ಭೂವಂಚನೆ ಪ್ರಕರಣಕ್ಕೆ ಶಾಶ್ವತ ಪರಿಹಾರ ನೀಡಲು ಮುಂದಾದ ಕೈ ಸರ್ಕಾರ…!
ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರ ಒಂದು ಮಹತ್ತರ ಭೂವಂಚನೆ ಪ್ರಕರಣಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ ಶೇ.೪೪ ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಆದರೆ ರಾಜ್ಯದಲ್ಲಿ ೭೦ ಪ್ರತಿಶತದಷ್ಟು ಸಣ್ಣ ಹಾಗು ಅತಿ ಸಣ್ಣ ರೈತರಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.
ರೈತರಿಗೆ ಶಾಶ್ವತ ಪರಿಹಾರ ಸಿಗುತ್ತಾ…!
ರಾಜ್ಯದಲ್ಲಿ ಬರ ಹೆಚ್ಚಾಗುತ್ತಿದ್ದಂತೆ ಭೂವಂಚನೆ ಪ್ರಕರಣಗಳೂ ಸಹ ಹೆಚ್ಚಾಗುತ್ತಲೇ ಇವೆ. ಸರ್ಕಾರ ಮಾಡಿರುವ ಯೋಜನೆಗಳಿಂದ ಯಾವ ಲಾಭವು ಸಹ ಆಗುತ್ತಿಲ್ಲ. ಬರ ಪರಿಹಾರ ರೈರತ ಕೈ ಸೇರುತ್ತಿಲ್ಲ ಎಂಬ ಮಾಹಿತಿ ಕೇಳಿ ಬರುತಿದ್ದ ಹಿನ್ನೆಲೆ ರಾಜ್ಯ ಸರ್ಕಾರ ಶಾಶ್ವತ ಪರಿಹಾರ ನೀಡಲು ಮುಂದಾಗಿದೆ.ಹಾಗು ಈ ಮಾಹಿತಿ ಕುರಿತು ಬೆಲಗಾವಿ ಚಳಿ ಅಧಿವೇಶನದಲ್ಲಿ ಚರ್ಚೆ ಯಾಗಿದೆ.
ಪ್ರಕೃತಿ ವಿಕೋಪ ಪರಿಹಾರ…!
ಎಲ್ಲಾ ಜಮೀನಿನ ಪಹಣಿಗಳಿಗೆ ಆಧಾರ್ ಲಿಂಕ್ ಕಡ್ಡಾಯ ಮಾಡಿದರೆ ಮಾತ್ರ ಭೂವಂಚನೆಯನ್ನು ತಡೆಯಬಹುದು ಹಾಗೂ ಇದಲ್ಲದೆ ಜಮೀನಿನ ಮಾಲಿಕರನ್ನು ಸಹ ಖಾತ್ರಿಪಡಿಸಲು ಸಾಧ್ಯವಾಗುತ್ತದೆ. ಆಧಾರ್ ಲಿಂಕ್ ಆದಲ್ಲಿ ಪ್ರಕೃತಿ ವಿಕೋಪವಾದ ಸಂದರ್ಭದಲ್ಲಿ ಪರಿಹಾರ ಸಹ ನೀಡಬಹುದು ಎಂದು ಹೇಳಲಾಗಿದೆ. ಆಂಧ್ರ ಪ್ರದೇಶದಲ್ಲಿ ಈಗಾಗಲೇ ಈ ಪ್ಯಾನ್ ಜಾರಿಯಲ್ಲಿದ್ದು ಆರ್ ಟಿಸಿ ಯೊಂದಿಗೆ ಆಧಾರ್ ಲಿಂಕ್ ಮಾಡಲಾಗಿದೆ.
ಚೈತನ್ಯ ರೆವಿನ್ಯೂ ಫ್ಯಾಕ್ಟ್ ನ್ಯೂಸ್