#Post Office #MIS Scheme #Earn income #every month # plan
ಬೆಂಗಳೂರು;ಪೋಸ್ಟ್ ಆಫೀಸ್‌ನಲ್ಲಿ(Postoffice) ಸಾಕಷ್ಟು ಉಳಿತಾಯ ಯೋಜನೆಗಳಿವೆ. ಇಲ್ಲಿಟ್ಟ ಹಣ ಸೇಫಾಗಿರುತ್ತೆ. ಜೊತೆಗೆ ಒಳ್ಳೆ ಬಡ್ಡಿ(Intrest) ಕೂಡ ಬರುತ್ತೆ.ಈ ವಿಶೇಷ ಯೋಜನೆಗಳಲ್ಲಿ ಒಂದು ಹೂಡಿಕೆದಾರರಿಗೆ(investors) ಬಡ್ಡಿಯ ಮೂಲಕ ಮಾತ್ರ ಲಕ್ಷಗಳನ್ನು ಗಳಿಸಲು ಸಹಾಯ ಮಾಡುತ್ತದೆ.ಅಂಚೆ ಕಚೇರಿಯಲ್ಲಿ ಉತ್ತಮ ಹೂಡಿಕೆ ಯೋಜನೆಗಳಿವೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಪ್ರತಿ ತಿಂಗಳು ಸ್ಥಿರ ಆದಾಯವನ್ನು ಹೊಂದಿರುತ್ತೀರಿ ಮತ್ತು ಅದೇ ಸಮಯದಲ್ಲಿ ನಿಮ್ಮ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಶೇಕಡಾ 7.5 ರಷ್ಟು ಬಡ್ಡಿ ದರದೊಂದಿಗೆ ಈ ಪೋಸ್ಟ್ ಆಫೀಸ್ ಯೋಜನೆಯು ಅತ್ಯುತ್ತಮ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಮಾಸಿಕ ಉಳಿತಾಯ ಯೋಜನೆ (Monthly Savings Scheme) ಎಂದರೆ, ನಿಶ್ಚಿತ ಆದಾಯವನ್ನು ಕೊಡುವಂತಹ ಒಂದು ಯೋಜನೆ ಆಗಿದೆ. ಈ ಯೋಜನೆಯ ಅವಧಿ ಐದು ವರ್ಷಗಳು.
ನೀವು ಸಣ್ಣ ವಯಸ್ಸಿನಿಂದಲೇ ಹೂಡಿಕೆ ಆರಂಭಿಸಿದರೆ ಈ ಯೋಜನೆಯ ಅಡಿಯಲ್ಲಿ ಐದು ವರ್ಷಗಳ ಮೆಚುರಿಟಿ(Meturity) ಅವಧಿಯಲ್ಲಿ ಲಕ್ಷಗಟ್ಟಲೆ ಹಣ ಸಂಪಾದಿಸಿಕೊಳ್ಳಲು ಸಾಧ್ಯವಿದೆ.ಹೂಡಿಕೆದಾರರು ವಿವಿಧ ಅವಧಿಗಳಿಗೆ ಪೋಸ್ಟ್ ಆಫೀಸ್(Postoffice)ನ ಈ ಉಳಿತಾಯ ಯೋಜನೆಯಲ್ಲಿ(Savings Plan) ಹೂಡಿಕೆ ಮಾಡಬಹುದು.ಮಾಸಿಕ ಆದಾಯ ಯೋಜನೆಯಲ್ಲಿ(MIS) ತೆರೆಯಲಾದ ಖಾತೆಯನ್ನು ನೀವು ಏಕಾಂಗಿಯಾಗಿ ಅಥವಾ ನಿಮ್ಮ ಜೀವನ ಸಂಗಾತಿಯೊಂದಿಗೆ ಎರಡೂ ರೀತಿಯಲ್ಲಿ ತೆರೆಯಬಹುದು. ಈ ಯೋಜನೆಯಲ್ಲಿ ಇಬ್ಬರು ಅಥವಾ ಮೂರು ಜನರು ಜಂಟಿಯಾಗಿ ಖಾತೆಯನ್ನು ತೆರೆಯಬಹುದು. ನೀವು ವೈಯಕ್ತಿಕ ಖಾತೆಯಲ್ಲಿ ಕನಿಷ್ಠ 1,000 ರೂ. ಮತ್ತು ಗರಿಷ್ಠ 4.5 ಲಕ್ಷ ರೂ.ಗಳನ್ನು POMIS ಅಡಿಯಲ್ಲಿ ಹೂಡಿಕೆ ಮಾಡಬಹುದು. ಜಂಟಿ ಖಾತೆಯಲ್ಲಿ(Jointaccount) ಗರಿಷ್ಠ ಹಣದ ಮಿತಿ 9 ಲಕ್ಷ ರೂಪಾಯಿಗಳವರೆಗೆ ಇರುತ್ತದೆ.ಹತ್ತಿರದ ಅಂಚೆ ಕಚೇರಿಗೆ(Postoffice) ಹೋಗಿ ನಿಮ್ಮ ಉಳಿತಾಯ ಖಾತೆಯನ್ನು (Savings Account) ತೆರೆಯಬಹುದು. ಮಾಸಿಕ ಆದಾಯ ಯೋಜನೆಗಾಗಿ ಪ್ರತ್ಯೇಕ ಫಾರ್ಮ್ ಅನ್ನು ಭರ್ತಿ ಮಾಡಬೇಕು. POMIS ನ ಫಾರ್ಮ್ ಅನ್ನು ಭರ್ತಿ ಮಾಡುವಾಗ ನಿಮಗೆ ಗುರುತಿನ ಚೀಟಿ, ವಸತಿ ಪುರಾವೆ, 2 ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರಗಳು ಬೇಕಾಗುತ್ತವೆ. ಫಾರ್ಮ್ ಅನ್ನು ಭರ್ತಿ ಮಾಡುವಾಗ ನಿಮಗೆ ಸಾಕ್ಷಿಯೂ ಬೇಕಾಗುತ್ತದೆ. ಖಾತೆಯನ್ನು ತೆರೆಯುವಾಗ ನೀವು ನಾಮಿನಿಯ ಹೆಸರನ್ನು ಭರ್ತಿ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ. ನಾಮಿನಿಯ ಹೆಸರನ್ನು ಭರ್ತಿ ಮಾಡಿದ ನಂತರ ಅವರ ಸಹಿಯೂ ಅಗತ್ಯವಾಗಿರುತ್ತದೆ.