26.7 C
Bengaluru
Sunday, December 22, 2024

ವಿಶ್ವವಿಖ್ಯಾತ ಮೈಸೂರು ದಸರಾ ಆರಂಭದ ಇತಿಹಾಸ

ಬೆಂಗಳೂರು;ಆಷಾಢ ಕಳೆದು ಶ್ರಾವಣ ಬಂತೆಂದರೆ ಸಾಲು ಸಾಲು ಹಬ್ಬಗಳು. ಬರೀ ಸಂಭ್ರಮ, ವಿಜೃಂಭಣೆಯ ಆಚರಣೆ ದಿನನಿತ್ಯದ ಜಂಜಾಟಗಳ ನಡುವೆ ಒಂದಷ್ಟು ಖುಷಿ,ಹಬ್ಬಗಳಲೆಲ್ಲ ಅತೀ ವಿಶಿಷ್ಟವಾದ ಮತ್ತು ಎಲ್ಲಾ ಕಡೆಗಳಲ್ಲೂ ಆಚರಿಸುವ ಹಬ್ಬ ದಸರಾ ನಮ್ಮ ನಾಡ ಹಬ್ಬ ಈ ನವರಾತ್ರಿ ವೈಭವ ಒಂದೊಂದು ಕಡೆ ಒನ್ನೊಂದು ರೀತಿಯಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ ಮೈಸೂರಿನ ದಸರಾ ಅಂತೂ ಜಗತ್ಪ್ರಸಿದ್ಧಿಯಾಗಿದೆ.ನವರಾತ್ರಿಯನ್ನ ಧಾರ್ಮಿಕ ಹಾಗು ಸಾಂಸ್ಕೃತಿಕವಾಗಿ ಆಚರಿಸಿದ್ದು ಮತ್ತು ಧಾರ್ಮಿಕ ಆಚರಣೆಯ ನವರಾತ್ರಿಗೆ ಹೊಸ ಆಯಾಮ ನೀಡಿದವರು ವಿಜಯನಗರದ ಅರಸರು. ಈ ಸಾಮ್ರಾಜ್ಯದ ಕೃಷ್ಣ ದೇವರಾಯನ ಕಾಲದಲ್ಲಿ ದಸರಾ ಆಚರಣೆ ಉತ್ತುಂಗದಲ್ಲಿತ್ತು. ವಿಜಯನಗರ ದಸರಾ ನೋಡಲು ವಿದೇಶಿ ಪ್ರವಾಸಿಗರು ಕೂಡ ಆಗಮಿಸುತ್ತಿದ್ರು. ವಿಜಯನಗರ ಸಾಮ್ರಾಜ್ಯ ಪಥನದ ಬಳಿಕ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆ ಶುರುವಾಯ್ತು. ಮೈಸೂರು ಒಡೆಯ ರಾಜಾ ಒಡೆಯರ್ ಶ್ರೀರಂಗಪಟ್ಟಣದಲ್ಲಿ ಮೊದಲ ಬಾರಿಗೆ ದಸರಾ ಆಚರಿಸಿದವರು.

15ನೇ ಶತಮಾನದಲ್ಲಿ ವಿಜಯನಗರದ ಅರಸರು ಮೊಟ್ಟ ಮೊದಲ ಬಾರಿಗೆ ದಸರೆಯನ್ನು ಆಚರಿಸಿದ್ದರು. ಇವರ ನಂತರ ದಸರಾ ಆಚರಣೆಯ ಪರಂಪರೆಯನ್ನ ಮೈಸೂರ ಅರಸರು ಮುಂದುವರೆಸಿದ್ರು. 1610 ರಲ್ಲಿ ಮೊದಲ ಬಾರಿಗೆ ಮೈಸೂರು ದಸರೆಯನ್ನ ಅಂದಿನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ ಗೌರಿ ಕಡುವೆ ಎಂಬ ಸ್ಥಳದಲ್ಲಿ ಆಚರಿಸಲಾಗಿತ್ತು. ಬಳಿಕ 1972 ರಲ್ಲಿ ದಸರಾ ಹಬ್ಬವನ್ನ ನಾಡಹಬ್ಬವನ್ನಾಗಿ ಘೋಷಿಸಲಾಯಿತು.ಮೈಸೂರು ದಸರಕ್ಕೆ 450 ವರ್ಷದ ಭವ್ಯ ಇತಿಹಾಸವಿದೆ,ಹಂಪಿಯ ವಿಜಯನಗರ ಸಾಮ್ರಾಜ್ಯದಲ್ಲಿ ‘ಮಹಾನವಮಿ’ ಎಂಬ ಹೆಸರಿನಲ್ಲಿ ಇದನ್ನು ಆಚರಿಸಲಾಗುತ್ತಿತ್ತು. ಹಂಪಿಯ ‘ಹಜಾರರಾಮ’ ದೇವಸ್ಥಾನದ ಗೋಡೆಯ ಮೇಲಿನ ಕೆತ್ತನೆಗಳಲ್ಲಿ ಇದರ ಉಲ್ಲೇಖವಿದೆ. ಅಂದಿನ ಇಟಲಿಯ ವಿದೇಶಿ ಪ್ರವಾಸಿಗ ‘ನಿಕೋಲೋ ಡಿ ಕೌಂಟಿ’ ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿಕೊಟ್ಟು ಅಂದಿನ ಮಹಾನವಮಿಯನ್ನು “ರಾಜರ ಬೆಂಬಲದಿಂದ ನಡೆಯುವ ವೈಭವದ ನಾಡಹಬ್ಬ” ಎಂದು ತನ್ನ ಪ್ರವಾಸ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ.1610 ರಲ್ಲಿ ಶ್ರೀರಾಜ ಒಡೆಯರ್ ರವರು ಶ್ರೀರಂಗಪಟ್ಟಣದಲ್ಲಿ ಪ್ರಥಮ ಬಾರಿಗೆ ದಸರಾ ಮಹೋತ್ಸವವನ್ನು ಆರಂಭಿಸಿದರು. ಅಂದು ಶುರುವಾದ ಮೈಸೂರು ದಸರಾವನ್ನು ಇಂದಿನವರೆಗೂ ವೈಭವದಿಂದ ಆಚರಿಸಿಕೊಂಡು ಬರಲಾಗುತ್ತಿದೆ. 1880ರಲ್ಲಿ ಮೊದಲ ದಸರಾ ವಸ್ತು ಪ್ರದರ್ಶನ ನಡೆಸಲಾಯಿತು. ಹತ್ತನೇ ಚಾಮರಾಜ ಒಡೆಯರ್ ಮೊದಲ ದಸರಾ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ್ರು.

Related News

spot_img

Revenue Alerts

spot_img

News

spot_img