ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ದೆಹಲಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಕಾರ್ಯ ದರ್ಶಿಯವರನ್ನು ಭೇಟಿಯಾಗಿ 600 ಕೋಟಿ ಮೊತ್ತದ ನರೇಗಾ ಬಾಕಿಯನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಚಾಲ್ತಿಯಲ್ಲಿರುವ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನರೇಗಾ ಯೋಜನೆಯಲ್ಲಿ ಕೆಲಸದ ಖಾತ್ರಿಯ ಮಾನವ ದಿನಗಳ ಸಂಖ್ಯೆಯನ್ನು ಪ್ರಸ್ತುತ 13 ಕೋಟಿಯಿಂದ 18 ಕೋಟಿಗೆ ಹೆಚ್ಚಿಸಬೇ ಕಂದು ಸಚಿವರು ಕಾರ್ಯದರ್ಶಿಗಳ ಗಮನಕ್ಕೆ ತಂದರು. ಮಂಜೂರಾದ 13 ಕೋಟಿ ಮಾನವ ದಿನಗಳ ಪೈಕಿ 10 ಕೋಟಿಯನ್ನು ಈಗಾಗಲೇ ಬಳಸಿಕೊಳ್ಳಲಾಗಿದ್ದು, ಬರಪೀಡಿತ ಪ್ರದೇಶಗಳಲ್ಲಿನ ನಿವಾಸಿಗಳ ಜೀವನಾಂಶ ಕ್ಕಾಗಿ ಹೆಚ್ಚುವರಿ ಕೆಲಸದ ದಿನಗಳು ಅತ್ಯಗತ್ಯ. ಸದ್ಯಕ್ಕೆ ಕುಡಿವ ನೀರಿನ ಸಮಸ್ಯೆ ಇಲ್ಲ, ಮಂಜೂರಾದ 13 ಕೋಟಿ ಮಾನವ ದಿನಗಳ ಪೈಕಿ 10 ಕೋಟಿಯನ್ನು ಈಗಾಗಲೇ ಬಳಸಿಕೊಳ್ಳಲಾಗಿದ್ದು, ಬರಪೀಡಿತ ಪ್ರದೇಶಗಳಲ್ಲಿನ ನಿವಾಸಿಗಳ ಜೀವನಾಂಶಕ್ಕಾಗಿ ಹೆಚ್ಚುವರಿ ಕೆಲಸದ ದಿನಗಳು ಅತ್ಯಗತ್ಯಆದರೆ ಮುಂದಿನ 2-3 ತಿಂಗಳ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲ, ಬರಪೀಡಿತ ತಾಲೂಕುಗಳಲ್ಲಿ ತುರ್ತು ನೀರಿನ ಅಗತ್ಯತೆಗಳಿಗೆ ಹಣದ ಅಗತ್ಯವಿದೆ ಎಂದು ಖರ್ಗೆ ಹೇಳಿದರು.ಕರ್ನಾಟಕ ರಾಜ್ಯ ನರೇಗಾ ಯೋಜನೆ ಅಡಿಯಲ್ಲಿ ನಿಯಮಿತವಾಗಿ ಉದ್ಯೋಗ ಸೃಷ್ಟಿಸುವಲ್ಲಿ ಮುಂಚೂಣಿಯಲ್ಲಿದ್ದು ವೈಯಕ್ತಿಕ ಹಾಗೂ ಸಮುದಾಯದ ಸ್ವತ್ತುಗಳನ್ನು ನಿರ್ಮಿಸುತ್ತಿದೆ. ಪ್ರಸಕ್ತ ವರ್ಷದಲ್ಲಿ ಕರ್ನಾಟಕ 13 ಕೋಟಿ ಕೆಲಸದ ದಿನಗಳನ್ನು ಕಾರ್ಮಿಕ ಬಜೆಟ್’ನಲ್ಲಿ ಹಂಚಿಕೆ ಮಾಡಿದ್ದು ಈಗಾಗಲೇ 8.48 ಕೋಟಿ ಕೆಲಸದ ದಿನಗಳ ಉದ್ಯೋಗ ಸೃಷ್ಟಿಸಿದೆ.