# IT officials #raided # houses # many #builders # Bangalore
ಬೆಂಗಳೂರು ನ03;ರಾಜ್ಯದಲ್ಲಿ ಮತ್ತೆ ಆದಾಯ ತೆರಿಗೆ ಇಲಾಖೆ(Incometax department) ದಾಳಿ ನಡೆದಿದ್ದು, ಬೆಂಗಳೂರಿನ ಹಲವು ಬಿಲ್ಡರ್ಸ್(Builders) ಗಳ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಇಂದು(ನವೆಂಬರ್ 03) ಬೆಳ್ಳಂಬೆಳಗ್ಗೆ ಬೆಂಗಳೂರಿನ (Bengaluru) ಹಲವೆಡೆ ಬಿಲ್ಡರ್ಸ್ ಮನೆಗಳ ಮೇಲೆ ಐಟಿ(IT) ದಾಳಿಯಾಗಿದೆ. ಕಳೆದ ಹಲವು ದಿನಗಳಿಂದ ರಾಜ್ಯದ ಹಲವೆಡೆ ಇತ್ತೀಚೆಗಷ್ಟೇ ಜ್ಯುವೆಲರ್ ಅಂಗಡಿಗಳ ಮೇಲೆ ದಾಳಿ ಮಾಡಿದ್ದ ಐಟಿ ಅಧಿಕಾರಿಗಳು, ಈ ಬಾರಿ ಬಿಲ್ಡರ್ಸ್ಗೆ(Builders) ಶಾಕ್ ಕೊಟ್ಟಿದ್ದಾರೆ.ಬೆಂಗಳೂರಿನ ಸಹಕಾರ ನಗರ ಸೇರಿದಂತೆ ಹಲವರ ಐಟಿ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.ಮೊನ್ನೇ ಅಷ್ಟೇ ಉಡುಪಿ ಹಾಗೂ ಮಂಗಳೂರು ಭಾಗದಲ್ಲಿ ಚಿನ್ನಾಭರಣ ಅಂಗಡಿಗಳ ಮೇಲೆ ಐಡಿ ಅಧಿಕಾರಿಗಳು ದಾಳಿ ಮಾಡಿದ್ದರು.ಹಲವು ದಿನಗಳಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಐಟಿ ದಾಳಿಯಾಗುತ್ತಲೇ ಇದೆ.