ಬಿಗ್ ಬಾಸ್ ಮನೆ ಈಗ ಬಿಗ್ ಬಾಸ್ ಕನ್ನಡ ಪ್ರಾಥಮಿಕ ಶಾಲೆಯಾಗಿ ಬದಲಾಗಿದೆ. ದಿನಕ್ಕೆ ಒಬ್ಬರು ಟೀಚರ್ ಆಗಿ ಪಾಠ ಮಾಡುತ್ತಿದ್ದಾರೆ. ತನಿಷಾ, ಪ್ರತಾಪ್, ಪವಿ, ಮೈಕಲ್, ನಮ್ರತಾ, ತುಕಾಲಿ ಸಂತು, ಸಂಗೀತಾ ಸರದಿ ಮುಗಿದು ಈಗ ಕಾರ್ತಿಕ್ ರಾಜಕೀಯ ಶಾಸ್ತ್ರದ ಮೇಷ್ಟ್ರಾಗಿ ಪಾಠ ಮಾಡಲು ಬಂದಿದ್ದಾರೆ.
ಕಾರ್ತಿಕ್ ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಪ್ರಶ್ನೆಗಳನ್ನು ಕೇಳುತ್ತಾ ಇದ್ದಾರೆ. ಕಾರ್ತಿಕ್ ವಾಯ್ಸ್ ಮಾತ್ರ ಮೇಷ್ಟ್ರು ಪಾತ್ರದಲ್ಲಿ ಜೋರಾಗಿಯೇ ಇದೆ. ರಾಜಕೀಯ ಶಾಸ್ತ್ರದ ಮೇಷ್ಟ್ರು ಆಗಿರುವ ಕಾರ್ತಿಕ್ ಸಂಗೀತಾ ಕೆಂಗಣ್ಣಿಗೆ ಗುರಿಯಾದಂತೆ ಕಾಣುತ್ತಿದ್ದಾರೆ. ಕಾರ್ತಿಕ್ ನಡೆದುಕೊಳ್ಳುತ್ತಿರುವ ರೀತಿ ಸಂಗೀತಾಗೆ ಇಷ್ಟವಾಗಿಲ್ಲ. ಇದಕ್ಕೆ ಕಾರ್ತಿಕ್ ಬಕೆಟ್ ಹಿಡಿಯುತ್ತಾ ಇದ್ದಾರೆ ಎಂಬೆಲ್ಲ ಮಾತುಗಳನ್ನು ಡ್ರೋನ್ ಪ್ರತಾಪ್ ಹತ್ತಿರ ಹೇಳಿದ್ದಾರೆ. ರಾಜಕೀಯದ ಮೇಷ್ಟ್ರು ಆಗಿರುವ ಕಾರ್ತಿಕ್ ವಿದ್ಯಾರ್ಥಿಗಳಿಗೆ ಬಿಗ್ ಬಾಸ್ ಮನೆಯಲ್ಲಿ ರಾಜಕೀಯ ನಡೆಯುತ್ತಾ ಇದ್ಯಾ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಎಲ್ಲರೂ ಗಂಭೀರವಾಗಿದ್ದಾರೆ. ಕಲರ್ಸ್ ಕನ್ನಡ ಬಿಟ್ಟಿರುವ ಪ್ರೋಮೋದಲ್ಲಿ ಕಾರ್ತಿಕ್ ಕೇಳಿದ ಈ ಪ್ರಶ್ನೆಗೆ ಯಾರೂ ಉತ್ತರ ಕೊಟ್ಟಿಲ್ಲ. ನಂತರ ಕಾರ್ತಿಕ್ ಬೇರೆ ಬೇರೆ ಪ್ರಶ್ನೆಗಳನ್ನು ಕೇಳಿದ್ದಾರೆ.
ಕೋಪ ಯಾರಿಗೆ ಬರುತ್ತಿದೆ ಎಂದಾಗ ನಂಗೆ ಎಂದ ಸಂಗೀತಾ..!
ಕಾರ್ತಿಕ್ ಮುಂದುವರೆದು ಯಾರಿಗೆ ಹ್ಯಾಂಗರ್ ಮ್ಯಾನೇಜ್ಮೆಂಟ್‌ನ ಅವಶ್ಯಕತೆ ಇದೆ? ಎಂದು ಕೇಳಿದಾಗ ಸಂಗೀತಾ ನನ್ನದೇ ಹೆಸರು ಸಾರ್ ಎಂದು ಹೇಳಿದ್ದಾರೆ. ಇದಕ್ಕೆ ಕಾರ್ತಿಕ್ ಏನಪ್ಪಾ ಸಂಗೀತಾ ಎಲ್ಲ ವಿಷಯ ಒಪ್ಪಿಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಈ ಮಾತು ಯಾಕೋ ಸಂಗೀತಾಗೆ ಇಷ್ಟವಾಗಿಲ್ಲ. ಕಾರ್ತಿಕ್ ಮೇಲೆ ಸಂಗೀತಾಗೆ ಕೋಪ ಬಂದಿದೆ. ಇದ್ದಕ್ಕಿದ್ದಂತೆ ಕಾರ್ತಿಕ್ ಯಾಕೆ ಬದಲಾಗಿದ್ದಾರೆ ಎಂಬುದು ಸಂಗೀತಾಗೆ ತಿಳಿಯುತ್ತಿಲ್ಲ. ಸಂಗೀತಾ, ವಿನಯ್ ಹೆಸರು ತಗೆದುಕೊಳ್ಳಬಹುದೆನೋ ಎಂದು ಕಾರ್ತಿಕ್ ಅಂದುಕೊಂಡಿದ್ದರು. ಆದರೆ ಸ್ವತಃ ಸಂಗೀತಾ ನಾನೇ ಎಂದು ಒಪ್ಪಿಕೊಂಡಿದ್ದು ಕಾರ್ತಿಕ್‌ಗೂ ಸಹ ಆಶ್ಚರ್ಯವಾಗಿದೆ…
ಆನೆಗೆ ದಾಸನಾಗುತ್ತಿದ್ದಾರಾ ಕಾರ್ತಿಕ್.?
ರಾಜಕೀಯದ ಮೇಷ್ಟ್ರು ಆಗಿ ಕಾರ್ತಿಕ್ ಮನೆಯಲ್ಲಿ ಯಾರು ಬ್ಯಾಡ್ ಪಾಲಿಟಿಕ್ಸ್ ಮಾಡ್ತಾ ಇದ್ದಾರೆ ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸಂಗೀತಾ, ವಿನಯ್ ಹೆಸರನ್ನು ತೆಗೆದುಕೊಂಡಿದ್ದಾರೆ. ಇನ್ನು ಕಾರ್ತಿಕ್ ಈ ಮಾತನ್ನ ಒಪ್ಪಿಕೊಳ್ಳದೇ ಅದಕ್ಕೆ ಸೂಕ್ತವಾದ ಕಾರಣವನ್ನು ಕೊಡಬೇಕು ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ವಿನಯ್ ಕೂಡ ಇದು ಸರಿಯಿಲ್ಲ ಎಂಬ ಉತ್ತರ ನೀಡಿದ್ದು, ಸಂಗೀತಾಗೆ ಯಾಕೋ ಕಾರ್ತಿಕ್ ನಡೆದುಕೊಳ್ಳುತ್ತಿರುವ ರೀತಿ ಇಷ್ಟವಾಗಿಲ್ಲ. ಇದಕ್ಕಾಗಿ ಡ್ರೋನ್ ಪ್ರತಾಪ್ ಬಳಿ ಹೋಗಿ ವಿನಯ್ ಟೀಂಗೆ ಕಾರ್ತಿಕ್ ಯಾಕೋ ಬಕೆಟ್ ಹಿಡೀತಾ ಇದ್ದಾನೆ ಎನ್ನುತ್ತಿದ್ದಾರೆ ಬಿಗ್ ಬಾಸ್ ವೀಕ್ಷಕರು..!
ಕಾರ್ತಿಕ್ ನೀನ್ ಬಕೆಟ್ ಹಿಡೀತಾ ಇದ್ದೀಯಾ ಎಂದ ಸಂಗೀತಾ.!
ಕಾರ್ತಿಕ್‌ಗೆ ಏನಾಗಿದೆ ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಡ್ರೋನ್ ಪ್ರತಾಪ್ ಹಾಗೂ ಸಂಗೀತ ಚರ್ಚೆ ನಡೆಸಿದ್ದಾರೆ. ಇನ್ನು ಕಾರ್ತಿಕ್ ಈ ರೀತಿ ನಡೆದುಕೊಂಡಿದ್ದಕ್ಕಾಗಿ ಇಬ್ಬರ ನಡುವೆ ಬಿರುಕು ಮೂಡುತ್ತಾ? ಎನ್ನುವ ಕುತೂಹಲವಿದೆ. ಯಾಕೆಂದರೆ ಸಂಗೀತಾ ಒಮ್ಮೆ ಟಾಸ್ಕ್ ವಿಚಾರಕ್ಕಾಗಿ ವಿನಯ್ ಟೀಮ್ ಸೇರಿಕೊಂಡಾಗ ಇಬ್ಬರ ನಡುವೆಯೂ ಸಹ ಬಿರುಕು ಮೂಡಿ ಮತ್ತೆ ಒಂದಾಗಿದ್ದರು. ಈಗ ಕಾರ್ತಿಕ್ ವಿನಯ್ ಪರ ಮಾತನಾಡುತ್ತಿರುವುದು ಸಂಗೀತಾಗೆ ಇಷ್ಟವಾಗಿಲ್ಲ, ಇದೇ ವಿಚಾರಕ್ಕೆ ಇಬ್ಬರಿಗೂ ಜಗಳವಾಗುತ್ತಾ ಅಂತ ಕಾದು ನೋಡಬೇಕಿದೆ..
ಚೈತನ್ಯ ,ರೆವಿನ್ಯೂ ಫ್ಯಾಕ್ಟ್ ನ್ಯೂಸ್