ಹಾವೇರಿ;ಧಾರವಾಡದಲ್ಲಿರುವ ಶಿಗ್ಗಾಂವಿ ಏತ ನೀರಾವರಿ ಇಲಾಖೆ ಕಚೇರಿ(Irrigation Department)ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (AEE) ಹಾಗೂ ಕಿರಿಯ ಅಭಿಯಂತರ ಅಧಿಕಾರಿಗಳು ಜೆಇ (JE) ಲೋಕಾಯುಕ್ತ(Lokayukta) ಬಲೆಗೆ ಬಿದ್ದಿದ್ದಾರೆ.1.50 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ(Lokayukta) ಪೊಲೀಸರು ದಾಳಿ ನಡೆಸಿದ್ದಾರೆ.ರಸ್ತೆ ಕಾಮಗಾರಿ ಬಿಲ್ ಮೊತ್ತ(Road works bill amount)) ಬಿಡುಗಡೆ ಮಾಡಲು ಎಇಇ ಬಿ. ಮಂಜುನಾಥ 1 ಲಕ್ಷ ರೂಪಾಯಿ, ಕಿರಿಯ ಇಂಜಿನಿಯರ್(Junior engineer) ಪ್ರಕಾಶ ಹೊಸಮನಿ 50 ಸಾವಿರ ರೂ. ಲಂಚ(Bribe) ಸ್ವೀಕರಿಸುತ್ತಿದ್ದ ವೇಳೆ ಬಲೆಗೆ ಬಿದ್ದಿದ್ದಾರೆ.ಈ ಮೊದಲು ಫೋನ್ ಪೇ(Phonepay) ಮೂಲಕ ಇಬ್ಬರೂ 83,000 ರೂ. ಲಂಚ ಪಡೆದುಕೊಂಡಿದ್ದರು. ಅದೇ ರೀತಿಯಾಗಿ ಒಂದೂವರೆ ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಬಲೆಗೆ ಇಂದು ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ ನೇತೃತ್ವದಲ್ಲಿತನಿಖಾ ಕಾರ್ಯಾಚರಣೆ ನಡೆಸಲಾಗಿದೆ. ತನಿಖಾಧಿಕಾರಿಗಳಾದ ಮಂಜುನಾಥ ಪಂಡಿತ, ಪೊಲೀಸ್ ನಿರೀಕ್ಷಕರಾದ ಮುಸ್ತಾಕ್ ಅಹ್ಮದ್ ಶೇಖ, ಆಂಜನೇಯ ಎನ್.ಎಚ್., ಸಿಬ್ಬಂದಿ ಸಿ.ಎಂ.ಬಾರ್ಕಿ, ಎಂ.ಕೆ.ನದಾಫ, ಎಂ.ಕೆ. ಲಕ್ಷ್ಮೇಶ್ವರ, ಆನಂದ ತಳಕಲ್ಲ, ಎಸ್.ಎನ್.ಕಡಕೋಳ, ಬಿ.ಎಸ್.ಸಂಕಣ್ಣವರ, ಎನ್.ಬಿ.ಪಾಟೀಲ, ಎ.ಜಿ.ಶೆಟ್ಟರ, ಎಂ.ಸಿ.ಅರಸಿಕೆರೆ, ಎಂ.ಎಸ್.ಕೊಂಬಳಿ, ರಮೇಶ ಗೆಜ್ಜಿಹಳ್ಳಿ ತಂಡದಲ್ಲಿದ್ದರು.