ಬೆಂಗಳೂರು;ಬೆಂಗಳೂರಿನಲ್ಲಿ ಆದಾಯ ತೆರಿಗೆ (IT) ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಡ್ರೈಫ್ರಟ್ಸ್ ಅಂಗಡಿ(Dryfruits shop) ಮತ್ತು ಅಂಗಡಿ ಮಾಲೀಕನ ಮನೆ ಮೇಲೆ ದಾಳಿ(attack)
ಮಾಡಿದ್ದಾರೆ ಎಂಬ ಮಾಹಿತಿ ಲೀಕ್ ಆಗಿದೆ. ಬೆಂಗಳೂರು ನಗರದ ರಾಜಾಜಿನಗರದ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿರುವ ಡ್ರೈಫ್ರಟ್ಸ್ ಅಂಗಡಿ ಮತ್ತು ಮಾಲೀಕನ ಮನೆ ಮೇಲೆ ದಾಳಿ ಮಾಡಿರುವ IT ಅಧಿಕಾರಿಗಳು, ವಿವಿಧ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.ಬೆಂಗಳೂರಿನ ರಾಜಾಜಿನಗರ, ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿರುವ ಡ್ರೈ ಫ್ರೂಟ್ಸ್(Dryfruits) ಅಂಗಡಿ ಮತ್ತು ಮಾಲೀಕರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಹತ್ತಕ್ಕೂ ಹೆಚ್ಚು ವಾಹನಗಳಲ್ಲಿ ಬಂದ ಐಟಿ ಅಧಿಕಾರಿಗಳು ಡ್ರೈಫ್ರೂಟ್ಸ್ ಕಾರ್ಖಾನೆ ಹಾಗೂ ಸ್ಟೋರ್‌ಗಳ ಮೇಲೆ ಐಟಿ ದಾಳಿ ನಡೆಸಿದ್ದು, ಒಟ್ಟು ನಗರದ ಎರಡು ಕಡೆ ದಾಳಿ ನಡೆಸಿದ್ದಾರೆ.ಪಿಎಸ್ ಆಗ್ರೋ ಫುಡ್ ಎಲ್‌ಎಲ್‌ಪಿ ಕಾರ್ಖಾನೆ ಹಾಗೂ ಮಾಣಕ್ ಮೇವಾ ಡ್ರೈಫ್ರೂಟ್ಸ್ ಸ್ಟೋರ್ ಮೇಲೆ ದಾಳಿ ನಡೆಸಿದ್ದು, ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.