25.4 C
Bengaluru
Wednesday, January 15, 2025

ಚಮಚಾ ಸಂಘದ ಒಂದು ವಿಕೆಟ್ ಡೌನ್ ಆಗಿದೆ..!ನೆಕ್ಸ್ಟ್ ನಮ್ರತಾ ಬರೋದು ಪಕ್ಕಾ..!

ಹೀಗಂತ ನಾವಲ್ಲ ಹೇಳ್ತಿರೋದು..ಚಮಚ ಸಂಘದ ಒಂದು ವಿಕೆಟ್ ಡೌನ್ ಆಗಿದೆ..!ನಮ್ರತಾ ಬರೋದು ಯಾವಾಗ..? ಎಂದು ಬಿಗ್ ಬಾಸ್ ವೀಕ್ಷಕರು ಸ್ನೇಹಿತ್ ಹೊರಬಂದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡುವ ಮೂಲಕ ಆಕ್ರೊಶ, ಕುತೂಹಲವನ್ನ ಹೊರಹಾಕುತ್ತಿದ್ದಾರೆ. ಕಲೆದ ವಾರದ ಕಳಪೆ ಪ್ರದರ್ಶನವನ್ನ ನೋಡುತ್ತಾ ಹೋದ್ರೆ ಅದರ ಪಟ್ಟ ಕಾರ್ತಿಕ್ ಗೆ ಸಿಕ್ಕಿತ್ತು. ವಾರವಿಡೀ ಶ್ರಮಪಟ್ಟು ಕಾರ್ತಿಕ್ ತುಂಬಾ ಚೆನ್ನಾಗಿ ಆಡಿದ್ರು. ಆದ್ರೆ ಟಾಸ್ಕ್ ಸಮಯದಲ್ಲಿ ವಿನಯ್ ವರ್ತನೆ ಅತಿರೇಕವಾದಾಗ ಕಾರ್ತಿಕ್ ಅದನ್ನ ತೋರ್ಪಡಿಸಲು ಹೊರಹಾಕಿದಂತಹ ಸಿಟ್ಟಿನ ದಾರಿ ಅವರಿಗೆ ಕಳಪೆ ಪ್ರದರ್ಶನದ ಕಳಂಕವನ್ನ ತಂದಿಟ್ಟಿತ್ತು.

ನೆಲಕ್ಕೆ ಹೊಡೆದಿದ್ದ ಚಪ್ಪಲಿ ಬೌನ್ಸ್ ಆಗಿ *ವಿನಯ್ ಗೆ ಬಿದ್ದಿತ್ತು..ಇದೇ ದೊಡ್ಡ ಕಾರಣ ಮಾಡಿಕೊಂಡ ನಮ್ರತಾ..!*

ಟಾಸ್ಕ್ ಸಮಯದಲ್ಲಿ ಬಹುಪಾಲು ತಾಳ್ಮೆಯಿಂದಿದ್ದ ಕಾರ್ತಿಕ್ ಅದ್ಯಾಕೋ ತಮ್ಮ ತಾಳ್ಮೆ ಕಳೆದುಕೊಂಡು ಇದ್ದಕ್ಕಿದ್ದಂತೆ ತನ್ನ ಕಾಲಿನ ಚಪ್ಪಲಿ ತೆಗೆದು ನೆಲಕ್ಕೆ ಹೊಡೆದಿದ್ರು. ಇದೆ ಕಾರಣ ಇಟ್ಕೊಂಡು ಮನೆಯ ಎಲ್ಲಾ ಚಮಚಾ ಸಂಘ ಕಾರ್ತಿಕ್ ಅವರನನ್ನ ಬೇಕಾಗಿ ಕಳಪೆ ಪ್ರದರ್ಶನ ಎಂದು ಪಟ್ಟ ಕಟ್ಟಿದ್ರು. ಆದ್ರೆ ಬೇಕಾಗಿ ಹೊಡೆದಿಲ್ಲವೆಂದು ಸಾಕಷ್ಟು ಸಾರಿ ಕಾರ್ತಿಕ್ ಕಿಚ್ಚ ಸುದೀಪ್ ಮುಂದೆ ಕಣ್ಣೀರು ಹಾಕಿ ಕ್ಷಮೆ ಯಾಚಿಸಿದ್ರು.

ಪವಿ ಪೂವಪ್ಪರಿಗೆ ತಲೆತುಂಬಿಸಿ ಕಾರ್ತಿಕ್ ಗೆ ಕಳಪೆ ಕೊಡಿಸಿದ್ದ ನಮ್ರತಾ..!

ಇನ್ನು ನಮ್ರತಾಗೆ ಕೊಡಲು ಯಾವುದೇ ಕಾರಣವಿಲ್ಲದ್ದಕ್ಕೆ ಕಾರ್ತಿಕ್ ಮೇಲೆ ಬೇಕಾಗಿ ಪವಿ ಅವರಿಗೆ ವಾಶ್ ರೂಂನಲ್ಲಿ ಕಾರ್ತಿಕ್ ಅನುಚಿತವಾದ ವರ್ತನೆ ತೋರಿದ್ದಾರೆ ಎಂದು ರೀಸನ್ ಕೊಟ್ಟಿದ್ರು ಆದ್ರೆ ಸ್ವತಃ ಪವಿ ಪೂವಪ್ಪಗೆ ಇದರಲ್ಲಿ ಅನುಚಿತ ವರ್ತನೆ ಅಥವಾ ಬೇಜಾರೋಗೋದು ಏನು ಇಲ್ಲ ಎಂದ್ರು ಸಹ ನಮ್ರತಾ ಬೇಕಾಗಿ ಅವರನ್ನ ಅದನ್ನೆ ದೊಡ್ಡ ಕಾರಣ ಕೊಟ್ಟು ಅವರ ತಲೆಯಲ್ಲಿ ಇಲ್ಲದಿದ್ದೆಲ್ಲಾ ತುಂಬಿ ಕಳಪೆ ಕೊಡುವಂತೆ ಮಾಡಿದ್ದು, ಬಿಗ್ ಬಾಸ್ ನೋಡುಗರನ್ನ ಮತ್ತಷ್ಟು ಆಕ್ರೋಶಕ್ಕೆ ಗುರಿ ಮಾಡಿತ್ತು.

ನಿಂದು “ಪುಟಗೋಸಿ ರೀಸನ್ಸ್” ಎಂದು ಸ್ನೇಹಿತ್ ನನ್ನ ಬೈಯ್ದಿದ್ದ ನಮ್ರತಾ ಇದೀಗ ಮೊಸಳೆ ಕಣ್ಣೀರು..!

ನನ್ನ ಯಾಕೆ ಕ್ಯಾಪ್ಟೆನ್ಸಿ ಓಟದಿಂದ ಹೊರಗಿಟ್ಟಿದ್ದ ಅನ್ನೋ ಕಾರಣದಿಂದ ಸ್ನೇಹಿತ್ ಜೊತೆ ಸರಿಯಾಗಿ ಮಾತನಾಡದೆ ಬಾಯಿಗೆ ಬಂದಂತೆ ಅವಾಚ್ಯ ಶಬ್ಧಗಳನ್ನ ನಮ್ರತಾ ಬಹಳಷ್ಟು ಬಳಸಿದ್ದಳು ಆದರೆ ಸ್ನೇಹಿತ್ ಮನೆಯಿಂದ ಹೊರಬಿದ್ದ ಕೂಡಲೇ ಮೊಸಳೆ ಕಣ್ಣೀರು ಹಾಕೋಕೆ ಶುರು ಮಾಡಿಕೊಂಡಿದ್ದಾಳೆ ಅಂತ ನೋಡುಗರು ಕಿಡಿಕಾರಿದ್ದಾರೆ. ಇನ್ನು ಕೆಲವರಂತು ಸ್ನೇಹಿತ್ ಆಚೆ ಬರೋಕೆ ಕಾರಣ ನಮ್ರತಾ. ಆದಷ್ಟು ಬೇಗ ಈ ಚಮಚಾ ಸಂಘದವರು ಆಚೆ ಬರಲಿ ಅಂತಾ ಬಿಗ್ ಬಾಸ್ ಪ್ರೇಕ್ಷಕರು ಮಾತನಾಡುತ್ತಿದ್ದಾರೆ.

ಚೈತನ್ಯ, ರೆವೆನ್ಯೂ ಫ್ಯಾಕ್ಟ್ ನ್ಯೂಸ್

Related News

spot_img

Revenue Alerts

spot_img

News

spot_img