ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಬಿಎಂಟಿಸಿ ಬಸ್ಸ್ ನಲ್ಲಿ ಓಡಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಈಗ 100 ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ನಗರದಾದ್ಯಂತ ನಿಯೋಜಿಸಲಾಗುವುದು. ಈ ಎಲೆಕ್ಟ್ರಿಕ್ ಬಸ್‌ಗಳು ಆರಂಭದಲ್ಲಿ ಹೆಣ್ಣೂರು, ಶಾಂತಿನಗರ, ದೀಪಾಂಜಲಿನಗರ, ಕನ್ನಳ್ಳಿ, ಕೆಆರ್ ಪುರಂ, ಪೀಣ್ಯ, ಜಯನಗರ ಮತ್ತು ಜಿಗಣಿ ಅಂತಹ ಎಂಟು ಡಿಪೋಗಳಿಂದ ಕಾರ್ಯನಿರ್ವಹಿಸಲಿವೆ.
ಸಿಲಿಕಾನ್ ಸಿಟಿಯಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಬಸ್..!
ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ನಗರದಾದ್ಯಂತ ಬಿಡುಗಡೆ ಮಾಡಲು ನಿರ್ಧಾರ ಮಾಡಿದ್ದಾರೆ. ರಾಜ್ಯ ಸರ್ಕಾರವು ಟಾಟಾ ಮೋಟಾರ್ಸ್‌ನೊಂದಿಗೆ ಕಳೆದ ವರ್ಷ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಕಂಪೆನಿ ಬಸ್‌ಗಳನ್ನು 12 ವರ್ಷಗಳವರೆಗೆ ನಿರ್ವಹಿಸುತ್ತದೆ. BMTC ಈ ಬಸ್‌ಗಳಿಗೆ ಕಂಡಕ್ಟರ್‌ಗಳನ್ನು ನಿಯೋಜಿಸುತ್ತದೆ. ಗುತ್ತಿಗೆ ಒಪ್ಪಂದದ ಪ್ರಕಾರ ಈ ಬಸ್‌ಗಳನ್ನು ನಿರ್ವಹಿಸುವ ಖಾಸಗಿ ಸಂಸ್ಥೆಗೆ ಪ್ರತಿ ಕಿ.ಮೀ.ಗೆ 41 ರೂ.ಗಳನ್ನು ಪಾವತಿಸಲು ಬಿಎಂಟಿಸಿ ಒಪ್ಪಿಕೊಂಡಿದೆ.
* ಶೂನ್ಯ ಇಂಗಾಲ ಹೊರಸೂಸುವಿಕೆ ಮತ್ತು ಪರಿಸರ ಸ್ನೇಹಿ ಬಸ್ಸುಗಳು.
* ಬಸ್‌ಗಳು 12 ಮೀ ಉದ್ದ, 400 ಎಂಎಂ ನೆಲದ ಎತ್ತರದ ನಾನ್-ಎಸಿ ಎಲೆಕ್ಟ್ರಿಕ್ ಬಸ್‌ಗಳಾಗಿವೆ.
* ಬಸ್‌ಗಳು ಪ್ರತಿ ಚಾರ್ಜ್‌ಗೆ 200 ಕಿಮೀ ಖಚಿತವಾಗಿ ಕಾರ್ಯನಿರ್ವಹಿಸುತ್ತವೆ.
ಇನ್ನು ಸಹ ಈ ಬಸ್ಸ್ ಗಳಲ್ಲಿ 35 ಜನ ಪ್ರಯಾಣಿಕರು ಕುಳಿತು ಪ್ರಯಾಣಿಸುವ ವ್ಯಸ್ಥೆಯನ್ನು ಮಾಡಲಾಗಿದೆ. ಎಲೆಕ್ಟ್ರಿಕ್ ಬಸ್‌ಗಳು ನಾಲ್ಕು ಎಲ್‌ಇಡಿ ಡೆಸ್ಟಿನೇಶನ್ ಬೋರ್ಡ್‌ಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಸಹಾಯ ಮಾಡಲು ಧ್ವನಿ ಪ್ರಕಟಣೆ ವ್ಯವಸ್ಥೆಯನ್ನು ಹೊಂದಿದೆ. ಚಾಲಕನಿಗೆ ಸಹಾಯವಾಗು ನಿಟ್ಟಿನಲ್ಲಿ ಮೂರು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಹೊಚ್ಚ ಹೊಸ ಬಸ್‌ಗಳಲ್ಲಿ ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಲಾಗಿದೆ.
ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್. ಬೆಂಗಳೂರು