26.5 C
Bengaluru
Tuesday, December 24, 2024

ಬಿಗ್ ಬಾಸ್ ಕೊಟ್ಟ ಸಂಭಾವನೆಯಲ್ಲಿ ೮೦% ನನ್ನ ಬಟ್ಟೆಗಳಿಗೆ ಸರಿ ಹೋಗಿದೆ-ಸ್ನೇಹಿತ್..!

ಸ್ನೇಹಿತೆ ಗೆ ಬಿಗ್ ಬಾಸ್ ಎಷ್ಟು ಸಂಭಾವನೆ ಕೊಡ್ತಿದ್ರು.?

ಬಿಗ್ ಬಾಸ್ ೧೦ರ ಸ್ಪರ್ಧಿ ಸ್ನೇಹಿತ್ ಬಿಗ್ ಬಾಸ್ ಮನೆಯಲ್ಲಿ ನಿಮಗೆ ಎಷ್ಟು ಸಂಭಾವನೆ ಕೊಡ್ತಿದ್ರು ಎನ್ನುವ ಪ್ರಶ್ನೆಗೆ ಶಾಕ್ ಆಗುವಂತಹ ಹೇಳಿಕೆಯನ್ನ ಬಿಗ್ ಬಾಸ್ ಸ್ಪರ್ಧಿ ಸ್ನೇಹಿತ್ ಹೇಳಿಕೆ ಕೊಟ್ಟಿದ್ದಾರೆ. ಸ್ನೇಹಿತ್ ಸದ್ಯದ ಮಟ್ಟಿಗೆ ಬಿಗ್ ಬಾಸ್ ಮನೆಯಲ್ಲಿ ಕೇವಲ ೨ ವಾರಗಳಿಗೆ ಮಾತ್ರ ಆಗುವಂತಹ ಬಟ್ಟೆ ತೆಗೆದುಕೊಂಡಿದ್ದರಂತೆ. ಹಾಗಾಗಿ ಸ್ನೇಹಿತ್ ಗೆ ಬಟ್ಟೆ ಶಾಪಿಂಗ್ ಮಾಡುವ ಸಲುವಾಗಿ ಅವರ ಅಪ್ಪ ಅಮ್ಮ ಬಹಳಷ್ಟು ಶಾಪಿಂಗ್ ಮಾಡ್ತಿದ್ದ್ರಂತೆ .

ನನ್ನ ಇಷ್ಟಗಳು ಗೊತ್ತಿಲ್ಲಾಂದ್ರು ಪಾಪ ಅಪ್ಪ ಅಮ್ಮ ಬಹಳಷ್ಟು ಶಾಪಿಂಗ್ ಮಾಡ್ತಿದ್ರು..!

ಸ್ನೇಹಿತ್ ಬುಗ್ ಬಾಸ್ ನಲ್ಲಿದ್ದಾಗ ಅವರ ಅಪ್ಪ ಅಮ್ಮ ಆತನಿಗಾಗಿ ಬಹಳಷ್ಟು ವಿನ್ಯಾಸ ಭರಿತ ಉಡುಗೆಗಳನ್ನ ಶಾಪ್ ಮಾಡ್ತಿದ್ರಂತೆ ಆದ್ರೆ ಪಾಪ ಅವರಿಗೆ ಸ್ನೇಹಿತ್ ಗೆ ಎಂತ ಬಟ್ಟೆ ಬೇಕು ಅಂತ ಅವರಿಗೆ ಗೊತ್ತಿಲ್ವಂತೆ. ಹೀಗಾಗಿ ಇದನ್ನೆಲ್ಲಾ ಸರಿದೂಗಿಸಿದವಾಗ ನನ್ನ ಬಟ್ಟೆಗಳಿಗೆ ಅಂತಾನೆ ಸರಿ ಸುಮಾರು ೮೦% ನಷ್ಟು ಹೋಗುತ್ತೆ, ಇನ್ನು ಸಿಕ್ಕಿರೋ ಸಂಭಾವನೆ ಬಗ್ಗೆ ಹೇಳೋದಿಕ್ಕೆ ಇಷ್ಟ ಇಲ್ಲ ಎಂದು ಉತ್ತರಿಸಿದ್ದಾರೆ.

ರಿಯಾಲಿಟಿ ಷೊ ಅಂದ್ರೆ ಇಷ್ಟ ಇಲ್ಲ..!

ಇನ್ನು ಈ ಕುರಿತು ಖಾಸಗಿ ವಾಹಿನಿ ಷೋ ಒಂದ್ರಲ್ಲಿ ಮಾತನಾಡಿದ ಸ್ನೇಹಿತ್ ನನಗೆ ರಿಯಾಲಿಟಿ ಷೊ ಅಂದ್ರೆ ಇಷ್ಟ ಇಲ್ಲ, ನಾನು ಅದಕ್ಕು ಸೂಟ್ ಆಗೋ ವ್ಯಕ್ತಿ ಕೂಡ ಅಲ್ಲ, ನನಗೆ ಸಿನಿಮಾಗಳಲ್ಲಿ ಅವಕಾಶ ಸಿಕ್ಕರೆ ನಟಿಸೋದಕ್ಕೆ ಇಷ್ಟ ಪಡ್ತೀನಿ ಎಂದು ಪುನರುಚ್ಚರಿಸಿದ್ದಾರೆ.

ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು

Related News

spot_img

Revenue Alerts

spot_img

News

spot_img