ಬಿಗ್ ಬಾಸ್ ಮನೆಯಲ್ಲಿ ಈ ವಾರ ಬಿಗ್ ಪ್ರಾಥಮಿಕ ಶಾಲೆ ಟಾಸ್ಕ್ ಆರಂಭವಾಗಿ ಸಖ್ಖತ್ ಮಜಾ ಕೊಡ್ತಿದೆ. ಮನೆಯ ಸದಸ್ಯರೇ ಶಿಕ್ಷಕರಾಗಿ, ಮಕ್ಕಳಾದ ಬೇರೆ ಸ್ಪರ್ಧಿಗಳಿಗೆ ಪಾಠ ಹೇಳುತ್ತಿದ್ದಾರೆ. ತನಿಷಾ ಮತ್ತು ಮೈಕಲ್ ಟೀಚರ್ ಆಗಿ ನೆನ್ನೆ ಎಲ್ಲರ ಮನರಂಜಿಸಿದ್ದರು.
ಈಗ ಶಿಕ್ಷಕರಾಗಿ ನಮ್ರತಾ ಮತ್ತು ತುಕಾಲಿ ಸರದಿ
ಇಂಗ್ಲೀಷ್ ಹೇಳಿಕೊಡುವ ಟೀಚರ್ ಆಗಿ ತುಕಾಲಿ ಬಂದಿದ್ದಾರೆ. ಆದರೆ ವಿದ್ಯಾರ್ಥಿಗಳು ತುಕಾಲಿ ಮೇಷ್ಟ್ರ ಪಾಠ ಕೇಳುವುದಕ್ಕಿಂತ ಕೊಡುವ ಕಾಟವೇ ಜಾಸ್ತಿಯಾಗಿದೆ. ‘ನಾನು ಹೇಳಿಕೊಟ್ಟಿದ್ದನ್ನು ಸರಿಯಾಗಿ ಹೇಳಬೇಕು’ ಎನ್ನುವ ಮೇಷ್ಟ್ರ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ವಿದ್ಯಾರ್ಥಿಗಳು, ಗುರುಗಳು ‘ಥೂ’ ಎಂದು ಉಗಿದರೆ ಅದನ್ನೂ ಪಾಲಿಸುತ್ತ ಗುರುಗಳಿಗೆ ಉಗಿಯುತ್ತಿದ್ದಾರೆ.
ಪಟಾಕಿ ಯಾರಾದಾದ್ರೂ ಅಗಿರಲಿ, ಹಚ್ಚೋರು ನಾವಾಗಿರ್ಬೇಕು
ವರ್ತೂರು ಸಂತೋಷ್, ತನಿಷಾ ಕೆನ್ನೆಯ ಮೇಲೆ ಬೆರಳಾಡಿಸುತ್ತ, ‘ಪಟಾಕಿ ಯಾರದ್ದಾದ್ರೂ ಆಗ್ಲಿ ಹಚ್ಚೋರು ಮಾತ್ರ ನಾವಾಗಿರ್ಬೇಕು’ ಅಂತ ಮಸ್ತ್ ಡೈಲಾಗ್ ಹೊಡೆದಿದ್ದಾರೆ. ಇನ್ನು ನಮ್ರತಾ ಮೇಡಂ ಜೊತೆ ಸಖತ್ ಆಗಿ ಡ್ಯಾನ್ಸ್ ಮಾಡಿರುವ ಸ್ಪರ್ಧಿಗಳು, ತುಕಾಲಿಗೆ ಬೇಜಾರಾಗುವಂತೆ ಅಯ್ಯೋ ಪಾಪ ಎನಿಸಿದ್ದಾರೆ.ಒಟ್ಟಾರೆ ಈ ದಿನದ ಟಾಸ್ಕ್ ನಲ್ಲಿ , ಮಕ್ಕಳಾಗಿರುವ ಬಿಗ್ ಬಾಸ್ ಸ್ಪರ್ಧಿಗಳು ಸಖ್ಖತ್ ಅಗಿ ಕುಣಿದು ಕುಪ್ಪಳಿಸಿದ್ದಾರೆ.
ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್