25.5 C
Bengaluru
Thursday, December 19, 2024

ಡಿಕೆಶಿಗೆ ಬಿಗ್‌ ರಿಲೀಫ್ ;ಸಿಬಿಐ ತನಿಖೆಗೆ ಅನುಮತಿ ಪ್ರಶ್ನಿಸಿದ್ದ ಮೇಲ್ಮನವಿ ವಾಪಸ್​ಗೆ ಅನುಮತಿ ಹೈಕೋರ್ಟ್ ಅಸ್ತು

#Big relief for DK #High Court allows #withdrawal # appeal #challenging permission # CBI investigation

ಬೆಂಗಳೂರು, ನ.29:ಡಿಕೆ ಶಿವಕುಮಾರ್ ವಿರುದ್ಧದ CBI ತನಿಖೆಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ನೀಡಿದೆ. ಡಿಕೆ ಶಿವಕುಮಾ‌ರ್ ವಕೀಲರು ಸಲ್ಲಿಸಿದ್ದ ಮೇಲ್ಮನವಿ ವಾಪಸ್‌ಗೆ ಹೈಕೋರ್ಟ್(Highcourt) ಅನುಮತಿ ನೀಡಿದೆ. ಈ ಮೂಲಕ ಡಿಕೆಶಿಗೆ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಿದೆ. ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಡಿಕೆಶಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಸಿಜೆ ಪ್ರಸನ್ನ ಬಿ ವರಾಳೆ ಮತ್ತು ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಮೇಲ್ಮನವಿ ಹಿಂಪಡೆಯಲು ಅರ್ಜಿದಾರರಿಗೆ ಅವಕಾಶವಿದೆ ಎಂದು ಹೇಳಿ ಗುರುದೇವ್ ಸಿಂಗ್ ಮತ್ತು ಪಂಜಾಬ್ ಸರ್ಕಾರದ ಪ್ರಕರಣವನ್ನು ಉಲ್ಲೇಖಿಸಿತು. ಇನ್ನೂ, ಸರ್ಕಾರ ಆದೇಶ ಹಿಂಪಡೆದಿರುವ ಕುರಿತ ಪ್ರಕರಣದ ಕುರಿತು ಸದ್ಯದಲ್ಲೇ ಕೋರ್ಟ್ ತೀರ್ಪು ನೀಡಲಿದೆ.ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್(Highcourt) ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಸರ್ಕಾರದ ಆದೇಶವನ್ನು ಇದುವರೆಗೂ ಯಾರೂ ಪ್ರಶ್ನೆ ಮಾಡಿಲ್ಲ. ಹೀಗಾಗಿ ಸಿಬಿಐ ಪರ ವಕೀಲರ ವಾದ ಪರಿಗಣಿಸಲು ಸಾಧ್ಯವಿಲ್ಲ. ಅರ್ಜಿದಾರರು ಮನವಿ ಹಿಂಪಡೆಯಲಾಗಿದೆ ಎಂದು ಕೋರ್ಟ್‌ ತಿಳಿಸಿತು.

Related News

spot_img

Revenue Alerts

spot_img

News

spot_img