ಬೆಂಗಳೂರು: ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟು ಕೊಳ್ಳದೇ ಇದ್ದಲ್ಲಿ ನಿವೇಶನ ಮಾಲೀಕರಿಗೆ ದಂಡ(Fine) ವಿಧಿಸಲು ಬಿಬಿಎಂಪಿ ಸಜ್ಜಾಗಿದೆ. ಬೆಂಗಳೂರು ನಗರದಲ್ಲಿ ಹಲವಾರು ಖಾಲಿ ನಿವೇಶನಗಳಿದ್ದು ಅದರಲ್ಲಿ ಕಸದ ರಾಶಿ ಮಾತ್ರವಲ್ಲದೆ ಗಿಡಗಂಟೆಗಳು ಬೆಳೆದು ಜಂತುಗಳು ಸೇರಿಕೊಳ್ಳುತ್ತಿವೆ. ಇದರಿಂದ ಅಕ್ಕಪಕ್ಕದವರಿಗೆ ತೊಂದರೆಯಾಗುತ್ತಿರುವುದರಿಂದ ಬಿಬಿಎಂಪಿ ಖಾಲಿ ನಿವೇಶನದ ಮಾಲೀಕರಿಗೆ ದಂಡ ಪ್ರಯೋಗ ಮಾಡಲು ಮುಂದಾಗಿದೆ.ಅರಣ್ಯ ಸಿಬ್ಬಂದಿಯ ಮೂವರ ಮೇಲೆ ದಾಳಿ ಮಾಡಿದ್ದು, ಈ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಳ್ಳಲು ಅಲ್ಲಿನ ಖಾಲಿ ನಿವೇಶನದಲ್ಲಿ ಗಿಡಗಂಟೆಗಳು ಆಳುದ್ದ ಬೆಳೆದಿದ್ದುದೇ ಕಾರಣವೆಂದು ತಜ್ಞರು ಹೇಳಿದ್ದರು. ಇದೇ ರೀತಿ ಹಾವು, ಹೆಗ್ಗಣಗಳ ಕಾಟವೂ ಹೆಚ್ಚುತ್ತಿದೆ. ಇಂತಹ ಖಾಲಿ ನಿವೇಶನ ಇರುವ ಪ್ರದೇಶಗಳಲ್ಲಿ ವಾರಕ್ಕೆ ಮೂರಾಲ್ಕು ಮಂದಿ ಹಾವಿನ ಬಗ್ಗೆ ಬಿಬಿಎಂಪಿಗೆ ದೂರು ನೀಡುತ್ತಿದ್ದಾರೆ. ಇದರಿಂದ ಖಾಲಿ ನಿವೇಶನಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ಮಾಲೀಕರಿಗೆ ಸೂಚಿಸಲಾಗುತ್ತಿದೆ.ಚಿರತೆಗಳು ಅವಿತುಕೊಳ್ಳುವದಕ್ಕೆ ನಗರದ ಸೈಟ್ ಮಾಲೀಕರ ನಿರ್ಲಕ್ಷ್ಯವೇ ಅನ್ನೋದು ಪಾಲಿಕೆಗೆ ಅರಿವಾಗಿ ಇದೀಗ ಖಾಲಿ ಸೈಟ್ ಬಿಟ್ಟ ನಿವೇಶನ ಮಾಲೀಕರಿಗೆ ಎಚ್ಚರಿಕೆ ನೀಡಲು ಪಾಲಿಕೆ ಚಿಂತಿಸಿದೆ.
2019ರಲ್ಲಿ ಖಾಲಿ ಸೈಟ್ ನಿರ್ವಹಣೆ ಮಾಡದೇ ಬಿಡುವ ಮಾಲೀಕರ ಸೈಟ್ ಗಳನ್ನು ಬಿಬಿಎಂಪಿಯೇ(BBMP) ನಿರ್ವಹಣೆ ಮಾಡುತ್ತಿತ್ತು. ಈ ನಿರ್ವಹಣೆಗೆ ಬಿಬಿಎಂಪಿ ದಂಡವನ್ನು ವಸೂಲಿ ಮಾಡುತ್ತಿತ್ತು. ಆದರೆ ಈ ಕುರಿತಾಗಿ ವಿರೋಧ ವ್ಯಕ್ತವಾಗಿ, ಇದು ಕೆಎಂಸಿ ಆಸ್ಟ್‌ನಲ್ಲಿ ಇಂತಹ ಕಾಯಿದೆಯಲ್ಲ ಎನ್ನುವ ವಿವಾದ ಶುರುವಾಗಿತ್ತು. ಚಿರತೆ ದಾಳಿ ಹಿನ್ನೆಲೆಯಲ್ಲಿ ಹಳೆಯ ಆದೇಶವನ್ನೇ ಮತ್ತೆ ಜಾರಿಗೆ ತಂದು ಖಾಲಿ ನಿವೇಶನದಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ತೆರವು ಮಾಡಿ ಅದಕ್ಕೆ ತಗುಲಿದ ವೆಚ್ಚವನ್ನು ನಿವೇಶನ ಮಾಲೀಕರಿಂದ ವಸೂಲಿ ಮಾಡುವುದಲ್ಲದೆ, ಖಾಲಿ ನಿವೇಶನವನ್ನು ನಿರ್ವಹಣೆ ಮಾಡದೆ ಕಸದ ರಾಶಿಗೆ ಕಾರಣವಾಗಿದ್ದು ಮತ್ತು ಗಿಡಗಂಟೆಗಳು ಬೆಳೆದು ಹಾವುಗಳ ಆವಾಸ ಸ್ಥಾನವಾಗಲು ಕಾರಣವಾಗುತ್ತಿದೆ.