25.4 C
Bengaluru
Thursday, November 21, 2024

Vastu Tips: ಮನೆಗಾಗಿ ವಾಸ್ತು ಶಾಸ್ತ್ರದ ಪ್ರಮುಖ ಸಲಹೆಗಳು

#Vastu Tips #Important Vastu #Shastra tips# home

ಬೆಂಗಳೂರು: ನಮ್ಮ ಬದುಕಿನ ಮೇಲೆ ವಾಸ್ತು ಬಹಳ ಗಾಢವಾದ ಪರಿಣಾಮ ಬೀರುತ್ತದೆ.ನಿರ್ಮಾಣದ ಸಮಯದಲ್ಲಿ ಎಲ್ಲಾ ಸಮಯದಲ್ಲೂ ಮನೆಗಾಗಿ ವಾಸ್ತು ಶಾಸ್ತ್ರವನ್ನು ನಿರ್ವಹಿಸಲು ಬಿಲ್ಡರ್‌ಗಳಿಗೆ ಸಾಧ್ಯವಿಲ್ಲ. ಆದಾಗ್ಯೂ, ಬಿಲ್ಡರ್‌ಗಳು ಅದರ ಕಡೆಗೆ ಗಮನಾರ್ಹವಾದ ಗಮನವನ್ನು ನೀಡುತ್ತಾರೆ,ಈಗಿರುವ ಮನೆಯೊಳಗೆ ಕೆಲವೊಂದು ವ್ಯವಸ್ಥೆಗಳನ್ನು ಬದಲಾಯಿಸುವ ಮೂಲಕವೂ ವಾಸ್ತು ಉತ್ತಮಪಡಿಸಿಕೊಳ್ಳಬಹುದು. ಮನೆಯಲ್ಲಿ ಹಣಕಾಸು ಸಂಕಷ್ಟ ಹೆಚ್ಚಾಗಿದ್ದರೆ ಅದಕ್ಕೆ ವಾಸ್ತು ದೋಷ ಕಾರಣವಾಗಿರಬಹುದು. ಮನುಷ್ಯನಿಗೆ ನೆಮ್ಮದಿ, ಶಾಂತಿ, ಸಮಾಧಾನ ಎಂಬ ಬೆಲೆ ಕಟ್ಟಲಾಗದ ವಿಷಯಗಳನ್ನು ಕೊಡುವ ಮನೆ ಎಲ್ಲಾ ರೀತಿಯಲ್ಲೂ ಸುಭದ್ರವಾಗಿರಬೇಕು ಎಂದರೆ ಅದರಲ್ಲಿ ಕಲ್ಲು, ಇಟ್ಟಿಗೆ, ಮರಳು ಎಷ್ಟು ಮುಖ್ಯವೋ ವಾಸ್ತು ಕೂಡ ಅಷ್ಟೇ ಮುಖ್ಯವಾಗುತ್ತದೆ. ಮನೆ ಕಟ್ಟುವಾಗ ವಾಸ್ತುಗಳನ್ನು (Vastu) ಗಮನಿಸಬೇಕು.ಮನೆಯಲ್ಲಿ ಸಂಪತ್ತು, ಸಮೃದ್ಧಿ, ಐಶ್ವರ್ಯ ಹೆಚ್ಚಾಗಲು ಕೆಲವೊಂದು ವಾಸ್ತು ಸಲಹೆ ಅನುಸರಿಸುವುದು ಸೂಕ್ತವಾಗಿದೆ.

ವಾಸ್ತು ದೋಷಗಳನ್ನು ಎದುರಿಸುತ್ತಿದ್ದರೆ ವಾಸ್ತು ಶಾಸ್ತ್ರದ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಅದನ್ನು ನಿವಾರಣೆ ಮಾಡಬಹುದು ನೋಡಿ

ವಿಂಡ್ ಚೈಮ್ಸ್

ವಾಸ್ತು ಶಾಸ್ತ್ರದ ಪ್ರಕಾರ, ಸ್ಫಟಿಕ ಚೆಂಡುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.ವಿಂಡ್ ಚೈಮ್ಸ್ ನಿಮ್ಮ ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ.ಸ್ಫಟಿಕ ಚೆಂಡುಗಳು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತವೆ ಮತ್ತು ಮನೆಗೆ ಅದೃಷ್ಟವನ್ನು ತರುತ್ತವೆ ಎಂದು ನಂಬಲಾಗಿದೆ. ನಿಮಗೆ ಸಂಬಂಧದ ಸಮಸ್ಯೆಗಳಿದ್ದರೆ ಗುಲಾಬಿ ಬಣ್ಣದ ಸ್ಫಟಿಕ ಚೆಂಡನ್ನು ತನ್ನಿ.ವಿಂಡ್ ಚೈಮ್ ಅನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ನೇತುಹಾಕಬೇಕು. ವಿಂಡ್ ಚೈಮ್ನಲ್ಲಿನ ತಂತಿಗಳ ಸಂಖ್ಯೆಯನ್ನು ಸಹ ಗಮನಿಸಬೇಕು.ಮನೆಯ ವಾಯವ್ಯ ದಿಕ್ಕಿನಲ್ಲಿ ವಿಂಡ್ ಚೈಮ್ ಅನ್ನು ಅಳವಡಿಸಿ. ಇನ್ನು ಏಳು ಪೈಪ್‌ಗಳಿರುವ ವಿಂಡ್ ಚೈಮ್ ಅನ್ನು ಮನೆ ಅಥವಾ ಕಚೇರಿಯ ಪಶ್ಚಿಮ ದಿಕ್ಕಿನಲ್ಲಿ ಅಳವಡಿಸಿ. ಕಟ್ಟಡದ ಎಲ್ಲಾ ಮೂಲೆಗಳಲ್ಲಿ ವಿಂಡ್ ಚೈಮ್ ಅನ್ನು ತೂಗುಹಾಕುವಂತಿಲ್ಲ ಎಂದು ಫೆಂಗ್ ಶುಯಿ ತಿಳಿಸುತ್ತದೆ.

ಸಮುದ್ರದ ಉಪ್ಪು

ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ರಾಹು ಮತ್ತು ಕೇತುಗಳ ದುಷ್ಪರಿಣಾಮಗಳು ಬಹಳ ಮಟ್ಟಿಗೆ ಕಡಿಮೆಯಾಗುತ್ತವೆ.ಸಮುದ್ರದ ಉಪ್ಪನ್ನು ಬಳಸುವುದರ ಮೂಲಕ ಜೀವನದ ಪ್ರತಿಯೊಂದು ದುಃಖವನ್ನು ಕೊನೆಗೊಳಿಸಬಹುದು. ಇದರೊಂದಿಗೆ ಹೆಚ್ಚಿನ ಹಣವನ್ನು ಗಳಿಸಬಹುದು.ಸ್ನಾನಗೃಹದಲ್ಲಿ ಸಮುದ್ರದ ಉಪ್ಪು ತುಂಬಿದ ಗಾಜಿನ ಬಟ್ಟಲನ್ನು ಇರಿಸಿ. ಪ್ರತಿ ವಾರ ಅದನ್ನು ಬದಲಾಯಿಸುತ್ತಿರಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ

ಕರ್ಪೂರದಿಂದ ದೋಷ ನಿವಾರಣೆ

ಕರ್ಪೂರದ ಸಣ್ಣ ತುಂಡು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ತುಂಬಾ ಪ್ರಯೋಜನಕಾರಿಯಾಗಿ ಎಂದು ವಿವರಿಸುತ್ತದೆವಾಸ್ತುಶಾಸ್ತ್ರ. ಕರ್ಪೂರ ಒಂದೇಅನೇಕ ವಾಸ್ತು ದೋಷಗಳನ್ನು ನಿವಾರಿಸಿ ಮನೆಯಲ್ಲಿ ಸಂತೋಷವನ್ನು ತರಬಲ್ಲದು.ನಿಮ್ಮ ಮನೆಯ ವಿವಿಧ ಪ್ರದೇಶಗಳಲ್ಲಿ ನೀವು ಕರ್ಪೂರವನ್ನು ಬೆಳಗಬಹುದು.ಅಡುಗೆಮನೆಯಲ್ಲಿ ಬೆಳ್ಳಿಯ ಬಟ್ಟಲಿನಲ್ಲಿ ಸ್ವಲ್ಪ ಕರ್ಪೂರ ಮತ್ತು ಲವಂಗವನ್ನು ಸುಟ್ಟುಹಾಕಿ. ಪ್ರತಿನಿತ್ಯ ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿಯ ಆಶೀರ್ವಾದವು ನಿಮ್ಮ ಕುಟುಂಬದ ಮೇಲಿರುತ್ತದೆ ಮತ್ತು ನಿಮ್ಮ ಆರ್ಥಿಕ ತೊಂದರೆಗಳು ದೂರವಾಗುತ್ತವೆ.

ಕನ್ನಡಿ ಇಡುವುದು

ಕನ್ನಡಿಯನ್ನು ಯಾವಾಗಲೂ ಮನೆಯ ಪೂರ್ವ ಅಥವಾ ಉತ್ತರ ಗೋಡೆಯ ಮೇಲೆ ಹಾಕಬೇಕು ಎನ್ನಲಾಗುತ್ತದೆ. ಹಾಗೆಯೇ ಕನ್ನಡಿಯನ್ನು ದಕ್ಷಿಣ ಅಥವಾ ಪಶ್ಚಿಮ ಗೋಡೆಯ ಮೇಲೆ ಯಾವುದೇ ಕಾರಣಕ್ಕೂ ಹಾಕಬಾರದಂತೆ. ಇದರಿಂದ ಸಮಸ್ಯೆಗಳಾಗುತ್ತದೆ.ಕನ್ನಡಿಯನ್ನು ಮುಖ್ಯ ಬಾಗಿಲಿನ ಎದುರು ಮತ್ತು ನಿಮ್ಮ ಹಾಸಿಗೆಯ ಮುಂದೆ ಇಡಬಾರದು.

ಅಕ್ವೇರಿಯಮ್‌ ಎಲ್ಲಿರಬೇಕು?

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮೀನಿನ ಅಕ್ವೇರಿಯಂ ಇದ್ದರೆ ಶಾಂತಿ ಮತ್ತು ಸಮೃದ್ಧಿ ಉಂಟಾಗುತ್ತದೆ.ವಾಸ್ತುಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ಮೀನಿನ ಅಕ್ವೇರಿಯಂ ಇಡಬೇಕು. ಇದರಿಂದ ಹೆಚ್ಚಿನ ಸಂಪತ್ತು, ಸಕಾರಾತ್ಮಕತೆ, ಸಮೃದ್ಧಿ ದೊರಕುತ್ತದೆ.ಅಕ್ವೇರಿಯಂನಲ್ಲಿರುವ ಪ್ರಕಾಶಮಾನವಾದ ಹೂವುಗಳು ಮನೆಗೆ ಧನಾತ್ಮಕ ವೈಭವ ತರುತ್ತದೆ. ಅಡುಗೆಮನೆಯಲ್ಲಿ ಅಕ್ವೇರಿಯಂ ಇಡಬೇಡಿ.

Related News

spot_img

Revenue Alerts

spot_img

News

spot_img