25.5 C
Bengaluru
Wednesday, December 18, 2024

Minimum Balance;ಮಿನಿಮಮ್ ಬ್ಯಾಲನ್ಸ್‌ ಇರದ ಬ್ಯಾಂಕ್ ಅಕೌಂಟ್ ಗ್ರಾಹಕರಿಗೆ ಇನ್ಮುಂದೆ ಬೀಳಲ್ಲ ದಂಡ!

ನವದೆಹಲಿ;ಮಿನಿಮಮ್ ಬ್ಯಾಲನ್ಸ್‌(Minimum balance) ಇರದ ಬ್ಯಾಂಕ್ ಅಕೌಂಟ್ ಗ್ರಾಹಕರಿಗೆ ದಂಡ ಹಾಕದಂತೆ ಎಲ್ಲಾ ಬ್ಯಾಂಕ್‌ಗಳಿಗೆ RBI ಸೂಚಿಸಿದೆ.ಎರಡು ವರ್ಷಗಳಿಂದ ಯಾವುದೇ ವಹಿವಾಟು ದಾಖಲಿಸದೇ ನಿಷ್ಕ್ರಿಯವಾಗಿರುವ ಖಾತೆಗಳ ಮೇಲೆ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದಕ್ಕಾಗಿ ಬ್ಯಾಂಕ್‌ಗಳು ದಂಡ ವಿಧಿಸುವಂತಿಲ್ಲ ಎಂದು ಆರ್‌ಬಿಐ(RBI) ಹೇಳಿದೆ. ಸ್ಕಾಲರ್‌ಶಿಪ್ ಹಣ ಅಥವಾ ನೇರ ಲಾಭ ವರ್ಗಾವಣೆಗಳನ್ನು ಸ್ವೀಕರಿಸಲು ರಚಿಸಲಾದ ಖಾತೆಗಳನ್ನು ಬ್ಯಾಂಕ್‌ಗಳು ಎರಡು ವರ್ಷಗಳಿಂದ ಬಳಸದಿದ್ದರೂ ನಿಷ್ಕ್ರಿಯವೆಂದು ವರ್ಗೀಕರಿಸಲು ಸಾಧ್ಯವಿಲ್ಲ. ಹಲವು ವರ್ಷಗಳಿಂದ ಇನಾಪರೇಟಿವ್ ಆಗಿರುವ ಅಕೌಂಟ್‌ಗಳಿಗೆ ಸಾವಿರ ರೂಪಾಯಿ ದಂಡ ಬೀಳಬಹುದು ಎಂಬ ಭಯ ಗ್ರಾಹಕರಿಗಿರುತ್ತದೆ. ಈ ಕಾರಣಕ್ಕೆ ತಮ್ಮ ಹಳೆ ಅಕೌಂಟ್ ರೀ ಓಪನ್ ಮಾಡಲು ಹಿಂಜರಿಯುವ ಸಾಧ್ಯತೆ ಇದೆ. ಹೀಗಾಗದಿರಲಿ ಅಂತಾ RBI ಬ್ಯಾಂಕುಗಳಿಗೆ ಈ ಸೂಚನೆ ನೀಡಿದೆ.ಸ್ಕಾಲರ್​ಶಿಪ್ ಹಣ ಪಡೆಯಲು ಅಥವಾ ಡಿಬಿಟಿ ಹಣಕ್ಕೆಂದು ರಚನೆಯಾಗಿರುವ ಬ್ಯಾಂಕ್ ಖಾತೆಗಳನ್ನು(Bankaccount) ಇನಾಪರೇಟಿವ್ ಅಥವಾ ನಿಷ್ಕ್ರಿಯ ಬ್ಯಾಂಕ್ ಖಾತೆ(dormant bank account) ಎಂದು ವರ್ಗಾಯಿಸಬಾರದು ಎಂದೂ ಇನ್ನೊಂದು ಮಹತ್ವದ ಆದೇಶದಲ್ಲಿ ಆರ್​ಬಿಐ ತಿಳಿಸಿದೆ. ಹೊಸ ನಿಯಮಗಳ ಪ್ರಕಾರ, ಬ್ಯಾಂಕ್‌ಗಳು ತಮ್ಮ ಖಾತೆಗಳು ನಿಷ್ಕ್ರಿಯಗೊಂಡಿರುವ ಬಗ್ಗೆ ಎಸ್‌ಎಂಎಸ್(SMS), ಪತ್ರಗಳು ಅಥವಾ ಇಮೇಲ್(Email) ಮೂಲಕ ಗ್ರಾಹಕರಿಗೆ ತಿಳಿಸಬೇಕು. ನಿಷ್ಕ್ರಿಯ ಖಾತೆಯ ಮಾಲೀಕರು ಪ್ರತಿಕ್ರಿಯಿಸದಿದ್ದಲ್ಲಿ ಖಾತೆದಾರರನ್ನು ಪರಿಚಯಿಸಿದ ವ್ಯಕ್ತಿ ಅಥವಾ ಖಾತೆದಾರರ ನಾಮಿನಿಗಳನ್ನು ಸಂಪರ್ಕಿಸಲು ಬ್ಯಾಂಕ್‌ಗಳನ್ನು ಕೇಳಲಾಗಿದೆ.

Related News

spot_img

Revenue Alerts

spot_img

News

spot_img