ಬೆಂಗಳೂರು;2 ಸಾವಿರ ನೋಟು ವಿಚಾರವಾಗಿ ಗ್ರಾಹಕರಿಗೆ RBI ಗುಡ್ ನ್ಯೂಸ್ ನೀಡಿದೆ. ನೋಟು ವಿನಿಮಯಕ್ಕೆ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು 2 ಸಾವಿರ ಮುಖಬೆಲೆಯ ನೋಟುಗಳನ್ನು ಅಂಚೆ ಮೂಲಕವೂ ಜನ RBI ಪ್ರಾದೇಶಿಕ ಕಚೇರಿಗಳಿಗೆ ಕಳುಹಿಸಬಹುದು ಎಂದು ಹೇಳಿದೆ. RBIನ ಪ್ರಾದೇಶಿಕ ಕಚೇರಿಗಳಿಂದ ದೂರ ಇರುವವರೂ ಅಂಚೆ ಮೂಲಕ ನೋಟು ಬದಲಿಸಿಕೊಳ್ಳಬಹುದು. ಈ ಪ್ರಕ್ರಿಯೆಗೆ ಯಾವುದೇ ಡೆಡ್‌ಲೈನ್ ಇಲ್ಲ. ಸದ್ಯ ಶೇ 97ಕ್ಕೂ ಅಧಿಕ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂದು RBI ತಿಳಿಸಿದೆ.ಏಕಾಏಕಿ ಶಾಕ್ ನೀಡಿದ ಭಾರತೀಯ ರಿಸರ್ವ್ 2,000 ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿರುವುದಾಗಿ ತಿಳಿಸಿತ್ತು. 2023 ಸೆಪ್ಟೆಂಬರ್ 30 2,000 ರು. ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ದೇಶದ ಜನರಿಗೆ ತಿಳಿಸಲಾಗಿತ್ತು. ಮತ್ತೆ ಅವಕಾಶ ವಿಸ್ತರಿಸಿದ್ದ ಆರ್‌ಬಿಐ ಮೇ 23ರಿಂದ ಅಕ್ಟೋಬರ್ 15ರವರೆಗೆ ಸಮೀಪದ ಬ್ಯಾಂಕ್‌ಗೆ ತೆರಳಿ ನೋಟು ಬದಲಾವಣೆ ಮಾಡಿಕೊಳ್ಳುವ ಅವಕಾಶ ನೀಡಿತ್ತು. ಹೀಗಾಗಿ ನೋಟು ವಿನಿಮಯದ ಅವಧಿ ಮುಗಿದು ಹದಿನೈದು ದಿನ ಕಳೆದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ಜನರಿಗೆ ಮತ್ತೊಂದು ಅವಕಾಶ ನೀಡಿದೆ.ಬ್ಯಾಂಕುಗಳಲ್ಲಿ 2 ಸಾವಿರ ರೂ. ನೋಟುಗಳ ವಿನಿಮಯ, ಠೇವಣಿಗೆ ಆರ್‌ಬಿಐ ನೀಡಿದ್ದ ಗಡುವು ಅ.7ಕ್ಕೆ ಮುಗಿದಿತ್ತು. ಅ.8ರಿಂದ ಬೆಂಗಳೂರು ಸೇರಿದಂತೆ ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ ಮಾತ್ರ ಈ ನೋಟುಗಳ ವಿನಿಮಯ ಮತ್ತು ಠೇವಣಿಗೆ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯದ ನಾಗರಿಕರು ತಮ್ಮಲ್ಲಿರುವ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು: ದಿ ಆಫೀಸರ್ ಇನ್-ಚಾರ್ಜ್, ಕನ್ಸೂéಮರ್ ಎಜುಕೇಷನ್ ಆ್ಯಂಡ್ ಪ್ರೊಟೆಕ್ಷನ್ ಸೆಲ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 10/3/8, ನೃಪತುಂಗ ರಸ್ತೆ, ಬೆಂಗಳೂರು- 560001.ಈ ಹಿಂದೆ ನೀಡಿದ ಅವಧಿಯಲ್ಲಿ 2,000 ರು. ನೋಟುಗಳನ್ನು ಬದಲಾಯಿಸಲು ಸಾಧ್ಯವಾಗದ ಜನರಿಗೆ ಆರ್‌ಬಿಐ ಹೆಚ್ಚಿನ ಸಮಯಾವಕಾಶ ನೀಡಿದ್ದು, ಜನರು ಈಗ ತಮ್ಮಲ್ಲಿ ಇದ್ದ ನೋಟುಗಳನ್ನು ಕೇಂದ್ರೀಯ ಬ್ಯಾಂಕ್‌ನ ನಿರ್ದಿಷ್ಟ ಪ್ರಾದೇಶಿಕ ಕಚೇರಿಗಳಿಗೆ ಕಳುಹಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ,ಜನರಲ್ಲಿ 2 ಸಾವಿರ ಮುಖಬೆಲೆಯ ನೋಟುಗಳಿದ್ದಲ್ಲಿ ಅಂಚೆ ಮೂಲಕವೂ ಆರ್‌ಬಿಐ ಪ್ರಾದೇಶಿಕ ಕಚೇರಿಗಳಿಗೆ ತಲುಪಿಸಬಹುದಾಗಿದೆ ಎಂದು ಹೇಳಲಾಗಿದೆ.