ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಕೇವಲ ಆದಾಯ ಗಳಿಕೆಯ ಉದ್ದೇಶವನ್ನಷ್ಟೇ ಹೊಂದಿರುವುದಲ್ಲ, ಅಲ್ಲಿ ಭದ್ರತೆ ಹಾಗೂ ಸುರಕ್ಷತೆಯ ಕಾರಣಗಳಿಂದಲೂ ಅನೇಕರು ಹೂಡಿಕೆ ಮಾಡುತ್ತಾರೆ. ಇದು ನಂಬಲರ್ಹ ವ್ಯವಹಾರವೂ ಆಗಿರುವುದು ಹೂಡಿಕೆಗೆ ಮತ್ತೊಂದು ಕಾರಣ. ಈಗ ಹಲವಾರು ಹೂಡಿಕೆಯು ಲಭ್ಯವಿದ್ದರೂ ಅನೇಕ ಜನರು ಸಣ್ಣ ವಯಸ್ಸಿನಿಂದಲೇ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಈ ಪ್ರವೃತ್ತಿಗೆ ಕಾರಣ ಹಾಗೂ ಲಾಭಗಳನ್ನು ನಾವು ತಿಳಿದುಕೊಳ್ಳುವುದು ಮುಖ್ಯ.
ಹೂಡಿಕೆ ಅಂದ್ರೆ?
ಸರಳ ಆರ್ಥಿಕ ನಿಯಮವಾದ ಬೇಡಿಕೆ ಹಾಗೂ ಪೂರೈಕೆಯು ಭೂಮಿ ಎಷ್ಟು ಅಮೂಲ್ಯವಾದದ್ದು ಎಂದು ತಿಳಿಸುತ್ತದೆ. ಜನಸಂಖ್ಯೆ ಹೆಚ್ಚಾದಂತೆ ಭೂಮಿ ಲಭ್ಯತೆ ಸೀಮಿತವಾಗುತ್ತಿದೆ. ಹಾಗಾಗಿ ಭೂಮಿ ಮೇಲಿನ ಹೂಡಿಕೆಯು ರಿಯಲ್ ಎಸ್ಟೇಟ್‌ನಲ್ಲಿ ಸುರಕ್ಷಿತ ಹೂಡಿಕೆ ಎಂದು ಭಾವಿಸಲಾಗುತ್ತಿದೆ. ಆರ್ಥಿಕ ಹಿಂಜರಿತ, ಕೊರೊನಾದಂತಹ ಸಾಂಕ್ರಾಮಿಕ ಕಾಯಿಲೆಗಳಂತಹ ಜಾಗತಿಕ ಅಂಶಗಳಿಂದ ರಿಯಲ್ ಎಸ್ಟೇಟ್ ಹೂಡಿಕೆ ಬೆಲೆ ಕೊಂಚ ಕುಸಿದರೂ ದೀರ್ಘಾವಧಿಗೆ ಪರಿಗಣಿಸಿದರೆ ಹೂಡಿಕೆ ಸುರಕ್ಷಿತವಾದುದು.
ಚಿನ್ನ, ವೈಯಕ್ತಿಕ ಹಣ ಯೋಜನೆ ಅಥವಾ ಇತರ ಹೂಡಿಕೆಗಳಿಗಿಂತ ರಿಯಲ್ ಎಸ್ಟೇಟ್ ಭಿನ್ನ ಆಸ್ತಿಯಾಗಿದೆ. ಮನೆಯನ್ನು ನಾವೇ ಬಳಸಬಹುದು ಅಥವಾ ಬಾಡಿಗೆಗೆ ನೀಡಬಹುದು. ಆದರೆ ಎರಡರಿಂದಲೂ ದೀರ್ಘಾವಧಿ ಲಾಭ ಲಭಿಸುತ್ತದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಅಭಿಪ್ರಾಯ ಪಡುತ್ತಾರೆ.
ಇನ್ನು ಇವರ ಪ್ರಕಾರ, ಕಳೆದ 10 ವರ್ಷಗಳಲ್ಲಿ 2012ರಿಂದ 2012ರವರೆಗೆ ಭಾರತದ ಏಳು ಪ್ರಮುಖ ನಗರಗಳಲ್ಲಿ ರಿಯಲ್ ಎಸ್ಟೇಟ್ ಬೆಲೆಯು ಸ್ಥಿರವಾಗಿತ್ತು ಎಂದು ಹೇಳುತ್ತಾರೆ.
ಸಣ್ಣ ವಯಸ್ಸಿನಲ್ಲಿ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಯೋಗ್ಯತೆಯಾಗಿದೆ. ಇದು ಆರ್ಥಿಕ ಸ್ಥಿರತೆಯನ್ನು ಹೆಚ್ಚುಮಾಡುತ್ತದೆ. ಕೆಲವು ವರ್ಷಗಳಲ್ಲಿ ಆಸ್ತಿಯ ಮೌಲ್ಯವನ್ನು ಹೆಚ್ಚಿಸಲು ಇದು ನೆರವಾಗುತ್ತದೆ. ಒಂದು ವೇಳೆ ಹಣಕಾಸಿನ ಬಿಕ್ಕಟ್ಟು ಕಂಡು ಬಂದರೂ ಈ ಹೂಡಿಕೆ ನೆರವಾಗುತ್ತದೆ’ ಎಂದು ತಜ್ಞರು ಸಲಹೆ ನೀಡುತ್ತಾರೆ. ಹಾಗೇ ರಿಯಲ್ ಎಸ್ಟೇಟ್ ಹೂಡಿಕೆಯು ವ್ಯಕ್ತಿಯ ಬಂಡವಾಳ ಪಟ್ಟಿಯಲ್ಲಿ ಸಮತೋಲನ ಹಾಗೂ ವೈವಿಧ್ಯತೆಯನ್ನು ತರಲು ನೆರವಾಗುತ್ತದೆ ಎನ್ನುತ್ತಾರೆ ಅವರು.
ಹೆಚ್ಚಿನವರು ಮನೆ ಖರೀದಿಗೆ ಗೃಹಸಾಲವನ್ನು ಇಎಂಐ ರೂಪದಲ್ಲಿ ಪಡೆಯುತ್ತಾರೆ. ಇದು ಕಡಿಮೆ ಮೊತ್ತದ, ದೀರ್ಘಾವಧಿಯ ಆಯ್ಕೆಯನ್ನು ಹೊಂದಿರುವುದರಿಂದ ಆರ್ಥಿಕ ಹೊರೆ ತಪ್ಪುತ್ತದೆ. ವ್ಯಕ್ತಿಗೆ ವಯಸ್ಸಾದಂತೆ, ಮೇಲಿನ ಹುದ್ದೆಗೆ ಏರಿದಂತೆ, ಆತನ ಆದಾಯವೂ ಹೆಚ್ಚಾಗುತ್ತದೆ. ಆಗ ಇಎಂಐ ಮೊತ್ತವನ್ನು ಹೆಚ್ಚಿಸಿಕೊಂಡು ಸಾಲವನ್ನು ಪೂರ್ಣ ಮಾಡಬಹುದು.
ಸಣ್ಣ ವಯಸ್ಸಿನಲ್ಲಿ ಹೂಡಿಕೆ ಮಾಡುವುದರಿಂದ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಪಾವತಿಸಿದ ಗೃಹ ಸಾಲದ ಬಡ್ಡಿಯ ಮೇಲೆ ರೂ 1.5 ಲಕ್ಷದವರೆಗೆ ಆದಾಯ ತೆರಿಗೆ ಪ್ರಯೋಜನವನ್ನು ಪಡೆಯಬಹುದು. ಈ ಕಡಿತವು ಸೆಕ್ಷನ್ 80 ಇಇಎ ಅಡಿಯಲ್ಲಿ ಲಭ್ಯವಿದೆ.