ಬಿಗ್ ಬಾಸ್ ಮನೆಗೆ ಅಂತು-ಇಂತು ಪ್ರತಾಪ್ ಅಪ್ಪ ಅಮ್ಮನ ಆಗಮನವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪರ್ಧಿಗಳ ತಂದೆ ತಾಯಿಗೆ ಅವಕಾಶ ನೀಡುತ್ತಿದ್ದಾರೆ. ಇನ್ನು ಇವತ್ತು ಜಿಯೋ ಸಿನಿಮಾ (JioCinema) ಬಿಡುಗಡೆ ಮಾಡಿರುವ ಪ್ರೋಮೊವೊಂದರಲ್ಲಿ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದೆ.
ಅಪ್ಪ ಅಮ್ಮ ನೊಂದಿಗೆ ಮಾತನಾಡದೆ ನಾನು ಊಟ ಸಹ ಮಾಡುವುದಿಲ್ಲ ಅಂತ ಡ್ರೋನ್ ಪ್ರತಾಪ್ ಹಠ ಮಾಡ್ತಿದ್ದರು. ಪ್ರತಾಪ್ ಅಪ್ಪ ಹಾಗೂ ಅಮ್ಮನ ಜೊತೆ ಮಾತನಾಡಲೇಬೇಕು ಎಂದುಕೊಂಡಿದ್ದ ಆಸೆಯನ್ನು ಈಗ ಬಿಗ್ ಬಾಸ್(bigg boss) ಮನೆ ನೆರವೇರಿದೆ.
ಬಾಗಿಲು ತೆರೆಯುವ ಮುನ್ನವೆ ಪ್ರತಾಪು ಎಂದು ಕರೆದ ತಾಯಿ..!
ಈ ವಾರ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ (family) ವೀಕ್ ಇತ್ತು ಹೀಗಾಗಿ ಈ ವೇಳೆ ಕುಟುಂಬ ಸದಸ್ಯರೆಲ್ಲ ಬಂದಿದ್ದಾರೆ. ಹಾಗೆ ಪ್ರತಾಪ್ ಅವರ ಅಪ್ಪ ಹಾಗೂ ಅಮ್ಮ ಸಹ ಬಂದಿದ್ದಾರೆ. ಪ್ರತಾಪ್ ಅಮ್ಮ ಬಾಗಿಲು ತೆರೆಯುವ ಮುನ್ನವೆ ಪ್ರತಾಪು ಎಂದು ಕರಿಯುತ್ತಾರೆ, ತಂದೆ ಹೇಗಿದ್ದೀಯಪ್ಪ ಎಂದು ಕೇಳ್ತಾರೆ ಅದೇ ವೇಳೆ ಡೋರ್ ಲಾಕ್ ಆಗಿತ್ತು. ಪ್ರತಾಪ್ ಅವರು ಕಣ್ಣೀರು ಹಾಕಿ ಗಳಗಳನೆ ಅತ್ತಿದ್ದಾರೆ. ‘ಬಿಗ್ ಬಾಸ್ ಬಾಗಿಲು ತೆಗೆಯಿರಿ’ ಎಂದು ಅತ್ತಿದ್ದಾರೆ. ತಂದೆ-ಮಗನ ಸಮಾಗಮ ನೋಡಲು ವೀಕ್ಷಕರು ಕಾದಿದ್ದಾರೆ.
ಅವ್ವಾ-ಅಪ್ಪಾ ಎಂದು ಓಡಿ ಬಂದ ಪ್ರತಾಪ್…!
ತನ್ನ ತಾಯಿ ಹಾಗೂ ತಂದೆಯ ಧ್ವನಿ ಕೇಳಿದ್ದೇ ತಡ ಪ್ರತಾಪ್ ಅವರು ಓಡೋಡಿ ಅವ್ವಾ-ಅಪ್ಪಾ ಎನ್ನುತ್ತಾ ಬಾಗಿಲಿನ ಕಡೆಗೆ ಓಡಿದಿದ್ದಾರೆ. ಈ ಒಂದು ಪ್ರೋಮೋವನ್ನು ಬಿಗ್ಬಾಸ್ ರಿಲೀಸ್ ಮಾಡಿದೆ. ಪ್ರೋಮೊ ನೋಡಿದ ಬಿಗ್ ಬಾಸ್ ಪ್ರೇಕ್ಷಕರಿಗೆ ಎಲ್ಲಿಲ್ಲದ ಸಂತೋಷ ವಾಗಿದೆ ಕೊನೆಗು ಒಂದಾದ ತಂದೆ, ತಾಯಿ, ಮಗ ಎಂದು ಕಾಮೆಂಟ್ ಮಾಡುವ ಮೂಲಕ ಹೇಳಿದ್ದಾರೆ.