18.5 C
Bengaluru
Friday, November 22, 2024

ನಿವೇಶನದಲ್ಲಿ ಬಾವಿ ಅಥವಾ ಬೋರ್‌ವೆಲ್ ವಾಸ್ತು ಪ್ರಕಾರ ಕೊರೆಸಿದರೆ ಏನು ಲಾಭ?

ಮನೆ ವಾಸ್ತು ಕೇವಲ ಮನೆಗೆ ಮಾತ್ರ ಸೀಮಿತವಲ್ಲ. ಮನೆಯ ಆವರಣದಲ್ಲಿ ಕೊರೆಸುವ ಬೋರ್‌ವೆಲ್ ಅಥವಾ ಬಾವಿಗೂ ವಾಸ್ತು ಅನ್ವಯಿಸುತ್ತದೆ. ಮಹಾ ವಾಸ್ತು ಶಾಸ್ತ್ರ ಪ್ರಕಾರ ಬೋರ್‌ವೆಲ್ ಅಥವಾ ಬಾವಿ ಕೊರೆಸುವಾಗ ಮೊದಲು ವಾಸ್ತು ಗುರುತಿಸಬೇಕು. ಇಲ್ಲದಿದ್ದರೆ ನಾನಾ ಅನಾಹುತಗಳು ಸಂಭವಿಸುವ ಅಪಾಯ ಇರುತ್ತದೆ ಎಂದು ಮಹಾವಾಸ್ತು ಶಾಸ್ತ್ರ ಹೇಳುತ್ತದೆ.

ಇತ್ತೀಚಿನ ದಿನ ಮಾನಗಳಲ್ಲಿ ಒಂದು ನಿವೇಶನವಿದ್ದರೂ ಬೋರ್‌ವೆಲ್ ಕೊರೆಸುವುದು ಸಾಮಾನ್ಯ. ಆದರೆ ಅದನ್ನು ಸೂಕ್ತ ಜಾಗದಲ್ಲಿ ಕೊರೆಸದೇ ಪಡಬಾರದ ಕಷ್ಟ ಪಟ್ಟಿರುತ್ತಾರೆ. ಎದುರಿಲಾಗದ ಸಮಸ್ಯೆ ಎದುರಿಸುವಂತಾಗಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಬೋರ್‌ವೆಲ್ ಅಥವಾ ಬಾವಿ ಕೊರೆಸುವಾಗಲೂ ವಾಸ್ತು ಲೆಕ್ಕಾಚಾರ ನೋಡುವುದು ಒಳಿತು.

ಮಹಾವಾಸ್ತು ಪ್ರಕಾರ ಈಶಾನ್ಯ, ಪೂರ್ವ ಈಶಾನ್ಯ ಮತ್ತು ಉತ್ತರ ಈಶಾನ್ಯ ದಿಕ್ಕುಗಳು ಭಾವಿ ಮತ್ತು ಬೋರ್ ವೆಲ್ ಕೊರೆಸಲು ಸೂಕ್ತವಾದ ಸ್ಥಳಗಳು. ಆದರೆ ಅದರಲ್ಲಿ ಲೆಕ್ಕಾಚಾರ ಮಾಡಿ ವಾಸ್ತು ಪ್ರಕಾರ ಸ್ಥಳ ಗುರುತು ಮಾಡಬೇಕು.

ವೃತ್ತಾಕಾರದಲ್ಲಿ ಭೂಮಿಯ ಕೆಳಗೆ ಕೊರೆಯಬಹುದು:
ಮೇಲುಗಡೆ ವೃತ್ತಾಕಾರದಲ್ಲಿ ಇರುವುದು ಒಳ್ಳೆಯದು. ಒಂದು ವೇಳೆ ಚೌಕಾಕಾರವಾಗಿ ಕೊರೆದರೆ ಮನೆಗೆ ಒತ್ತಡ ಎದುರಾಗುತ್ತದೆ. ಮನೆಯಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ಬಾವಿಯ ಕಟ್ಟಡ ಕಟ್ಟುವಾಗ, ಅದು ಮನೆಯ ಪಾಯಾಗಿಂತಲೂ ಸ್ವಲ್ಪ ಕೆಳಗೆ ಇರಬೇಕು. ನೈರುತ್ಯ ಮೂಲೆಗಿಂತಲೂ ಜಾಸ್ತಿಇರಬಾರದು. ಪೂರ್ವ ಮತ್ತು ಉತ್ತರ ಭಾಗದ ಕಾಂಪೌಂಡ್ ಗೋಡೆಗಳಿಗೆ ಹೊಂದಿಕೊಳ್ಳುವಂತೆ ಇರಬಾರದು.

ಬೋರ್‌ವೆಲ್, ಬಾವಿ ಕೊರೆಸುವ ಜಾಗ ಗುರುತು ಹೇಗೆ :
ಮೊದಲು ಈಶಾನ್ಯ ದಿಕ್ಕಿನಿಂದ ನೈರುತ್ಯ ದಿಕ್ಕಿಗೆ ಗೆರೆ ಎಳೆದಾಗ, ಈ ಗೆರೆ ಮೇಲೆ ಬಾವಿ ಅಥವಾ ಬೋರ್‌ವೆಲ್ ಕೊರೆಯಬಾರದು. ಮನೆಯ ಕಾಂಪೌಂಡ್ ಗೆರೆ ಮೇಲೆ ಬೋರ್‌ವೆಲ್ ಅಥವಾ ಬಾವಿ ಕೊರೆಯಬಾರದು.

ಪಂಪ್‌ಸೆಟ್ ಅಳವಡಿಸುವಾಗ ಬಾವಿ ಅಥವಾ ಬೋರ್‌ವೆಲ್‌ಗೆ ಒಂದು ಮೇಲ್ಚಾವಣಿ ಮಾಡಬೇಕು. ಬಾವಿ ಮತ್ತು ಬೋರ್‌ವೆಲ್ ಉತ್ತರ ಈಶಾನ್ಯದಲ್ಲಿ ಇದ್ದರೆ, ಆ ಕುಟುಂಬದಲ್ಲಿ ಸಂತಸ ಮನೆ ಮಾಡಿರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಪೂರ್ವ ಈಶಾನ್ಯ ವಲಯದಲ್ಲಿ ಬೋರ್ ವೆಲ್ ಅಥವಾ ಬೋರ್‌ವೆಲ್ ಬಂದರೆ, ಆ ಮನೆಯ ಯಜಮಾನ ಖ್ಯಾತಿ ಗೊಳಿಸುತ್ತಾನೆ. ಹಣಕಾಸು ಸಂತೋಷ ಜತೆಗೆ ಜನಪ್ರಿಯನಾಗುತ್ತಾನೆ. ಸಂಪೂರ್ಣ ಈಶಾನ್ಯ ವಾಲಯದಲ್ಲಿ ಬಾವಿ ಅಥವಾ ಬೋರ್‌ವೆಲ್ ಕೊರೆಯಬಾರದು. ಪೂರ್ವ ದಿಕ್ಕಿನಲ್ಲಿ ಬೋರ್‌ವೆಲ್ ಅಥವಾ ಬಾವಿ ಇದ್ದರೆ, ಶುಭ ಸಮಾಚಾರಗಳು ತಲುಪುತ್ತವೆ. ಉತ್ತರ ಭಾಗದಲ್ಲಿ ಬೋರ್‌ವೆಲ್ ಅಥವಾ ಬಾವಿ ಕೊರೆದರೆ, ಮನೆಯ ಮಹಿಳೆಯರಿಗೆ ತುಂಬಾ ಒಳ್ಳೆಯದಾಗುತ್ತದೆ.

ಬಾವಿ ಮತ್ತು ಬೋರ್‌ವೆಲ್ ಯಾವ ಕಡೆ ಇರಬಾರದು:
ದಕ್ಷಿಣ ದಿಕ್ಕು:
ದಕ್ಷಿಣ ದಿಕ್ಕಿನಲ್ಲಿ ಬಾವಿ ಅಥವಾ ಬೋರ್‌ವೆಲ್ ಇರಬಾರದು. ಇದ್ದರೆ, ಹೆಣ್ಣು ಮಕ್ಕಳ ಅಕಾಲಿಕ ನಿಧನವಾಗುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಬಾವಿ ಅಥವಾ ಬೋರ್ ವೆಲ್ ಇರಬಾರದು. ಇದ್ದರೆ, ಮನೆಯ ಗಂಡು ಮಕ್ಕಳು ರೋಗಕ್ಕೆ ತುತ್ತಾಗುತ್ತಾರೆ. ಹಣಕಾಸಿನ ವ್ಯಯವಾಗುತ್ತದೆ. ಪೂರ್ವ ಆಗ್ನೇಯದಲ್ಲಿ ಬಾವಿ ಮತ್ತು ಬೋರ್‌ವೆಲ್ ಇರಬಾರದು. ಇದ್ದರೆ, ಮನೆಯವರಿಗೆ ಮತ್ತು ಮನೆಯ ಮಕ್ಕಳಿಗೆ ಅನಾಹುತ ಆಗುತ್ತದೆ. ಬೆಂಕಿ ಅನಾಹುತ, ಅಪಘಾತ, ಕಳ್ಳತನ ಆಗುತ್ತದೆ.

ದಕ್ಷಿಣ ಆಗ್ನೇಯದಲ್ಲಿ ಬಾವಿ ಅಥವಾ ಬೋರ್‌ವೆಲ್ ಇದ್ದರೆ, ಹೆಣ್ಣು ಮಕ್ಕಳು ರೋಗ ಗ್ರಸ್ಥರಾಗುತ್ತಾರೆ. ಹಣಕಾಸಿನ ವ್ಯಯ. ಮನೆಯವರು ದುರ್ವಸನಗಳಿಗೆ ತುತ್ತಾಗುತ್ತಾರೆ. ಬೆಂಕಿ ಅನಾಹುತ, ಕಳ್ಳತನ ಭಯ ಉಂಟಾಗುತ್ತದೆ.

ದಕ್ಷಿಣ ನೈರುತ್ಯ:
ಈ ವಲಯದಲ್ಲಿ ಬಾವಿ ಮತ್ತು ಬೋರ್‌ವೆಲ್ ಕೊರೆಯುವುದು ಸೂಕ್ತವಲ್ಲ. ಕೊರೆದಲ್ಲಿ, ಮಹಿಳೆಯರು ಭಯಾನಕ ರೋಗಗಳಿಗೆ ತುತ್ತಾಗುತ್ತಾರೆ. ಹಣ ವ್ಯಯ, ಸಾಲಗಾರರಾಗುತ್ತಾರೆ. ಅಕಾಲಿಕ ಮೃತ್ಯು ಸಂಭವಿಸುತ್ತದೆ.

ಪಶ್ಚಿಮ ನೈರುತ್ಯ:
ಪಶ್ಚಿಮ ನೈರುತ್ಯದಲ್ಲಿ ಬೋರ್‌ವೆಲ್ ಮತ್ತು ಬಾವಿ ಇರಬಾರದು. ಇದ್ದರೆ ಗಂಭೀರ ರೋಗಗಳಿಗೆ ತುತ್ತಾಗುತ್ತಾರೆ ಹಾಗೂ ಕೆಟ್ಟ ಗುಣ ಹೊಂದಿರುತ್ತಾರೆ. ಅಕಾಲಿಕ ಮರಣ ಸಂಭವಿಸುತ್ತದೆ.

ಪಶ್ಚಿಮ ವಾಯುವ್ಯ :
ಬಾವಿ ಅಥವಾ ಬೋರ್‌ವೆಲ್ ಪಶ್ಚಿಮ ವಾಯುವ್ಯದಲ್ಲಿದ್ದರೆ, ಮನೆಯಲ್ಲಿ ಗಂಡು ಸಂತಾನಕ್ಕೆ ಪೆಟ್ಟು ಬೀಳುತ್ತದೆ. ಕೆಟ್ಟ ನಡೆ, ಗುಣ ಹಣ ವ್ಯಯ, ನ್ಯಾಯಾಲಯ ಸಮಸ್ಯೆಗಳಿಗೆ ಎದುರಾಗುತ್ತಾರೆ. ಜತೆಗೆ ಮನೆಯಲ್ಲಿ ಕಳ್ಳತನ ಸಾಧ್ಯತೆ ಇರುತ್ತದೆ. ಮನೆಯಲ್ಲಿ ಶಾಂತಿ ಇರುವುದಿಲ್ಲ.

ಉತ್ತರ ವಾಯುವ್ಯ :
ಇಲ್ಲಿ ಬೋರ್‌ವೆಲ್‌,ಭಾವಿ ಕೊರೆದರೆ ವೈರತ್ವ ಜಾಸ್ತಿಯಾಗುತ್ತದೆ. ಮಹಿಳೆಯರಿಗೆ ಮಾನಸಿಕ ನೆಮ್ಮದಿ ಇರುವುದಿಲ್ಲ. ಮನೆಯವರು ಮನೆ ಬಿಟ್ಟು ಹೋಗುವ ಸಾಧ್ಯತೆಗಳಿರುತ್ತವೆ.

Related News

spot_img

Revenue Alerts

spot_img

News

spot_img