ಬೆಂಗಳೂರು;ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ 34 ಸಾವಿರ ದೇವಾಲಯಗಳ ಅಭಿವೃದ್ಧಿಗಾಗಿ ‘ವಿಷನ್ ಗ್ರೂಪ್ & ಕಾಲ್ ಸೆಂಟರ್(vishion group & callcenter) ಆರಂಭಿಸಲು ಮುಜರಾಯಿ(Mujarai) ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಇಲಾಖೆ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ದೇವಾಲಯಗಳ ಅಭಿವೃದ್ಧಿ ಮತ್ತಿತರ ವಿಷಯಗಳ ಮೇಲೆ ಕೇಂದ್ರೀಕರಿಸುವ ನಿಟ್ಟಿನಲ್ಲಿ ವಿಷನ್ ಗ್ರೂಪ್ ಕೆಲಸ ಮಾಡಲಿದೆ. ಅಲ್ಲದೆ, ವಿದೇಶಿ ಪ್ರವಾಸಿಗರಿಗೆ, ಇಲ್ಲಿನ ಸಾರ್ವಜನಿಕರ ವೀಕ್ಷಣೆಗೆ ದೇಗುಲಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ‘ಕಾಲ್ ಸೆಂಟರ್’ ಪ್ರಾರಂಭಿಸುತ್ತಿದೆ.ಇಲಾಖೆ ವ್ಯಾಪ್ತಿಯ ಎಲ್ಲ ದೇವಾಲಯಗಳನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುವುದನ್ನು ವಿಷನ್ ಗ್ರೂಪ್ ಕೇಂದ್ರೀಕರಿಸಲಿದ್ದು, ದೇಗುಲಗಳ ಜೀರ್ಣೋದ್ಧಾರ ಹಾಗೂ ಸ್ಥಳ ಅಭಿವೃದ್ಧಿಗೆ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ (CSR)ನಿಧಿ ಕಾಲ್‌ಸೆಂಟರ ಹೊಂದಿಸುವ ದಾರಿಯನ್ನು ಸುಗಮಗೊಳಿಸಲಿದೆ. ಈ ಸಂಬಂಧ 10 – 12 ಸದಸ್ಯರನ್ನು ಒಳಗೊಂಡ ವಿಷನ್ ಗ್ರೂಪ್‌ನ ರೂಪುರೇಷೆ ನೆರವಾಗಲು ಅಂತಿಮಗೊಳಿಸುವ ಪಕ್ರಿಯೆಯಲ್ಲಿ ಇಲಾಖೆ ತೊಡಗಿಕೊಂಡಿದೆ. ಈ ಸೆಂಟರ್ ಸದಸ್ಯರ ನೇಮಕ ವಿಷನ್ ಗ್ರೂಪ್‌ನ ಸದಸ್ಯರನ್ನಾಗಿ ನೇಮಿಸಲು ಮೂಲ ಇನ್‌ಫೋಸಿಸ್(Infosis) ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾಮೂರ್ತಿ, ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ, ರಾಜ್ಯಸಭಾ ಸದಸ್ಯ ಅಭಿಷೇಕ, ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸೇರಿ ಪ್ರಮುಖರನ್ನು ಸಂಪರ್ಕಿಸಲು ಸರ್ಕಾರ ಮುಂದಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ,ವಿಷನ್ ಗ್ರೂಪ್’ನ ಸದಸ್ಯರಾಗಲು ಉದ್ಯಮಿಗಳನ್ನು ಸಂಪರ್ಕಿಸುವ ಕಾರ್ಯ ನಡೆಯುತ್ತಿದೆ. ದೇವಾಲಯದ ಕುರಿತು ಮಾಹಿತಿ ನೀಡಲು ಸ್ಥಾಪಿಸಲಿರುವ ಕಾಲ್‌ಸೆಂಟರ್‌ನ ಸಂಪೂರ್ಣ ಪ್ರಕ್ರಿಯೆ 45 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ.