಕಾರಿ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸುವುದು ಸಾಮಾನ್ಯ. ಇಲ್ಲವೇ ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತರುತ್ತಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದಾಸ್ತುವೇಜುಗಳನ್ನು ನೋಂದಣಿ ಮಾಡಬಹುದೇ ? ಅಥವಾ ಮಾಡಬಾರದಾ ? ಕಾನೂನು ಹೇಳು ಹೇಳುತ್ತದೆ. ನ್ಯಾಯಾಲಯದ ತೀರ್ಪುಗಳು ಏನು ಹೇಳಿವೆ ಎಂಬ ಸಮಗ್ರ ವಿವರ ಇಲ್ಲಿದೆ.
ಯಾವುದೇ ಸ್ಥಿರಾಸ್ತಿ ಅಥವಾ ವಸ್ತುಗಳ ನೋಂದಣಿಗೆ ಸಂಬಂಧಿಸಿದಂತೆ ಆಕ್ಷೇಪಣೆ, ತಕರಾರು ಅರ್ಜಿ ಸಲ್ಲಿಸಿದ ಬಳಿಕ ಕೆಲವು ಅಧಿಕಾರಿಗಳು ಸ್ಥಿರ ಸ್ವತ್ತಿಗೆ ಸಂಬಂಧಸದಿಂತೆ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ತೀರ್ಮಾನ ತೆಗೆದುಕೊಳ್ಳಲು ಗೊಂದಲ ಉಂಟಾಗಿ ಇಕ್ಕಟ್ಟಿಗೆ ಸಿಲುಕುತ್ತಾರೆ.
ಇಂತಹ ಸಂದರ್ಭದಲ್ಲಿ ಅರ್ಜಿ ಕೊಟ್ಟು ಪಾರ್ಟಿಗಳು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರಲು ಪ್ರಯತ್ನಿಸುತ್ತಾರೆ. ಹಾಗೂ ನ್ಯಾಯಾಲಯಗಳು ಕೆಲವು ಪ್ರಕರಣಗಳಲ್ಲಿ ತಡೆಯಾಜ್ಞೆಗಳನ್ನು ಸಹ ನೀಡಿರುತ್ತದೆ.
ವಾಸ್ತವದಲ್ಲಿ ನ್ಯಾಯಾಲಯ ನೀಡುವ ತಡೆಯಾಜ್ಞೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ಅದು ಅರ್ಜಿದಾರ ಮತ್ತು ಪ್ರತಿವಾದಿಗಳಿಗೆ ಮಾತ್ರ ಸಂಬಂಧಸಿದ ತಡೆಯಾಜ್ಞೆ ಆಗಿರುತ್ತದೆ. ಭಾರತೀಯ ನೋಂದಣಿ ಕಾಯ್ದೆ 1908 ಮತ್ತು ಇದರಲ್ಲಿ ರಚಿತವಾದ ಕರ್ನಾಟಕ ನೋಂದಣಿ ನಿಯಮದ ಪ್ರಕಾರ, ಸರ್ಕಾರವಾಗಲೀ, ನ್ಯಾಯಾಲಯಗಳಾಗಲೀ, ಉಪ ನೋಂದಣಾಧಿಕಾರಿಗಳಿಗೆ ಅಥವಾ ಭೂಮಿಯ ಕಾನೂನು ವ್ಯವಹರಿಸುವ ಅಧಿಕಾರಿಗಳಿಗಾಗಿ ಕೆಲಸ ಮಾಡಬೇಡಿ. ನೋಂದಣಿ ಮಾಡಬೇಡಿ ಎಂದು ಎಂದು ಹೇಳಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ಭಾರತೀಯ ನೋಂದಣಿ ಕಾನೂನು ಕಂದಾಯ ಅಧಿಕಾರಿಗಳಿಗೆ ನೀಡಿರುವ ಅಧಿಕಾರವನ್ನೇ ಮರೆತು ಕೆಲವರು ನೋಂದಣಿ ಮಾಡದೇ ಕೆಲಸ ಕಳೆದುಕೊಂಡಿದ್ದಾರೆ. ಇನ್ನೂ ಕೆಲವು ಪ್ರಕರಣದಲ್ಲಿ ನ್ಯಾಯಾಧೀಶರೇ ನೋಂದಣಿ ಪ್ರಕ್ರಿಯೆಗೆ ಅಡ್ಡಿ ಪಡಿಸಿ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಹೀಗಾಗಿ ಸ್ಥಿರ ಸ್ವತ್ತುಗಳ ನೋಂದಣಿ ಸಂಬಂಧಸಿದಂತೆ ನ್ಯಾಯಾಲಯ ನೀಡುವ ತಡೆಯಾಜ್ಞೆ – ತೀರ್ಪು ಕೇವಲ ಅರ್ಜಿದಾರ ಮತ್ತು ಪ್ರತಿವಾದಿಗೆ ಸಂಬಂಧಿಸಿರುತ್ತದೆ.
ದಾಸ್ತವೇಜುಗಳ ನೋಂದಣಿ ಸಂಬಂಧ ಉಪ ನೋಂದಣಾಧಿಕಾರಿಗಳಿಗೆ ಇರುವ ಅಧಿಕಾರ ( ಕಂದಾಯ ಸಂಗ್ರಹ ಅಧಿಕಾರಿಗಳು)ದ ಬಗ್ಗೆ ನ್ಯಾಯಾಲಯದ ಪ್ರಕರಣವೊಂದು ಉಲ್ಲಿ ಸ್ಪಷ್ಟವಾಗಿ ತಿಳಿಸುತ್ತದೆ. ದಾಸ್ತವೇಜು ನೋಂದಣಿ ಸಂಬಂಧ ನ್ಯಾ. ಯು.ಬಿ. ಸನ್ನದಿ ಮುನ್ಸಿಪ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶರು ಚನ್ನಗಿರಿ ಇವರು ಉಪ ನೋಂದಣಾಧಿಕಾರಿ ಚನ್ನಗಿರಿ ಇವರಿಗೆ ಕೆಲವು ದಾಸ್ತವೇಜು ನೋಂದಣಿ ಮಾಡದಂತೆ ನಿರ್ದೇಶನ ನೀಡಿದ್ದರು
ಇದನ್ನು ಗಂಭಿರವಾಗಿ ಪರಿಗಣಿಸಿದ ಸರ್ಕಾರ, ಈ ವಿಚಾರವನ್ನು ಅಂದಿನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ವರದಿ ಮಾಡಿದ್ದು, ಮುಖ್ಯ ನ್ಯಾಯಾಧೀಶರು, ಇಲಾಖಾ ವಿಚಾರಣೆ, ನಡೆಸಿದ್ದರು. ಯು.ಬಿ. ಸನ್ನದಿ ಅವರು ಉಪ ನೋಂದಣಾಧಿಕಾರಿಗಳಿಗೆ ನೋಂದಣಿ ಮಾಡಬಾರದು ಎಂದು ನಿರ್ದೇಶನ ನೀಡಿರುವುದು ತಪ್ಪು ಎಂಬ ಆರೋಪ ಸಾಬೀತಾಯಿತು. ಈ ಬಗ್ಗೆ ಅಂದಿನ ರಾಜ್ಯಪಾಲರಿಗೆ ವರದಿ ನೀಡಿದ್ದು, ಮುನ್ಸಿಪಲ್ ನ್ಯಾಯಾಧೀಶರನ್ನು ಕರ್ತವ್ಯದಿಂದ ಬಿಡುಗಡೆಮಾಡಲಾಗಿತ್ತು. ಈ ಪ್ರಕರಣದ ತಾತ್ಪರ್ಯ ವೇನೆಂದರೆ, ಆಸ್ತಿ ನೋಂದಣಿಗೆ ತಡೆಯೊಡ್ಡುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ ( ಕೆಲವು ಕ್ರಿಮಿನಲ್ ಅಪರಾಧ ಪರಕರಣ ಹೊರತು ಪಡಿಸಿ) ಎಂಬುದನ್ನು ತೋರುತ್ತದೆ.
ನೋಂದಣಿ ಕಾಯ್ದೆ ಮತ್ತು ನಿಯಮಗಳು, ಮುದ್ರಾಂಕ ಕಾಯ್ದೆ ಮತ್ತು ನಿಯಮಗಳು ಇವುಗಳ ಮೂಲ ಉದ್ದೇಶ ಸರ್ಕಾರರಕ್ಕೆ ರಾಜ್ಯಸ್ವ ಸಂಗ್ರಹ ಮಾಡುವುದು. ನೋಂದಣಿ ಆಗುವುದರಿಂದ ಸರ್ಕಾರದ ನಂಬಿಕೆಗೆ ಸಾಕ್ಷಿ ಸೃಷ್ಟಿಯಾಗುತ್ತದೆ. ಯಾವುದೇ ನೋಂದಣಿಯಾಗಲೀ , ಖಾತಾ ಆಗಲೀ, ಕಂದಾಯ ಕಟ್ಟಿದ ತಕ್ಷಣ, ಕಾನೂನು ಪ್ರಕಾರ ಸ್ವತ್ತುಗಳ ಬರವಣಿಗೆ ಕ್ರಮ ಬದ್ಧವಾಗಿಲ್ಲದಿದ್ದರೆ, ಆ ಸ್ವತ್ತು ಸರಿಯಾದ ವರ್ಗಾವಣೆ ಆಗುವುದಿಲ್ಲ. ದಾಸ್ತವೇಜುಗಳು ಕಾನೂನುಬದ್ಧವಾಗಿರಬೇಕು. ಮುದ್ರಾಂಕ ಕಾಯ್ದೆ , ಯಾವುದೇ ಸುಂಕ ಪಡೆಯುವರ ಬಳಿ ಸುಃಖ ದುಖಃ ನಡೆಯುವುದಿಲ್ಲ ಎಂಬ ಗಾದೆ ಅನ್ವಯ ನೊಂದಣಿಯನ್ನು ಯಾವುದೇ ಅಧಿಕಾರಿ ನಿಲ್ಲಿಸಲಾಗುವುದಿಲ್ಲ. ನಿಲ್ಲಿಸುವ ಅಧಿಕಾರವೂ ಇಲ್ಲ.
ಎರಡನೇ ಘಟನೆ : ಚಾಮರಾಜನಗರ ನ್ಯಾಯಾಲಯ:
ಒಎಸ್ ನಂಬರ್ 123/1.12-2012 ನ್ಯಾಯಾಲಯದಲ್ಲಿ ತಡೆಯಾಜ್ಞೆ ನೀಡಿದ್ದು, ಆದ್ದರಿಂದ ನೋಂದಣಿ ಮಾಡಲಾಗುವುದಿಲ್ಲ ಎಂದು ನೋಂದಣಾಧಿಕಾರಿ ಹಿಂಬರಹ ನಿಡಿರುತ್ತಾರೆ. ನೋಂದಣಾಧಿಕಾರಿ ಹಿಂಬರಹ ಪ್ರಶ್ನಿಸಿ ಅರ್ಜಿದಾರ ಹೈಕೋರ್ಟ್ ನಲ್ಲಿ ರಿಟ್ ಸಲ್ಲಿಸಿದ್ದರು. ಹೈಕೊರ್ಟ್ ನೋಂದಣಿ ಮಾಡುವಂತೆ ಸೂಚಿಸಿತ್ತು. ಅಂದರೆ, ದಾಸ್ತವೇಜುಗಳ ನೋಂದಣಿಗೆ ತಡೆಯಾಜ್ಞೆ ನೀಡಲು ಬರುವುದಿಲ್ಲ ಎಂಬುದನ್ನು ಈ ತೀರ್ಪು ಸ್ಪಷ್ಟಪಡಿಸುತ್ತದೆ.
ಖಾತಾ ಇಲ್ಲದಿದ್ದರೂ ನೋಂದಣಿ ಮಾಡಬಹುದು:
ನ್ಯಾಯಾಲಯದ ಪ್ರಕರಣಕ್ಕೂ, ದಾಸ್ತವೇಜಿನ ನೋಂದಣಿಗೂ ಯಾವುದೇ ರೀತಿ ಸಂಬಂಧವಿಲ್ಲ. ದಾಸ್ತವೇಜು ಹಾಜರು ಪಡಿಸಿದರೆ, ದಾಖಲೆಗಳನ್ನು ನೋಂದಣಿ ಮಾಡಲೇಬೇಕು. ಕಂದಾಯ ಇರಲೀ, ಬಿಡಲಿ, ಖಾತೆ ಇರಲಿ, ಬಿಡಲಿ, ಕೇರಿಗೌಡvs ಇತರರು, RSA – 798/2006, 26=06-2018 ರಲ್ಲಿ ಖಾತಾ ಇಲ್ಲದಿದ್ದರೂ ನೋಂದಣಿ ಮಾಡಲು ಹೈಕೋರ್ಟ್ ನಿರ್ದೇಶನ ನೀಡಿದೆ.
ಲೋಕಾಯುಕ್ತರ ಆದೇಶ :
ಗೌರವಾನ್ವಿಯ ಉಪ ಲೋಕಾಯುಕ್ತರು, 2020 ರಲ್ಲಿ ಒಂದು ಪ್ರಕರಣದಲ್ಲಿ ಸ್ವತ್ತಿನಲ್ಲಿ ಸಮಸ್ಯೆ ಇದ್ದರೂ, ಆದರೂ ಉಪ ನೋಂದಣಾಧಿಕಾರಿ ವಿರುದ್ಧ ದೂರು ನೀಡಿದ್ದರು. ಸ್ವತ್ತಿಗೆ ಸಂಬಂಧಿಸಿದಂತೆ ಸಮಸ್ಯೆ ಇದ್ದರೆ ನ್ಯಾಯಾಲಯದಲ್ಲಿ ಬಗೆ ಹರಿಸಿಕೊಳ್ಳಬೇಕು. ಉಪ ನೋಂದಣಾಧಿಕಾರಿ ನೋಂದಣಿ ತಡೆಯಲು ಸಾಧ್ಯವಿಲ್ಲ ಉಪ ನೋಂದಣಾಧಿಕಾರಿ ಕ್ರಮ ಸರಿಯಿದೆ ಎಂದು ತೀರ್ಮಾನ ಮಾಡಿರುತ್ತಾರೆ.
ಒಟ್ಟಾರೆ ಎಲ್ಲಾ ಪ್ರಕರಣಗಳು ಹೇಳುವುದು ಒಂದೇ. ಒಂದು ದಾಸ್ತವೇಜಿಗೆ ಸಂಬಂಧಿಸಿದಂತೆ ಇಬ್ಬರು ಪಾರ್ಟಿಗಳು ಒಪ್ಪಿ ಲಿಖಿತ ದಾಖಲೆ ಸಲ್ಲಿಸಿದರೆ, ಅದನ್ನು ನೋಂದಣಾಧಿಕಾರಿಗಳು ನೋಂದಣಿ ಮಾಡಬೇಕು. ನ್ಯಾಯಾಲಯ ಸಹ ನೋಂದಣಿ ವಿಚಾರದಲ್ಲಿ ಹಸ್ತಕ್ಷೇಮ ಮಾಡುವಂತಿಲ್ಲ ಎಂಬುದನ್ನು ಈ ಮೇಲಿನ ಪ್ರಕರಣಗಳು ಹೇಳುತ್ತವೆ.