ಬೆಂಗಳೂರು;ಹೊಸ ವರ್ಷದ ಹಿನ್ನೆಲೆ ಡಿ. 31ರಂದು ಒಂದೇ ದಿನದಲ್ಲಿ BMRCL ಬರೋಬ್ಬರಿ 1 ಕೋಟಿ 64 ಲಕ್ಷದ 74 ಸಾವಿರದ 918 ರೂಪಾಯಿ ಆದಾಯ ಹರಿದು ಬಂದಿತ್ತು. ಇದೀಗ ನಮ್ಮ ಮೆಟ್ರೋ ಇಡೀ ಡಿಸೆಂಬರ್ ತಿಂಗಳ ಆದಾಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಡಿಸೆಂಬರ್ ನಲ್ಲಿ ನಮ್ಮ ಮೆಟ್ರೋಗೆ ಬರೋಬ್ಬರಿ 2 ಕೋಟಿ ಜನರು ಮೆಟ್ರೋ ಬಳಕೆ ಮಾಡಿದ್ದು ₹55 ಕೋಟಿ ಆದಾಯ ಸಂಗ್ರಹವಾಗಿದೆ ಅಂತಾ ನಮ್ಮ ಮೆಟ್ರೋ ಮಾಹಿತಿ ಹಂಚಿಕೊಂಡಿದೆ.ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ನಮ್ಮ ಮೆಟ್ರೋ ಮೊದಲ ಬಾರಿಗೆ ಒಂದೇ ತಿಂಗಳಲ್ಲಿ ಅತ್ಯಧಿಕ ತೆನ ಪ್ರಯಾಣಿಕರಿಗೆ ಸೇವೆ ನೀಡುವ ಮೂಲಕ ದಾಖಲೆ ಬರೆದಿದೆ. ಡಿಸೆಂಬರ್ ಒಂದೇ ತಿಂಗಳಲ್ಲಿ ಬರೋಬ್ಬರಿ 2 ಕೋಟಿ ಜನರು ಸಹ ಮೆಟ್ರೋ(Metro) ಬಳಕೆ ಮಾಡಿದ್ದಾರೆ. ದಿನಕ್ಕೆ ಸರಾಸರಿ 6.88 ಲಕ್ಷ ಜನರು ಸಂಚಾರ ಮಾಡಿದ್ದಾರೆ. ವರ್ಷದ ಕೊನೆ ತಿಂಗಳಾದ ಡಿಸೆಂಬರ್‌ನಲ್ಲಿ 55 ಕೋಟಿ ಆದಾಯ ಹರಿದುಬಂದಿದ್ದರೆ, ಒಟ್ಟು ಪ್ರಯಾಣಿಕರ ಸಂಖ್ಯೆ ಕ್ಕೆ 2,13,34,076 ಆಗಿದೆ. ಇದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.30ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ಬಿಎಂಆರ್‌ಸಿಎಲ್ 7 ಅಧಿಕಾರಿಗಳು ತಿಳಿಸಿದ್ದಾರೆ.ಈ ವರ್ಷ ಜನವರಿಯಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಯ ಗಡಿ ಮುಟ್ಟಲಿದೆ ಎಂಬ ವಿಶ್ವಾಸ ಬಿಎಂಆರ್‌ಸಿಎಲ್(BMRCL) ವ್ಯಕ್ತಪಡಿಸಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ಭಾರಿ ಜನಸಂದಣಿ ಕಂಡು ಬರುತ್ತಿದೆ. ಪೀಕ್ ಸಮಯದಲ್ಲಂತೂ ಮೆಟ್ರೋ ರೈಲುಗಳು ತುಂಬಿ ತುಳುಕುತ್ತಿರುತ್ತವೆ.ದೈನಂದಿನ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಸರಾಸರಿ ದೈನಂದಿನ ನಿಮ್ಮ ಪ್ರಯಾಣಿಕರ ಸಂಖ್ಯೆ ಈಗ 64,000ರಷ್ಟು ಹೆಚ್ಚಾಗಿದೆ ಎನ್ನಲಾಗಿದೆ. ಮೇ ಆದರೆ, ಇದು ಮೂರು ತಿಂಗಳ ಹಿಂದಷ್ಟೇ ತೆರೆಯಲಾದ ನೇರಳೆ ಮಾರ್ಗದ ಕಾರ್ಯಾಚರಣೆ ನಂತರದ ನಿರೀಕ್ಷಿತ ಹೆಚ್ಚಳ ಅಲ್ಲ