ಸತತ ಎರಡು – ಮೂರು ವರ್ಷಗಳ ಕೊರೊನಾ ಲಾಕ್‌ಡೌನ್ ಸಂಕಷ್ಟ, ನಿರ್ಬಂಧಗಳಿಂದ ಬೇಸತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮವು ಈಗ ಮತ್ತೆ ಪುಟಿದೆದ್ದಿದೆ. ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಕ್ರೆಡಾಯ್-ಎಂಸಿಎಚ್‌ಐ, ಮುಂಬೈನಲ್ಲಿ ಅಕ್ಟೋಬರ್ 13ರಿಂದ 16ರವರೆಗೆ ಪ್ರಥಮ ಪ್ರಾಪರ್ಟಿ ಎಕ್ಸ್‌ಪೋ ಹಮ್ಮಿಕೊಂಡಿದೆ.
ಈ ವಸ್ತು ಪ್ರದರ್ಶನವು ಎಂಎಂಆರ್‌ಡಿಎ (ಮುಂಬೈ ಮೆಟ್ರೊಪಾಲಿಟನ್ ರೀಜಿನ್ ಡೆವಲಂಪ್‌ಮೆಂಟ್ ಆಥಾರಿಟಿ) ಬಾಂದ್ರಾ– ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆಯಲಿದೆ. ನೂತನ ಮನೆ ಖರೀದಿದಾರರಿಗೆ ತಮ್ಮ ಕನಸಿನ ಈಡೇರಿಕೆಗೆ ಸುಲಭ, ಸರಳ ವಿಧಾನಗಳ ಉದ್ದೇಶವನ್ನು ಈ ಪ್ರದರ್ಶನ ಹೊಂದಿದೆ ಎಂದು ಪ್ರದರ್ಶನದ ಆಯೋಜಕರು ತಿಳಿಸಿದ್ದಾರೆ.
ಮೊದಲ ಆಸ್ತಿ ಮಾರಾಟಕ್ಕೆ ರಾಜ್ಯ ನೋಂದಣಿ ಹಾಗೂ ಸ್ಟ್ಯಾಂಪ್ ವಿಭಾಗಗಳು ಅನುಮತಿಸಿರುವ ಸಂಪೂರ್ಣ ಡಿಜಿಟಲ್ ಇ– ನೋಂದಣಿಯ ಲಾಭವನ್ನು ಈ ಪ್ರದರ್ಶನದಲ್ಲಿ ಗ್ರಾಹಕರು ಪಡೆದುಕೊಳ್ಳಬಹುದು. ಖರೀದಿದಾರರಿಗೆ ಅನುಕೂಲವಾಗುವಂತೆ ಸ್ಥಳದಲ್ಲೇ ಡೆವಲಪರ್‌ಗಳಿಂದ ಆಸ್ತಿ ನೋಂದಣಿ ಕುರಿತಂತೆ ಕ್ರೆಡಾಯ್-ಎಂಸಿಎಚ್‌ಐ ಕೆಲವು ಕೌಂಟರ್‌ಗಳನ್ನು ಸ್ಥಾಪಿಸಲಿದೆ.
ಮುಂಬೈ ಮೆಟ್ರೊಪಾಲಿಟನ್ ರೀಜನ್ ಈಗ ಅತ್ಯಂತ ಸುಸ್ಥಿತ ಬೆಳವಣಿಗೆಯ ಪರಿಸರ ವ್ಯವಸ್ಥೆಯಾಗಿದೆ. ಈ ಪ್ರದರ್ಶನದಿಂದ ಸಾವಿರಾರು ಜನರಿಗೆ ಮನೆ ಖರೀದಿ ಮಾಡಲು ಹೊಸ ಅವಕಾಶಗಳ ಬಾಗಿಲು ತೆರೆಯುತ್ತವೆ. ಈ ಎಕ್ಸ್‌ಫೋ ಮೂಲಕ ಕನಸಿನ ಮನೆ ಕೊಂಡುಕೊಳ್ಳಲು ಸಹಾಯ ಹಾಗೂ ಸುಧಾರಿತ ಅನುಕೂಲತೆಯನ್ನು ಪಡೆಯಬಹುದು ಎಂದು ಕ್ರೆಡಾಯ್-ಎಂಸಿಎಚ್‌ಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.