ಬೆಂಗಳೂರು;ಹಣ ಪಡೆಯುವ ವೇಳೆ ಡಿಡಿಪಿಐ(DDPI) ಹಾಗೂ ದ್ವಿತೀಯ ದರ್ಜೆ ಸಹಾಯಕ(Second Grade Assistant) ಲೋಕಾಯುಕ್ತ(Lokayukta) ಬಲೆಗೆ ಬಿದ್ದಿದ್ದಾರೆ.ಸರ್ಕಾರಿ ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಗೆ (toilet construction work)ಅನುಮೋದನೆ ನೀಡಲು ಲಂಚಕ್ಕೆ(Bribe) ಬೇಡಿಕೆ ಇಟ್ಟು, ಹಣ ಪಡೆಯುವ ವೇಳೆ ಡಿಡಿಪಿಐ (DDPI)ಹಾಗೂ ದ್ವಿತೀಯ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ,ಲೋಕಾಯುಕ್ತ ಬಲೆಗೆ ಬಿದ್ದವರು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ರಂಗನಾಥಸ್ವಾಮಿ ಮತ್ತು ದ್ವಿತೀಯ ದರ್ಜೆ ಸಹಾಯಕ ಅಸ್ರಾರ್ ಅಹಮ್ಮದ್ ಎಂದು ತಿಳಿದುಬಂದಿದೆ.ಅನುಮೋದನೆ(approval) ನೀಡಲು ಒಂದು ಫೈಲ್‍ಗೆ 5 ಸಾವಿರದಂತೆ 2 ಫೈಲ್‍ಗೆ 10 ಸಾವಿರ ಕೇಳಿದ್ದರು.ಗುತ್ತಿಗೆದಾರ ಅನುಮೋದನೆ ಪಡೆಯಲು ಕಚೇರಿಗೆ ಅಲೆದಾಡಿ ಬಳಿಕ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದರು.ಕೊಲ್ಲಿಬೈಲು ಮತ್ತು ಕಡೆಮಡ್ಕಲ್ ಗ್ರಾಮದ ಸರ್ಕಾರಿ ಶಾಲೆಗಳು ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಶೌಚಾಲಯ ನಿರ್ಮಾಣ ಯೋಜನೆಗೆ ಆಯ್ಕೆಯಾಗಿದ್ದವು. ಅವುಗಳಿಗೆ ಆಡಳಿತಾತ್ಮಕ(administrative) ಅನುಮೋದನೆ ನೀಡುವುದು ಬಾಕಿ ಇತ್ತು.ಈ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಲಂಚದ ಹಣ ಸಮೇತ ಇಬ್ಬರನ್ನು ಬಂಧಿಸಿದ್ದಾರೆ.