25.5 C
Bengaluru
Wednesday, December 18, 2024

ಕರ್ನಾಟಕ ರಾಜ್ಯದ ಮಾನ್ಯತೆ ಪಡೆದ ಪತ್ರಕರ್ತರಿಗೆ KSRTC ಬಸ್ ನಲ್ಲಿ ಉಚಿತ ಪ್ರಯಾಣ..!

ಬೆಂಗಳೂರು: ಕೆಎಸ್ ಆರ್ ಟಿಸಿ ವತಿಯಿಂದ ಕರ್ನಾಟಕ ರಾಜ್ಯದ ಮಾನ್ಯತೆ ಪಡೆದಿರುವ ಪತ್ರಕರ್ತರಿಗೆ ( recognized journalists) ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸುವುದಕ್ಕೆ ಬಸ್ ಪಾಸ್ ವಿತರಣೆ ಮಾಡಲಾಗುತ್ತಿದೆ.

ಉಚಿತ ಪ್ರಯಾಣ..!

ರಾಜ್ಯದಲ್ಲಿ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯಿಂದ ಮಾನ್ಯತೆ ಕಾರ್ಡ್ ಪಡೆದ ಪತ್ರಕರ್ತರಿಗೆ KSRTC ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಸ್ಮಾರ್ಟ್‌ ಕಾರ್ಡ್‌ಗಳನ್ನು ಬಳಸಿ ಪ್ರಯಾಣಿಸಲು ನಿಗಮದ ವತಿಯಿಂದ ವಿತರಿಸಲಾಗಿರುತ್ತದೆ. ಈ ಕುರಿತು KSRTC ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಸ್ಮಾರ್ಟ್‌ ಕಾರ್ಡ್‌ ಬಳಸಿ ಉಚಿತ ಪ್ರಯಾಣ..!

ಕೆಎಸ್ ಆರ್ ಟಿಸಿ ಬಸ್ ನಿಗಮವು ದಿನಾಂಕ: 31.12.2023 ರವರೆಗೆ ಚಾಲ್ತಿಯಲ್ಲಿರುವ ಸ್ಮಾರ್ಟ್‌ ಕಾರ್ಡ್‌(Smart card)ಬಸ್‌ ಪಾಸ್‌ಗಳನ್ನು ಹೊಂದಿರುವ ಪತ್ರಕರ್ತರನ್ನು ದಿನಾಂಕ: 29.02.2024 ರವರೆಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಅನುಮತಿಸುವುದು ಎಂದು ತಿಳಿಸಿದ್ದಾರೆ.

29- 12 – 2024 ರವರೆಗೆ ವಿಸ್ತರಿಸಲು ತೀರ್ಮಾನ..!

ರಾಜ್ಯದ ಕೆಎಸ್ ಆರ್ ಟಿಸಿ (KSRTC) ಬಸ್‌ಪಾಸ್‌ಗಳ ಮಾನ್ಯತಾ ಅವಧಿಯನ್ನು 29- 12 – 2024 ರವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ನಿಗಮದ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ಹಾಗೂ ಸಂಚಾರ ಮೇಲ್ವಿಚಾರಕರಿಗೆ ಸೂಕ್ತ ತಿಳುವಳಿಕೆ ನೀಡುವುದು ಮತ್ತು ದಿನಾಂಕ: 31.12.2023 ರವರೆಗೆ ಚಾಲ್ತಿಯಲ್ಲಿರುವ ಸ್ಮಾರ್ಟ್‌ ಕಾರ್ಡ್‌ ಬಸ್‌ ಪಾಸ್‌ಗಳನ್ನು ಹೊಂದಿರುವ ಪತ್ರಕರ್ತರನ್ನು ದಿನಾಂಕ: 29.02.2024 ರವರೆಗೆ ನಿಗಮದ ಬಸ್ಸು(bus)ಗಳಲ್ಲಿ ಪ್ರಯಾಣಿಸಲು ಒಪ್ಪಿಗೆ ನೀಡಿದೆ.

Related News

spot_img

Revenue Alerts

spot_img

News

spot_img