20.8 C
Bengaluru
Thursday, December 19, 2024

ಭಾರತದಲ್ಲಿ ಶ್ರೀಮಂತ ಮನೆ ಯಾವ್ದಿದೆ ಎಂದು ನಿಮಗೆ ಗೊತ್ತಿದ್ಯಾ…!

ಜಿಕೆ ಹೌಸ್:

ವಿಶ್ವದ ಅತಿದೊಡ್ಡ ಉತ್ಪಾದಕ ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾ ಹೆಸರು ವಾಸಿಯಾಗಿದ್ದಾರೆ. ಗೌತಮ್ ಸಿಂಗಾನಿ ರೇಮಂಡ್ ಕಂಪನಿಯನ್ನು ವಹಿಸಿಕೊಂಡಾಗ ಅದರ ಲಾಭ ಹೆಚ್ಚಾಯಿತು. ರೇಮಂಡ್ ೫೦,೦೦೦೦ ಕ್ಕೂ ಆದಾಯವನ್ನು ಹೊಂದಿದೆ. ರೇಮಂಡ್ ಗ್ರೂಪ್‌ನ ಮಾಲೀಕರಾಗಿ ಗೌತಮ್ ಸಿಂಘಾನಿಯಾ ಕುಟುಂಬವು ಫ್ಯಾಬ್ರಿಕ್ ಮತ್ತು ಜವಳಿಗಳ ಮೂಲಕ ಸಂಪತ್ತನ್ನು ಗಳಿಸಿದರು. ಗೌತಮ್ ಸಿಂಘಾನಿಯ ಖಾಸಗಿ ನಿವಾಸ ಜಿಕೆ ಹೌಸ್ ಅನ್ನು ಪ್ರಪಂಚದಾದ್ಯಂತ ಐಷಾರಾಮಿ ಆಸ್ತಿ ಎಂದು ಪರಿಗಣಿಸಲಾಗಿದೆ. 30 ಮಹಡಿಗಳು ಹೊಂದಿರುವ ಇದು 6,000 ಕೋಟಿ ವೆಚ್ಚವಾಗಿದೆ. ಈ ಪ್ರಭಾವಶಾಲಿ ಕಟ್ಟಡವು ಭಾರತದ ಎರಡನೇ ಅತಿ ಎತ್ತರದ ಖಾಸಗಿ ನಿವಾಸವಾಗಿದೆ. ಎ.ಡಿ ಯ ಪ್ರಕಾರ ಇದು ಆಂಟಿಲಿಯಾ ನಂತರ ಮುಂಬೈನಲ್ಲಿ ಎರಡನೇ ಅತಿ ಎತ್ತರದ ಕಟ್ಟಡವಾಗಿದೆ ಎಂದು ಹೇಳಲಾಗಿದೆ. ನಾವೆಲ್ಲ ಆಶ್ಚರ್ಯ ಪಡಬಹುದು ೬,೦೦೦ ಕೋಟಿಯದು ಏನಿದೆ ಇದರಲ್ಲಿ ಎಂದು. ಗೌತಮ್ ಸಿಂಘಾನಿಯ ಹೆಲಿಕಾಪ್ಟರ್ ಗಳೂ ನಿಲ್ಲಲು ಹೆಲಿಪ್ಯಾಡ್ ನಿರ್ಮಿಸಿದ್ದಾರೆ. ಕುಟುಂಬದವರೊಡನೆ ಕಾಲ ಕಳೆಯಲು ಸ್ಥಳ, ಎರಡು ಈಜುಕೊಳಗಳು, ಉದ್ಯಾನವನ್ನು ನಿರ್ಮಿಸಿದ್ದಾರೆ. ಜೆಕೆ ಹೌಸ್‌ನ ಹೊರಭಾಗವು ನಯವಾದ ವಿನ್ಯಾಸವನ್ನು ಹೊಂದಿದೆ. ೫ ಮಹಡಿಯನ್ನು ವಾಹನ ನಿಲುಗಡೆಗೆ ಜಾಗವನ್ನು ನಿರ್ಮಿಸಲಾಗಿದೆ. ಐಷಾರಾಮಿ ಕಾರುಗಳನ್ನು ನಾವು ಪಾರ್ಕಿಂಗ್ ಜಾಗದಲ್ಲಿ ಕಾಣಬಹುದು. ಜೆಕೆ ಹೌಸ್ನ ಹೊರಗೆ ಅಮೃತಶಿಲೆಯ ಮೇಲಾವರಣ ಗಮನ ಸೆಳೆದಿದೆ.

2,ಎರಡನೇ ಅತಿ ದೊಡ್ಡ ಮನೆ:

ರತನ್ ಟಾಟ ಭಾರತದ ಬಹು ದೊಡ್ಡ ಉದ್ಯಮಿ, ಹಾಗು ಒಳ್ಳೆಯ ಗುಣ ಮೌಲ್ಯವನ್ನು ಹೊಂದಿರುವವರು. ರತನ್ ಟಾಟ ದೇಶದ ಜನರಿಗೆ ಕಷ್ಟ ಎಂದು ಬಂದರೆ ಅವರ ಆಸ್ತಿಯನ್ನು ದೇಶಕ್ಕೆ ಕೊಡಲು ಸಿದ್ದವಿರುವ ದೊಡ್ಡ ಮನಸನ್ನು ಹೊಂದಿರುವ ವ್ಯಕ್ತಿ. ೧೯೬೨ ರಲ್ಲಿ ವ್ಯಾಪಾರ ಜಗತ್ತನ್ನು ಪ್ರವೇಸಿದ ರತನ್ ಟಾಟ ಇಂದು ಕೂಡ ಮುಂದುರೆಸುತ್ತಿದ್ದಾರೆ. ಭಾರತದ ಅತ್ಯಂತ ಭವ್ಯವಾದ ಮನೆಗಳಲ್ಲಿ ಟಾಟಾ ಮನೆಯು ಒಂದಾಗಿದೆ. ರತನ್ ಟಾಟಾ ಅವರು ಮೂರು ಅಂತಸ್ತಿನ ಮನೆಯನ್ನು ಕೊಲಾಬಾ ಪೋಸ್ಟ್ ಆಫೀಸ್ ಎದುರು ಹೊಂದಿದ್ದಾರೆ. ೧೩,೩೫೦ ಚದರ ಅಡಿ ವಿಸ್ತಾರವಾದ ಪ್ರದೇಶದಲ್ಲಿ ಟಾಟಾ ಅವರ ಮನೆಯನ್ನು ನಿರ್ಮಿಸಿದ್ದಾರೆ. ರತನ್ ಟಾಟಾ ಅವರು ಟಾಟಾ ಸನ್ಸ್ ನ ಗುಂಪಿನ ಅಧ್ಯಕ್ಷ ಸ್ಥಾನ ದಿಂದ ೨೦೧೨ ರಲ್ಲಿ ಕೆಳಗಿಳಿದರು. ನಂತರ ರತನ್ ಟಾಟ ಅವರಿಗೆ ನಿವೃತ್ತಿ ನಿವಾಸ ಎಂದು ನಿರ್ಮಿಸಲಾಯಿತು. ಟಾಟ ಅವರ ಮನೆ ಬಿಳಿಯ ಬಣ್ಣದಿಂದ ಕೂಡಿದೆ. ಟಾಟಾ ಮನೆ ಸರಳತೆ ಹಾಗು ಕನಿಷ್ಠತೆಯ ವಿಷಯದ ಮೇಲೆ ವಿನ್ಯಾಸಗೊಳಿಸಲಾಗಿದೆ.

ಅಮಿತಾ ಬಚ್ಚನ್ ಮನೆ


ಬಾಲಿವುಡ್ ನಲ್ಲಿ ಒಂದು ದೊಡ್ಡ ಹೆಸರು ಮಾಡಿದವರಾಗಿದ್ದಾರೆ. ಅಮಿತಾಬ್ ಬಚ್ಚನ್ ಹಾಗು ಪತ್ನಿ ಜಯಾ ಬಚ್ಚನ್ ತಮ್ಮ ಕನಸಿನ ಮನೆಯೊಂದನ್ನು ವಾಸಿಸುತ್ತಿದ್ದಾರೆ. ಬಚ್ಚನ್ ಜೊತೆಗೆ ಮಗ ಅಭಿಷೇಕ್ ಬಚ್ಚನ್, ಐಶ್ವರ್ಯ ಬಚ್ಚನ್ ಮೊಮ್ಮಗಳು ಎಲ್ಲರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಬಚ್ಚನ್ ಮನೆ ಕೂಡ ಒಂದು ಅಧ್ಭುತ ಸ್ಥಳಗಳಲ್ಲೊಂದಾಗಿದೆ. ಅಮಿತಾಭ್ ಬಚ್ಚನ್ ಮನೆ ಎರಡು ಅಂತಸ್ತಿನ ಬಂಗಲೆಯಾಗಿದೆ. ಹೊಳೆಯುವ ಕಲಾಕೃತಿ ಶ್ರೀಮಂತವಾಗಿ ಅಲಂಕಾರ ಮಾಡಲಾಗಿದೆ. ರಾಜ ಮನೆ ತನದ ರೀತಿ ಮನೆ ಇದೆ. ಜಲ್ಸಾ ಎಂದು ಈ ಮನೆಯ ಹೆಸರನ್ಮು ಇಡಲಾಗಿದೆ. ನಿದೇಶಕ ರಮೇಶ ಸಿಪ್ಪಿ “ಸತ್ತೆ ಪೆ ಸತ್ತ ಚಿತ್ರದಲ್ಲಿ ಅವರ ಅಭಿನಯಕ್ಕೆ ಮೆಚ್ಚಿ ಸಂಭಾವನೆ ಕೊಡುವ ಬದಲಿಗೆ ಉಡುಗೊರೆಯಾಗಿ ಈ ಮನೆಯನ್ನು ನೀಡಿದ್ದಾರೆ. ಅಂದಾಜು ೧೦೦- ೧೨೦ ಕೋಟಿ ರೂ. ಎಂದು ಹೇಳಲಾಗಿದೆ.

Related News

spot_img

Revenue Alerts

spot_img

News

spot_img