ಕಳೆದ ವರ್ಷ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಶಾಲೆಗ ಬರುವಾಗ ಸಮವಸ್ತ್ರದ ಜೊತೆ ಹಿಜಾಬ್ ಧರಿಸಬಾರದೆಂದು ನಿಷೇಧಿಸಿತ್ತು. ಕಳೆದ ವರ್ಷ ಈ ಕುರಿತು ಎಷ್ಟೋ ಗದ್ದಲಗಳು ನಡೆದವು. ಆದರೆ ಈಗ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದು ರಾಜ್ಯದ ಸಿಎಂ ಸಿದ್ದರಾಮಯ್ಯ ಹಿಜಾಬ್ ನಿಷೇಧ ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿಸಿದ್ದಾರೆ.
ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ವಿರೋಧ..!
ಶಾಲೆಗಳಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ ಸಮವಸ್ತ್ರ ನೀತಿಯನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ಸರ್ಕಾರ ಈಗ ಆದೇಶವನ್ನು ಹಿಂಪಡೆಯಲು ಮುಂದಾಗಿರುವುದಕ್ಕೆ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಶಾಲಾ ಕೊಠಡಿಯೊಳಗೆ ಹಿಜಾಬ್ ಧರಿಸಲು ಅವಕಾಶ ಕೊಟ್ಟರೆ ನಮ್ಮದೇನು ಅಭ್ಯಂತರವಿಲ್ಲ. ಅದೇ ರೀತಿ ನಮಗೂ ಸಹ ಕೇಸರಿ ಶಾಲು ಹೊದಿಸಲು ಅವಕಾಶ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿವೆ.
ಕೇಸರಿ ಶಾಲು ಹಾಕಿದರೆ ತಪ್ಪೇನು…?
1964ರಲ್ಲಿ ಯಾವುದೇ ವಿದ್ಯಾರ್ಥಿಗಳಲ್ಲಿ ಮೇಲುಕೀಳು ಬರಬಾರದು ಎಂಬ ಕಾರಣಕ್ಕೆ ಸಮವಸ್ತ್ರದ ಕಾಯ್ದೆಯನ್ನು ಜಾರಿಗಳಿಸಲಾಗಿತ್ತು. ಪ್ರತಿಯೊಬ್ಬರಿಗೂ ಅವರವರ ಉಡುಗೆ-ತೊಡುಗೆ ಆಚಾರವಿಚಾರ ಅನುಸರಿಸಲು ಅವಕಾಶ ಇರುವಂತೆ ನಾವು ಕೇಸರಿ ಶಾಲು ಹಾಕಿದರೆ ತಪ್ಪೇನು ಎಂಬ ಪ್ರಶ್ನೆಯನ್ನು ಅನೇಕರು ಮುಂದಿಟ್ಟಿದ್ದಾರೆ.
ಹಿಂದು ವಿದ್ಯಾರ್ಥಿಯ ಪರವಾಗಿ ಕಾನೂನು ಹೋರಾಟ ಮಾಡುತ್ತೇವೆ …!
ಯಾವುದೇ ವಿದ್ಯಾರ್ಥಿ ತನ್ನ ಐಡೆಂಟಿಟಿಯನ್ನು ಗುರುತಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅಕಸ್ಮಾತ್ ಸರ್ಕಾರ ನಮಗೆ ಅವಕಾಶ ಕಲ್ಪಿಸದಿದ್ದರೆ ನಾವು ಸಹ ಹಿಂದು ವಿದ್ಯಾರ್ಥಿಯ ಪರವಾಗಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ. ಹೈಕೋರ್ಟ್ ತೀರ್ಪಿನ ಕುರಿತು ವಿಚಾರಣೆ ಈಗಲೂ ನಡೆಯುತ್ತಿದೆ. ಸರ್ಕಾರ ತೀರ್ಪು ಬರುವ ಮುನ್ನವೇ ಆದೇಶವನ್ನು ಹಿಂಪಡೆಯುತ್ತಿರುವುದು ಕೇವಲ ಒಂದು ಸಮುದಾಯದ ಮತ ಗಳಿಕೆಗಾಗಿ. ನೀವು ರಾಜಕಾರಣ ಮಾಡುವುದಾದರೆ ನಾವು ಕೂಡ ಅದನ್ನೇ ಮಾಡುತ್ತೇವೆ ಎಂದು ಹೇಳಿದ್ದಾರೆ.
ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್. ಬೆಂಗಳೂರು