# cost # corners # Puttur # carpet
ಬೆಂಗಳೂರು: ಅರಮನೆ ಮೈದಾನದಲ್ಲಿ 25 ಮತ್ತು 26 ನೇ ತಾರೀಖು ನಡೆಯಲಿರುವ ಕಂಬಳಕ್ಕೆ ಬಹಳಷ್ಟು ಜನಪ್ರಿಯ ತೆ ಸಿಕ್ಕಿದೆ. ಈಗಾಗಲೇ ಪ್ರಾಯೋಗಿಕವಾಗಿ, ವಿಶೇಷವಾಗಿ ಸಿದ್ದಪಡಿಸಿದ 155 ಮೀಟರ್ ಕೆರೆಯಲ್ಲಿ ದಷ್ಟ ಪುಷ್ಟವಾಗಿ ಮೈತುಂಬಿಕೊಂಡಿರುವ ಕೋಣಗಳು ಓಡಿ ಎಲ್ಲರ ಮನ ಗೆದ್ದಿವೆ. ಅಂದ್ಹಾಗೆ ಈ ಕೋಣಗಳ ಬೆಲೆ ಕೇಳಿದ್ರೆ ನಿಮ್ಮ ಹುಬ್ಬೇರುವುದು ಖಂಡಿತಾ..! ಯಾಕಂದ್ರೆ ಒಂದು ಕೋಣದ ಬೆಲೆ ಬರೋಬ್ಬರಿ 15 ಲಕ್ಷ..! ಹೌದು ವೀಕ್ಷಕರೇ ಪುತ್ತೂರಿನಿಂದ ಬಂದಿರುವ ಈ ಕೋಣಗಳು ಲೋಹಿತ್. ಬಿ.ಬಿ ಎಂಬುವವರಿಗೆ ಸೇರಿದ್ದಾಗಿವೆ.
ಓಟ್ಟಾರೆ ಎರಡು ಜೊತೆ ಕೋಣಗಳನ್ನ ಕಂಬಳಕ್ಕಾಗಿ ಪುತ್ತೂರಿನಿಂದ ಕರೆತರಲಾಗಿದೆ. ಹಲವಾರು ಕಂಬಳಗಳಲ್ಲಿ ಪ್ರಶಸ್ತಿಗಳನ್ನ ಜಯಿಸಿ ಬಹಳಷ್ಟು ಹೆಸರು ಮಾಡಿರುವ ಕೋಣಗಳಾಗಿವೆ. ಇವುಗಳ ಹೆಸರು ಜಯಾ- ಗೋಪಿ, ರಾಜ- ಶಿವು. ಕಂಬಳಕ್ಕೆ ಇವುಗಳನ್ನು ಹುಟ್ಟಿನಿಂದಲೇ ಕಟ್ಟುಮಸ್ತಾಗಿ ಬೆಳೆಸಲಾಗಿದ್ಯಂತೆ. ಹುರುಳಿ ಇವುಗಳ ಅಚ್ಚುಮೆಚ್ಚಿನ ಆಹಾರ. ಮಿಂಚಿನ ಓಟದಲ್ಲಿ ಓಡುವ ಇವುಗಳಿಗೆ ಈಜು, ಸ್ನಾನ ,ನಿಯಮಿತ ಆಹಾರದ ಕ್ರಮ ಪದ್ದತಿ ಇವೆಲ್ಲವುಗಳನ್ನು ಅನುಸರಿಸಲಾಗುತ್ತದೆ.
ಒಟ್ಟಾರೆಯಾಗಿ ಕಂಬಳಕ್ಕೆ ಸಜ್ಜುಗೊಳಿಸುವ ಕೋಣಗಳಿಗೆ ಸರಿಯಾದ ಕ್ರಮಶಿಕ್ಷಣ ಮತ್ತು ಆಹಾರ ಪದ್ದತಿ ಬಹಳಷ್ಟು ಪ್ರಮುಖವಾದುದು, ಈ ರೀತಿಯಾಗಿ ಸಾಕಿದ ಕೋಣಗಳಿಗೆ ಮಾರುಕಟ್ಟೆಯಲ್ಲಿ 30 ಲಕ್ಷಕ್ಕೂ ಅಧಿಕ ಬೆಲೆಯಿದೆ ಎನ್ನುತ್ತಾರೆ ಕೋಣಗಳ ಮಾಲೀಕ ಲೋಹಿತ್ ಬಿ.ಬಿ. ಇನ್ನೇನು ಬಹಳಷ್ಟು ಹತ್ತಿರವಿರುವ ಬೆಂಗಳೂರು ಕಂಬಳಕ್ಕೆ ಮೆರೆಗು ನೀಡಲು ಇನ್ನು ಜನಪ್ರಿಯ ಕೋಣಗಳು ಬರುತ್ತಿವೆ ಎನ್ನಲಾಗುತ್ತಿದ್ದು, ಕಂಬಳದ ದಿನ ಇವುಗಳ ಓಟವನ್ನ ಕಣ್ತುಂಬಿಕೊಳ್ಳಲು ಸಿಲಿಕಾನ್ ಸಿಟಿ ಜನತೆ ಕಾತುರದಿಂದ ಕಾಯುತ್ತಿದ್ದಾರೆ.
ಅಭಿಜಿತ್ , ರೆವಿನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು