20.6 C
Bengaluru
Sunday, February 23, 2025

Rent agreement;ಬಾಡಿಗೆ ಒಪ್ಪಂದ ಎಂದರೇನು,ಬಾಡಿಗೆ ಒಪ್ಪಂದವನ್ನು ನೋಂದಾಯಿಸಲು ಅಗತ್ಯವಿರುವ ದಾಖಲೆಗಳು

ಬೆಂಗಳೂರು;ಸ್ವಂತ ಮನೆ ಹೊಂದುವ ಕನಸು ಎಲ್ಲರಲ್ಲೂ ಇರುವುದು ಸಹಜ. ಆದರೆ ಆರ್ಥಿಕ ಸಮಸ್ಯೆಯ ಕಾರಣ ಜನರು ತಮ್ಮ ಆಸೆಯನ್ನು ಕೈಬಿಡುತ್ತಾರೆ. ಈಗಲೂ ಕೂಡ ಸ್ವಂತ ಮನೆ ಇಲ್ಲದೆ ಸಾಕಷ್ಟು ಜನರು ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದಾರೆ. ಇನ್ನು ಉದ್ಯೋಗಕ್ಕಾಗಿ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿದಾಗ ಅಲ್ಲಿ ವಾಸವಿರಲು ಬಾಡಿಗೆ ಮನೆಯನ್ನೇ(Rented house) ಹುಡುಕಬೇಕಾಗುತ್ತದೆ.ಲಕ್ಷಾಂತರ ಜನರು ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಬರುತ್ತಾರೆ. ಈ ಎಲ್ಲರೂ ಸ್ವಂತ ಮನೆ(Ownhouse) ಹೊಂದುವುದು ಕಷ್ಟಸಾಧ್ಯ. ಹೀಗಾಗಿ ಬಹುತೇಕರು ಬಾಡಿಗೆ ಮನೆಯಲ್ಲಿ ವಾಸಿಸುವುದು ಸಹಜ. ನೀವು ಎಂದಾದರೂ ಆಸ್ತಿಯನ್ನು ಬಾಡಿಗೆಗೆ ನೀಡಿದ್ದರೆ ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಬಾಡಿಗೆ ಒಪ್ಪಂದಕ್ಕೆ(Rental agreement) ಸಹಿ ಹಾಕಿರಬಹುದು. ಒಂದೊಮ್ಮೆ ನೀವು ಹಾಕಿದ್ದರೆ ಒಪ್ಪಂದದ ಹಾಳೆಯನ್ನು ಸರಿಯಾಗಿ ಗಮನಿಸಿ, ಆ ಒಪ್ಪಂದವು(Agreement) ಕೇವಲ 11 ತಿಂಗಳವರೆಗೆ ಮಾತ್ರ ಸೀಮಿತವಾಗಿರುತ್ತದೆ.

ಬಾಡಿಗೆ ಒಪ್ಪಂದ(Rental Agreement)

ಬಾಡಿಗೆ ಒಪ್ಪಂದವು ಜಮೀನುದಾರ ಮತ್ತು ಹಿಡುವಳಿದಾರರ ನಡುವೆ ಒಪ್ಪಿಗೆ ಮತ್ತು ಸಹಿ ಮಾಡಲಾದ ಔಪಚಾರಿಕ ದಾಖಲೆಯಾಗಿದೆ. ನಿಮ್ಮ ಆಸ್ತಿಯನ್ನು ಬಾಡಿಗೆಗೆ ನೀಡಲು ನೀವು ಬಯಸಿದರೆ, ನಿಮ್ಮ ಬಾಡಿಗೆದಾರರೊಂದಿಗೆ ಬಾಡಿಗೆ ಒಪ್ಪಂದವನ್ನು ಹೊಂದಿರುವುದು ಮುಖ್ಯ. ಮನೆಯನ್ನು ಬಾಡಿಗೆ ಪಡೆಯಬೇಕಾದರೆ, ಬಾಡಿಗೆದಾರ(Tenant) ಹಾಗೂ ಮನೆ ಮಾಲೀಕರ ನಡುವೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲಿ ಎರಡೂ ಕಡೆಯವರ ಹೆಸರು, ಬಾಡಿಗೆ ಮೊತ್ತ, ಬಾಡಿಗೆ ಅವಧಿ ಹಾಗೂ ಇತರೆ ಬಾಡಿಗೆ ಷರತ್ತುಗಳ ವಿವರ ಅಡಗಿರುತ್ತದೆ.ಬಾಡಿಗೆ ಒಪ್ಪಂದವು ಒಂದು ರೀತಿಯ ಗುತ್ತಿಗೆ ಒಪ್ಪಂದವಾಗಿದೆ. ಸಾಮಾನ್ಯವಾಗಿ ಬಾಡಿಗೆ ಒಪ್ಪಂದಗಳನ್ನು 11 ತಿಂಗಳ ಅವಧಿಗೆ ಮಾಡಿಕೊಳ್ಳಲಾಗುತ್ತದೆ. ನೀವೂ ಕೂಡ ಬಾಡಿಗೆ ಮನೆಯಲ್ಲಿದ್ದರೆ , ನಿಮ್ಮ ಬಾಡಿಗೆ ಅಗ್ರಿಮೆಂಟ್‌ ಕೂಡ 11 ತಿಂಗಳ ಅವಧಿಗೇ ಮಾಡಿಕೊಳ್ಳಲಾಗಿರುತ್ತದೆ. ದೇಶದಲ್ಲಿ ಬಾಡಿಗೆ ಒಪ್ಪಂದಗಳಿಗೆ ಕಾನೂನಿನಲ್ಲಿ ಸರಿಯಾದ ನಿಯಮಗಳನ್ನು ಮಾಡಲಾಗಿದೆ. ಭಾರತೀಯ ನೋಂದಣಿ ಕಾಯಿದೆ,(Indian Registration Act), 1908 ರ ಸೆಕ್ಷನ್ 17 (ಡಿ) ಅಡಿಯಲ್ಲಿ ಬಾಡಿಗೆ ಒಪ್ಪಂದವನ್ನು ಮಾಡುವುದು ಅವಶ್ಯಕ. ಆದಾಗ್ಯೂ, ಈ ಒಪ್ಪಂದವನ್ನು ಕನಿಷ್ಠ ಒಂದು ವರ್ಷಕ್ಕೆ ಮಾಡಬೇಕಾಗಿದೆ ಮತ್ತು ಬಾಡಿಗೆ ಒಪ್ಪಂದ ಅಥವಾ ಗುತ್ತಿಗೆ ಒಪ್ಪಂದವನ್ನು ನೋಂದಾಯಿಸುವ ಅಗತ್ಯವಿಲ್ಲ.ನೀವು 11 ತಿಂಗಳುಗಳಿಗಿಂತ ಹೆಚ್ಚು ಮತ್ತು ಕಡಿಮೆ ಸಮಯದವರೆಗೆ ಒಪ್ಪಂದವನ್ನು ಮಾಡಿಕೊಳ್ಳಬಹುದು. ಒಬ್ಬ ವ್ಯಕ್ತಿಯು ಬಾಡಿಗೆ ಅಗ್ರಿಮೆಂಟ್‌(Rentagreement) ಅನ್ನು ರಿಜಿಸ್ಟರ್‌(Register) ಮಾಡಿಸಿದರೆ, ಬಾಡಿಗೆಯ ಮೊತ್ತ ಮತ್ತು ಬಾಡಿಗೆ ಅವಧಿಯ ಆಧಾರದ ಮೇಲೆ ಮುದ್ರಾಂಕ ಶುಲ್ಕವನ್ನು(stampduty) ನಿರ್ಧರಿಸಲಾಗುತ್ತದೆ. ದೀರ್ಘಾವಧಿಯ ಬಾಡಿಗೆಗೆ, ಹೆಚ್ಚಿನ ಮುದ್ರಾಂಕ ಶುಲ್ಕ ಇರುತ್ತದೆ. ಅಂದರೆ, ನೀವು ಹೆಚ್ಚು ಸಮಯದ ಅಗ್ರಿಮೆಂಟ್‌ ಮಾಡಿಕೊಂಡಷ್ಟೂ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ.

ಬಾಡಿಗೆ ಒಪ್ಪಂದವನ್ನು ನೋಂದಾಯಿಸಲು ಅಗತ್ಯವಿರುವ ದಾಖಲೆಗಳು

*ಮಾಲೀಕತ್ವದ ಪುರಾವೆಯಾಗಿ ಮೂಲ ಅಥವಾ ಫೋಟೊಕಾಪಿ ರೂಪದಲ್ಲಿ ಶೀರ್ಷಿಕೆ ಪತ್ರ

* ತೆರಿಗೆ ರಶೀದಿ ಹೆಚ್ಚುವರಿ ದಾಖಲೆಯಾಗಿದೆ.

*ಬಾಡಿಗೆದಾರ ಮತ್ತು ಜಮೀನುದಾರ ಇಬ್ಬರಿಗೂ ವಿಳಾಸ ಪರಿಶೀಲನೆ

*ಪಾಸ್‌ಪೋರ್ಟ್, ಆಧಾರ್, ಡ್ರೈವಿಂಗ್ ಲೈಸೆನ್ಸ್ ಮತ್ತು ಇತರ ಪೋಟೋಕಾಪಿಗಳು

*ಗುರುತಿನ ಚೀಟಿಯಾಗಿ ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ನ ನಕಲು.

* ಎರಡು ಪಾಸ್‌ಪೋರ್ಟ್ ಗಾತ್ರದ ಫೋಟೋಗಳು ಅಗತ್ಯವಿದೆ.

Related News

spot_img

Revenue Alerts

spot_img

News

spot_img