ರಾಜ್ಯದಲ್ಲಿ ಮದ್ಯ ಸೇವನೆ ಪ್ರಮಾಣ ದಿಢೀರ್ ಹೆಚ್ಚಾಗಿರುವ ಕಾರಣ ಇದ್ದಕ್ಕಿದ್ದಂತೆ ಮದ್ಯ ಪೂರೈಕೆ ಮತ್ತು ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಹೊಸ ವರ್ಷದ ಸನ್ನಿಹಿತವಾಗಿರೊದ್ರಿಂದ ಮತ್ತಷ್ಟು ಮದ್ಯ ಮಾರಾಟ ಸಾಧ್ಯತೆ
ಹೊಸ ವರ್ಷ ಇನ್ನೇನು ಆದಷ್ಟು ಬೇಗ ಬರಲಿದೆ. ಡಿಸೆಂಬರ್ ತಿಂಗಳ ಅಂತ್ಯವಾಗಿರುವ ಕಾರಣ ಮದ್ಯ ಪ್ರಿಯರು ಬಹಳಷ್ಟು ಮದ್ಯ ಖರೀದಿ ಮಾಡುವಂತಹ ಯೋಚನೆಯಲ್ಲಿ ಪಕ್ಕ ಇದ್ದೇ ಇರ್ತಾರೆ..ಹೀಗಾಗಿ ರಾಜ್ಯ ಸರ್ಕಾರಕ್ಕೆ ಮತ್ತಷ್ಟು ಅದಾಯ ಬರೋದು ಪಕ್ಕಾ..!
ಬಿಯರ್ ಬೆಲೆಯಲ್ಲಿ ಗಣನೀಯ ಏರಿಕೆ..!
ಬಿಯರ್ ಸೇರಿದಂತೆ ಇತರೆ ಮಾದರಿಯ ಮದ್ಯ ಮಾರಾಟದ ಪ್ರಮಾಣ 0.43 ಶೇ. ಹೆಚ್ಚಾಗಿದ್ದು, ಗ್ಯಾರಂಟಿ ಯೋಜನೆಗಳನ್ನು ನೀಡಿ ಬೇರೆ ಯೋಜನೆಗಳಿಗೆ ಹಣ ಹೊಂದಿಸಲು ಕಷ್ಟಪಡುತ್ತಿದ್ದ ಸರ್ಕಾರಕ್ಕೆ ಮದ್ಯ ಪ್ರಿಯರು ನಾವಿದ್ದೇವೆ ನಿಮ್ಮ ಜೊತೆ ಎಂದು ನಿಂತಂತಿದೆ.
ಎಣ್ಣೆ ರೇಟ್ ಹೆಚ್ಚಾದ್ರು ತಲೆಕೆಡಿಸಕೊಳ್ಳದ ಎಣ್ಣೆಪ್ರಿಯರು
ಎಲ್ಲಾ ತರಹದ ಮದ್ಯದ ದರ ಹೆಚ್ಚಾದರೂ ಮದ್ಯ ಪ್ರಿಯರು ಕುಡಿಯುವದನ್ನು ಕಡಿಮೆ ಮಾಡಿಲ್ಲ. ಕಳೆದ ವರ್ಷ ದಿನಕ್ಕೆ 80 ಕೋಟಿ ರೂ. ಸರಾಸರಿ ಆದಾಯ ಬರುತ್ತಿತ್ತು.ಈಗ ಒಂದು ದಿನಕ್ಕೆ 90 ಕೋಟಿ ರೂ,ಗೆ ಏರಿಕೆಯಾಗಿದೆ.. ಇನ್ನು ಅದರಲ್ಲಿಯೂ ಚಳಿಗಾಲ ಶುರುವಾಗ್ತಿದ್ದಂತೆ ರಾಜ್ಯದಲ್ಲಿ ಬಿಯರ್ ಗೆ ಭಾರೀ ಬೇಡಿಕೆ ಬಂದಿದೆ. ನವೆಂಬರ್ನಲ್ಲಿ ಬರೋಬ್ಬರಿ 6 ಲಕ್ಷ ಬಿಯರ್ ಕ್ರೇಟ್ ಸೇಲ್ ಆಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕಳೆದ ವರ್ಷದ ಬಿಯರ್ ಮಾರಾಟಕ್ಕು ಈ ವರ್ಷದ ಮಾರಾಟಕ್ಕು ಬಹು ಅಂತರ
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 29.95 ಲಕ್ಷ ಬಾಕ್ಸ್ ಸೇಲ್ ಆಗಿದ್ರೆ , ಈ ವರ್ಷ ನವೆಂಬರ್ ನಲ್ಲಿ 35.05 ಲಕ್ಷ ಬಾಕ್ಸ್ ಮಾರಾಟವಾಗಿದೆ. 2023 ನವೆಂಬರ್ ನಲ್ಲಿ 2,855 ಕೋಟಿ ರೂ. ಆದಾಯ ಬಂದಿದೆ.ಹೊಸ ವರ್ಷದ ಜನವರಿ ಅಂತ್ಯಕ್ಕೆ ಎಷ್ಟರ ಮಟ್ಟಿಗೆ ರಾಜ್ಯ ಸರ್ಕಾರಕ್ಕೆ ಆದಾಯ ಬರಲಿದೆ ಎಂಬುದು ಕುತೂಹಲವಾಗಿರೋದ್ರಿಂದ ಕಾದು ನೋಡಬೇಕಿದೆ..
ಚೈತನ್ಯ ರೆವಿನ್ಯೂ, ಫ್ಯಾಕ್ಟ್ ನ್ಯೂಸ್, ಬೆಂಗಳೂರು