ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ(Medical education) ಪೂರೈಸಿದ ಅಭ್ಯರ್ಥಿಗಳ ಒಂದು ವರ್ಷದ ಗ್ರಾಮೀಣ ಸೇವೆಗೆ(rural serv) ವಿನಾಯಿತಿ(Exception) ನೀಡಲು ರಾಜ್ಯ ಸರಕಾರ ನಿರ್ಧರಿಸಿದ್ದು, ವೈದ್ಯರ ಖಾಲಿ ಹುದ್ದೆಗಳಿಗೆ ಅನುಸಾರ ಅಗತ್ಯ ಸಂಖ್ಯೆಯ ವೈದ್ಯರನ್ನು ಮಾತ್ರ ಸೇವೆಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ತರಲು ಮುಂದಾಗಿದೆ.ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ್ ಸುದ್ದಿಗಾರರಿಗೆ ತಿಳಿಸಿದರು.ಗ್ರಾಮದಲ್ಲಿ ಖಾಲಿ ಹುದ್ದೆಗೆ ಅನುಗುಣವಾಗಿ ಸೇವೆಗೆ ಸರ್ಕಾರ ನಿಯೋಜನೆ ಮಾಡಲಾಗುವುದು. ರಾಜ್ಯದಲ್ಲಿ ವೈದ್ಯರ ಕೊರತೆ ಇಲ್ಲದಿರುವ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಪದವೀಧರರಿಗೆ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿದವರಿಗೂ ಈ ನಿಯಮ ಅನ್ವಯಿಸುತ್ತದೆ ಎಂದರು,ಅಲ್ಲದೇ ಪ್ರಸಕ್ತ ಸಾಲಿನಲ್ಲಿ 3,515 ಪಿಜ ಅಭ್ಯರ್ಥಿಗಳು ನೋಂದಾಯಿತರಾಗಿದ್ದು, ಕೇವಲ 1,270 ಹುದ್ದೆಗಳು ಖಾಲಿ ಇವೆ. ಹೆಚ್ಚುವರಿಯಾಗಿ 2,245 ಹುದ್ದೆಗಳನ್ನು ಸೃಜಿಸಿದರೆ 188.58 ಕೋಟೆ ಭಾರವನ್ನು ರೂ. ಹೆಚ್ಚುವರಿ ವೆಚ್ಚವಾಗುತ್ತದೆ. ಆದ್ದರಿಂದ ವೈದ್ಯರ ಹೆಚ್ಚುವರಿಯಾಗಿ ಸರಕಾರದ ಮೇಲೆ ಉಂಟಾಗುವ ಆರ್ಥಿಕ ಭಾರವನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ವೈದ್ಯರ ಗ್ರಾಮೀಣ ಕಡ್ಡಾಯ ಸೇವೆಯನ್ನು – ರದ್ದುಪಡಿಸಿದೆ.ಕೌನ್ಸಿಲಿಂಗ್ ಮೂಲಕ ಮೆರಿಟ್(Merit) ಆಧಾರದಲ್ಲಿ ಎಂಬಿಬಿಎಸ್ ಮತ್ತು ಪಿಜಿ ಪೂರ್ಣಗೊಂಡ ಅಭ್ಯರ್ಥಿಗಳ ನೇಮಕ ಮಾಡಲಾಗುವುದು,ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರ ಎಲ್ಲ ಹುದ್ದೆಗಳನ್ನು 2 ತಿಂಗಳೊಳಗೆ ಭರ್ತಿ ಮಾಡಲಾಗುವುದು. ಎಂದು ಸಚಿವ H.K. ಪಾಟೀಲ್ ಹೇಳಿದ್ದಾರೆ.