25.5 C
Bengaluru
Thursday, December 19, 2024

ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ;ಒಪಿಎಸ್ ಜಾರಿಗೆ ಸರಕಾರದ ಸೂಚನೆ

#Government #employees #notice #implement #OPS

ಬೆಂಗಳೂರು: ಕಾಂಗ್ರೆಸ್‌(Congress) ನೀಡಿದ್ದ ಭರವಸೆಯಂತೆ ಇದೀಗ ಪಕ್ಷದ ಸರಕಾರ ಹಳೇ ಪಿಂಚಣಿ ಯೋಜನೆ (OPS) ಜಾರಿಗೊಳಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮುಖ್ಯ ಮಂತ್ರಿಯವರ ಜಂಟಿ ಕಾರ್ಯದರ್ಶಿಯವರು ಆರ್ಥಿಕ ಇಲಾಖೆಗೆ ಪತ್ರ ಬರೆದು, ನೂತನ ಪಿಂಚಣಿ ಯೋಜನೆಗಳಲ್ಲಿ (NPS) ಅನೇಕ ನ್ಯೂನ್ಯತೆಗಳಿವೆ, ಸರಕಾರಿ ನೌಕರರಿಗೆ ಇದರಿಂದ ಅನಾನುಕೂಲಗಳಾಗಿವೆ. ಆದ್ದರಿಂದ ಸರಕಾರಿ ನೌಕರರ ಸಂಘದ ಮನವಿಯ ಹಿನ್ನೆಲೆಯಲ್ಲಿ ನೂತನ ಪಿಂಚಣಿ ಯೋಜನೆ ಕೈಬಿಟ್ಟು ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಲು ನಿಯಮಾನುಸಾರ ಅಗತ್ಯ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿರುವುದಾಗಿ ಎಂದು ಹೇಳಿದ್ದಾರೆ.ಮುಖ್ಯಮಂತ್ರಿಗಳ ನಿರ್ದೇಶನದ ಅನ್ವಯ ಸಂಘದ ಕೋರಿಕೆಯನ್ನು ಪರಿಶೀಲಿಸಿ ನಿಯಮಾನಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಂ. ರಾಮಯ್ಯ ಅವರು ಹಣಕಾಸು ಇಲಾಖೆಗೆ ಪತ್ರ ಬರೆದು ಸರ್ಕಾರಿ ಶಾಲಾ ಶಿಕ್ಷಕರನ್ನು ಹಳೆ ಪಿಂಚಣಿ ವ್ಯವಸ್ಥೆಗೆ ಒಳಪಡಿಸುವ ಬಗ್ಗೆ ಪರಿಶೀಲನೆ ನಡೆಸುವಂತೆ ತಿಳಿಸಿದ್ದಾರೆ.

Related News

spot_img

Revenue Alerts

spot_img

News

spot_img