#BBMP #advice #online #property #tax #payment
ಬೆಂಗಳೂರು: ಆನ್‌ಲೈನ್ ಮೂಲಕ ಆಸ್ತಿ ತೆರಿಗೆಯನ್ನು ಸುಲಭವಾಗಿ ಪಾವತಿಸುವಂತೆ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ .ಬಿಬಿಎಂಪಿ(BBMP) ಬೆಂಗಳೂರಿನ ನಾಗರಿಕರ ಸೇವೆಗಳಿಗೆ ಸಂಪೂರ್ಣವಾಗಿ ಸಮರ್ಪಿತವಾಗಿದೆ. ಘನತ್ಯಾಜ್ಯ ನಿರ್ವಹಣೆ(Solid waste management), ರಸ್ತೆ ನಿರ್ವಹಣೆ ಮತ್ತು ಆಸ್ತಿ-ಸಂಬಂಧಿತ ಸೇವೆಗಳಂತಹ(Property-related service) ಅಗತ್ಯ ಸೇವೆಗಳ ವಿತರಣೆಯು ಪರಿಣಾಮಕಾರಿ ನಗರ ಆಡಳಿತಕ್ಕೆ ನಿರ್ಣಾಯಕವಾಗಿದೆ ಆಸ್ತಿತೆರಿಗೆಯನ್ನು ಸುಲಭವಾಗಿ ಪಾವತಿಸಲು ನಾಗರಿಕರು https://bbmptax.karnataka. gov.in ಅನ್ನು ಬಳಸಬಹುದು. ಯಾವುದೇ ಮಾಹಿತಿಯು ಅಗತ್ಯವಿದ್ದರೆ, ಸಹಾಯವಾಣಿ(Helpline) 1533 ಸಂಖ್ಯೆಗೆ ಕರೆ ಮಾಡಿಬಹುದಾಗಿದೆ ಎಂದಿದ್ದಾರೆ.ಬೆಂಗಳೂರು ಬಿಬಿಎಂಪಿಗೆ(BBMP) ಬರುವ ಪ್ರಮುಖ ಆದಾಯ ಮೂಲಗಳ ಪೈಕಿ ಆಸ್ತಿ ತೆರಿಗೆಯು ಪ್ರಮುಖ ಮತ್ತು ಪ್ರಾಥಮಿಕ ಆದಾಯದ ಮೂಲವಾಗಿದೆ. ಈ ಆದಾಯವು(Income) ಬಿಬಿಎಂಪಿಯ ಕಾರ್ಯ ನಿರ್ವಹಣೆ ಮತ್ತು ಅದರ ಸೇವೆ ವಿತರಣೆಗೆ ನಿರ್ಣಾಯಕವಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಭೂ ಸ್ವತ್ತು, ಆಸ್ತಿ ಮಾಲೀಕರು ಆಸ್ತಿ ತೆರಿಗೆ ಪಾವತಿಯನ್ನು(Payment of property tax) ಸುಲಭವಾಗಿ ಕಟ್ಟಲು ಕೆಲವು ವ್ಯವಸ್ಥೆಗಳನ್ನು ಅನುಸರಿಸುತ್ತಿದೆ, ಈ ಪೈಕಿ ಇದರಲ್ಲಿ ಮಾಲೀಕರುಗಳಿಗೆ SMS ಮೂಲಕ ಸಂದೇಶಗಳು ಮತ್ತು ಕೂಡ ನೋಟಿಸ್‌ಗಳನ್ನು ಕಳುಹಿಸುವುದು ಒಂದಾಗಿದೆ. ಇವುಗಳ ಆಧಾರದಲ್ಲಿ ಆನ್‌ಲೈನ್ ಇಲ್ಲವೇ ನೇರವಾಗಿ ಹತ್ತಿರ ಕಚೇರಿಗೆ ತೆರಳಿ ಆಸ್ತಿ ತೆರಿಗೆ ಪಾವತಿಸಬಹುದಾಗಿದೆ.ಕಳೆದ ವರ್ಷ ಪಾಲಿಕೆಯು 3,300 ಕೋಟಿ ರೂನಷ್ಟು ಆಸ್ತಿತೆರಿಗೆ ಸಂಗ್ರಹಿಸಿದೆ. ಈ ವರ್ಷ 4,500 ಕೋಟಿ ರೂ. ಗುರಿಯನ್ನು ತಲುಪಲಿದ್ದೇವೆ ಎಂದು ಅವರು ಹೇಳಿದ್ದಾರೆ.ಅ.31ರ ಅಂತ್ಯಕ್ಕೆ ಶೇ 64.50ರಷ್ಟು ತೆರಿಗೆ ಸಂಗ್ರಹವಾಗಿದ್ದು, ಬಜೆಟ್‌ನಲ್ಲಿ ದಾಖಲಿಸಿರುವ ಗುರಿಯಂತೆ ಇನ್ನೂ ₹1,619 ಕೋಟಿ ಸಂಗ್ರಹವಾಗಬೇಕಿದೆ. ಕಳೆದ ಆರ್ಥಿಕ ವರ್ಷಕ್ಕಿಂತಲೂ ₹372 ಕೋಟಿ ಹೆಚ್ಚಿನ ಗುರಿಯನ್ನು ಈ ವರ್ಷ ಹೊಂದಲಾಗಿದೆ.