ನವದೆಹಲಿ;ಹೊಸ ವರ್ಷದ ಮೊದಲ ದಿನ. ಅಂದರೆ ಜನವರಿ 1 2024ರ ಮೊದಲ ದಿನ. ಈ ದಿನವೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಹತ್ವದ ಸಾಧನೆಯನ್ನು ಮಾಡಲು ಸಜ್ಜಾಗಿ ನಿಂತಿದೆ.ಇಸ್ರೋ ಬಾಹ್ಯಾಕಾಶ ಸಂಸ್ಥೆಯು ಎಕ್ಸ್‌ಪೊಸ್ಯಾಟ್(XPoSat) ಉಪಗ್ರಹ ಹಾರಿಸುವ ಮೂಲಕ ಹೊಸ ವರ್ಷ ಆರಂಭಿಸಲು ಸಜ್ಜಾಗಿದೆ.ಹೊಸ ವರ್ಷದ ಮೊದಲ ದಿನ ಇಸ್ರೋ ಪಾಲಿಗೆ ವಿಶೇಷವಾಗಿದೆ. ಸೋಮವಾರ ಬೆಳಗ್ಗೆ 9.10ರ ವೇಳೆ ಶ್ರೀಹರಿಕೋಟಾದ ಸತೀಶ್ ಧವನ ಕೇಂದ್ರದಿಂದ ಈ ಉಪಗ್ರಹವನ್ನು ಹಾರಿಬಿಡಲು ಎಲ್ಲಾ ಸಿದ್ಧತೆಗಳು ನಡೆದಿವೆ. ಪೂರ್ವಭಾಗದ ಇಳಿಜಾರಿನ ಕಕ್ಷೆಯಲ್ಲಿ ಈ ಉಪಗ್ರಹವನ್ನು ಸೇರಿಸಲಾಗುತ್ತದೆ. ಇದೊಂದು ಸಂಪೂರ್ಣ ವೈಜ್ಞಾನಿಕ ಉಪಗ್ರಹವಾಗಿದ್ದು ಆಕಾಶಮೂಲದಿಂದ( ಭೂಮಿಯ ಹೊರಭಾಗದಿಂದ) ಹೊರಹೊಮ್ಮುವ ಕ್ಷ ಕಿರಣ ಹೊರಸೂಸುವಿಕೆ ವಿಷಯದಲ್ಲಿ ಬಾಹ್ಯಾಕಾಶ(outer space) ಆಧಾರಿತ ಧ್ರುವೀಕರಣ ಮಾಪನ ಮಾಡುವುದಕ್ಕಾಗಿ ಇದನ್ನು ರೂಪಿಸಲಾಗಿದೆ. ಎಕ್ಸ್‌ಪೊಸ್ಯಾಟ್ ಎಂದರೆ ಕ್ಷ ಕಿರಣ(X-ray) ಪೊಲಾರಿಮೀಟರ್ ಉಪಗ್ರಹವೆಂದೇ ಪ್ರಸಿದ್ದಿ ಪಡೆದಿದೆ.XPoSat ಜೊತೆಗೆ ಇನ್ನೂ 10 ಉಪಗ್ರಹಗಳು ಇರಲಿವೆ. ಎಕ್ಸ್‌ಪೋಸ್ಯಾಟ್ 650 ಕಿಮೀ ಎತ್ತರದ ಕಕ್ಷೆಯಲ್ಲಿ .XPoSat ಹೊತ್ತು PSLV-C58 ರಾಕೆಟ್ ಬೆಳಗ್ಗೆ 9:10ಕ್ಕೆ ನಭಕ್ಕೆ ಚಿಮ್ಮಲಿದೆ. XPoSat ಜೊತೆಗೆ ಇನ್ನೂ 10 ಉಪಗ್ರಹಗಳು ಇರಲಿವೆ.ಪಲ್ಸಾರ, ಕಪ್ಪು ಕುಳಿ ಎಕ್ಸ್-ರೇ ಬೈನರಿಗಳು, ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯಸ್‌ಗಳು, ನ್ಯೂಟ್ರಾನ್ ನಕ್ಷತ್ರಗಳು ಮತ್ತು ಉಷ್ಣವಲ್ಲದ ಸೂಪರ್‌ನೋವಾ ಅವಶೇಷಗಳನ್ನು ಒಳಗೊಂಡಂತೆ ವಿಶ್ವದಲ್ಲಿ ತಿಳಿದಿರುವ 50 ಪ್ರಕಾಶಮಾನವಾದ ಮೂಲಗಳನ್ನು ಅಧ್ಯಯನ ಮಾಡುವ ಗುರಿಯನ್ನು ಎಕ್ಸ್‌ಪೋಸ್ಯಾಟ್ ಮಿಷನ್(EX-POSAT MISSION) ಹೊಂದಿದೆ. ಉಪಗ್ರಹವನ್ನು 500-700 ಕಿಮೀ ವೃತ್ತಾಕಾರದ ಕಡಿಮೆ ಭೂಮಿಯ ಕಕ್ಷೆಯಲ್ಲಿ ಇರಿಸಲಾಗುವುದು, ಕನಿಷ್ಠ ಐದು ವರ್ಷಗಳ ಮಿಷನ್(Mission) ಸಕ್ರಿಯವಾಗಿರಲಿದೆ.