ಉಕ್ಕು ಒಂದು ಗಟ್ಟಿಯಾದ ಹಾಗು ಲಭ್ಯವಿರುವ ವಸ್ತುಗಳಲ್ಲೊಂದು. ಉಕ್ಕನ್ನು ಬಳಸಿ ಇತ್ತೀಚಿಗೆ ಸ್ಟೀಲ್ ಬಾಗಿಲುಗಳನ್ನು ತಯಾರಿಸುತ್ತಿದ್ದಾರೆ. ಉಕ್ಕನ್ನು ಬಳಸಿ ಸ್ಟೀಲ್ ಬಾಗಿಲು ತಯಾರಿಸುವುದರಿಂದ ಬಾಗಿಲುಗಳು ಹಾಳಾಗುವುದಿಲ್ಲ , ಬಿರುಕು ಸಹ ಬಿಡುವುದಿಲ್ಲ. ಹೆಚ್ಚು ಕಾಲ ಉಳಿಯುವ ವಸ್ತುವಾಗಿದೆ. ಸ್ಟೀಲ್ ನಾವು ವಾಸ ಮಾಡುವ ಮತ್ತು ಕೆಲಸ ಮಾಡುವ ಪರಿಸರದಲ್ಲಿ ಹೆಚ್ಚು ಬದಲಾವಣೆಗಳನ್ನು ತಂದಿದೆ. ಇತ್ತೀಚಿನ ಜೀವನ ಶೈಲಿಯೂ ಸಹ ಬದಲಾಗತೊಡಗಿದೆ. ಮನೆ ಕಟ್ಟುವವರು, ವಿಭಿನ್ನ ಹಾಗು ಆಕರ್ಷಕವಾಗಿರಬೇಕೆಂದುಕೊಳ್ಳುತ್ತಾರೆ. ಮನೆಯ ಸೌಂದರ್ಯ ಹೆಚ್ಚಿಸುವುದೇ ಮನೆಯ ಬಾಗಿಲು. ಆಕರ್ಷಕ ಮನೆ ಕಟ್ಟಬೇಕೆಂದರೆ ಮನೆಗೆ ಹೆಬ್ಬಾಗಿಲೆ ಪ್ರಮುಖವಾಗಿದೆ. ಆದ್ದರಿಂದ ಸ್ಟೀಲ್ ಬಾಗಿಲು ಬಳಸುವುದು ಉತ್ತಮ ಏಕೆಂದರೆ ಇದು ಸುರಕ್ಷತೆಯಲ್ಲಿ ಮೊದಲು ಬೆಂಕಿಗೆ ಭಸ್ಮವಾಗುವುದಿಲ್ಲ, ಹೆಚ್ಚು ಬಾಳಿಕೆ ಬರುತ್ತದೆ. ಮನೆ ಮಾಲೀಕರಿಗೆ ತುಂಬಾ ಉಪಯುಕ್ತ ಹಾಗೂ ಕಡಿಮೆ ಖರ್ಚು. ೩೦ ವರ್ಷ ಅಥವ ಅದಕ್ಕಿಂತ ಹೆಚ್ಚು ಕಾಲ ಉಳಿಯುತ್ತದೆ.
ಸ್ಟೀಲ್ ಬಾಗಿಲು ಉಪಯೋಗ:
*ಹೆಚ್ಚು ಬಾಳಿಕೆ ಬರುತ್ತೆ.
* ಮನೆಗೆ ಭದ್ರತಾ ದೃಷ್ಠಿಯಿಂದ ಹೆಚ್ಚು ಪ್ರಯೋಜನಕಾರಿ.
* ಮರು ಬಳಕೆ ಮಾಡಬಹುದು.