ಆನ್‌ಲೈನ್ ಆಹಾರ ವಿತರಣಾ ಮಾಡುವ ಜೊಮ್ಯಾಟೋ ಸಂಸ್ಥೆ ಲಿಮಿಟೆಡ್‌ಗೆ ವಿತರಣಾ ಶುಲ್ಕಗಳ ಮೇಲೆ ರೂ 402 ಕೋಟಿ ಕೇಂದ್ರ ಸರಕು ಮತ್ತು ಸೇವಾ ತೆರಿಗೆಯ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಕಂಪನಿಯು ನಿಯಂತ್ರಕ ಫೈಲಿಂಗ್ ನಲ್ಲಿ ತಿಳಿಸಿದೆ.
ಶೋಕಾಸ್ ನೋಟಿಸ್…!
ಈ ಹಿಂದೆ ವಿತರಣಾ ಶುಲ್ಕದ ಮೇಲೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆಯನ್ನು ಪಾವತಿಸದಿದ್ದಕ್ಕಾಗಿ GST ಗುಪ್ತಚರ ನಿರ್ದೇಶನಾಲಯದಿಂದ ಶೋಕಾಸ್ ನೋಟಿಸ್ ಸ್ವೀಕರಿಸಿದೆ ಎಂದು ಆಹಾರ ವಿತರಣಾ ಸೇವೆ ಜೊಮ್ಯಾಟೋ (Zomato ) ಬುಧವಾರ ತಿಳಿಸಿದೆ.
GST ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ನೋಟಿಸ್ ಉಲ್ಲೇಖ..!
ಕೇಂದ್ರ ಸರಕು ಮತ್ತು ಸೇವಾ ತೆರಿಗೆ (GST) ನಿರ್ದೇಶನಾಲಯ ಗುರುಗ್ರಾಂ ಮೂಲದ ಜೊಮ್ಯಾಟೋ ಕಂಪನಿಗೆ ನೋಟಿಸ್ ನೀಡಿದೆ. ಆಹಾರ ಡೆಲವರಿ ಮಾಡಲು ಗ್ರಾಹಕರಿಗೆ ಜೊಮ್ಯಾಟೋ ಸಂಸ್ಥೆ ಚಾರ್ಜಸ್ ವಿಧಿಸುತ್ತಿದೆ. ಇದರ ಮೇಲೆ GST ಪಾವತಿಸಬೇಕಿದೆ. 29-10-2019 ರಿಂದ 31-03-2022ರ ವರೆಗೆ 402 ಕೋಟಿ ರೂ.ವನ್ನು ಜೊಮ್ಯಾಟೋ ಕಂಪನಿ ಡೆಲವರಿ ಚಾರ್ಜಸ್ (Delaware charges)ಮೇಲಿನ GST ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ನೋಟಿಸ್ ನಲ್ಲಿ ಪ್ರಕಟಿಸಲಾಗಿದೆ.
ವಿತರಣಾ ಶುಲ್ಕದ ಮೇಲೆ ವಿಧಿಸಲಾದ ನೂರಾರು ಕೋಟಿ ಮೌಲ್ಯದ ಕೇಂದ್ರ ಸರಕು ಮತ್ತು ಸೇವಾ ತೆರಿಗೆಗೆ ಒತ್ತಾಯಿಸಿ ಜೊಮ್ಯಾಟೋದ ಪ್ರತಿಸ್ಪರ್ಧಿ ಸ್ವಿಗ್ಗಿಗೆ ಶೋಕಾಸ್ ನೋಟಿಸ್ ನೀಡಿದ ತಿಂಗಳುಗಳ ನಂತರ ಇದು ಬೆಳಕಿಗೆ ಬಂದಿದೆ.
ಒಪ್ಪಂದ ಮಾಡಿಕೊಳ್ಳುವಾಗ ಕರಾರು ಪತ್ರಕ್ಕೆ ಸಹಿ..!
ಡೆಲಿವರಿ ಪಾರ್ಟ್ನರ್ ಪರವಾಗಿ ಜೋಮ್ಯಾಟೋ (Zomato) ಡೆಲಿವರಿ ಚಾರ್ಜಸ್ ವಿಧಿಸುತ್ತದೆ. ಆದರೆ ಇದರ ಹಣ ಸಂಪೂರ್ಣವಾಗಿ ಡೆಲಿವರಿ ಪಾಲುದಾರರಿಗೆ ಸೇರಿದೆ. ಜೋಮ್ಯಾಟೋಗೆ ಸೇರಿಲ್ಲ ಎಂದು ಡೆಲಿವರಿ ಪಾಲುದಾರರು ಝೋಮ್ಯಾಟೋ ಜೊತೆ ಒಪ್ಪಂದ ಮಾಡಿಕೊಳ್ಳುವಾಗ ಈ ಕುರಿತ ಕರಾರು ಪತ್ರಕ್ಕೆ ಸಹಿ ಹಾಕಿರುತ್ತಾರೆ, ಇದಕ್ಕೆ ಝೋಮ್ಯಾಟೋ ಸ್ಪಷ್ಟನೆ ನೀಡಿದೆ.