ಬೆಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾದ ವೈಷ್ಣವಿ ಗ್ರೂಪ್, ನಿಗದಿತ ಸಮಯಕ್ಕಿಂತ 5 ತಿಂಗಳ ಮುಂಚಿತವಾಗಿ ತಮ್ಮ ವಸತಿ ಪ್ರಾಜೆಕ್ಟ್ ‘ವೈಷ್ಣವಿ ಸೆರೆನ್’ ಗಾಗಿ ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ಅನ್ನು ಪಡೆದುಕೊಂಡಿದೆ.
ವೈಷ್ಣವಿ ಗ್ರೂಪ್ ಈ ಮೊದಲು ನಿಗದಿತ ಅವಧಿಗಿಂತ 18 ತಿಂಗಳ ಮುಂಚಿತವಾಗಿ ಭಾಗಶಃ ಆಕ್ಯುಪೆನ್ಸಿ ಪ್ರಮಾಣಪತ್ರವನ್ನು ಪಡೆದಿದ್ದರು. ಈ ಮೂಲಕ 400 ಕ್ಕೂ ಹೆಚ್ಚು ವೈಷ್ಣವಿ ಸೆರೆನ್ ಮನೆಮಾಲೀಕರು ತಮ್ಮ ಮನೆಗಳನ್ನು ಮೊದಲೇ ಸ್ವಾಧೀನಪಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು.
ಈ ಬಗ್ಗೆ ಮಾತನಾಡಿದ ವೈಷ್ಣವಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಗೋವಿಂದರಾಜು, “ವೈಷ್ಣವಿ ಗ್ರೂಪ್‌ನ ನಮಗೆಲ್ಲರಿಗೂ ಇದು ಹೆಮ್ಮೆಯ ಕ್ಷಣವಾಗಿದೆ. ಜಾಗತಿಕ ಪ್ರಿಕಾಸ್ಟ್ ನಿರ್ಮಾಣ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಮತ್ತು ಸವಾಲಿನ ಸಮಯದಲ್ಲಿ ನಿಖರವಾದ ಯೋಜನೆಯು ನಮ್ಮ ರೇರಾ (RERA) ಬದ್ಧತೆಗೆ ಮುಂಚಿತವಾಗಿ ವೈಷ್ಣವಿ ಸೆರೆನ್ ಎಲ್ಲರನ್ನು ತಲುಪುತ್ತದೆ ಎಂಬುದನ್ನು ಖಚಿತಪಡಿಸಿದೆ. ಆಫ್ ಟೈಮ್ ಪ್ರಾಜೆಕ್ಟ್ ಡೆಲಿವರಿ ಮತ್ತು ನಮ್ಮ ಗ್ರಾಹಕರಿಗೆ ಬದ್ಧತೆ ನೀಡುವುದು ವೈಷ್ಣವಿ ಗ್ರೂಪ್ ಅವರ ನೀತಿಯಾಗಿದೆ. ನಾವು ಗ್ರಾಹಕರ ನಿರೀಕ್ಷೆಗಳನ್ನು ಮೀರುವುದನ್ನು ಮುಂದುವರಿಸುತ್ತೇವೆ” ಎಂದಿದ್ದಾರೆ.
“ವೈಷ್ಣವಿ ಗ್ರೂಪ್ ವೈಷ್ಣವಿ ಸೆರೆನ್‌ಗಾಗಿ ಅತ್ಯಾಧುನಿಕ ನಿರ್ಮಾಣ ತಂತ್ರಜ್ಞಾನವನ್ನು ಬಳಸಿದೆ. ಈ ಇಂಟಿಗ್ರೇಟೆಡ್ ಆಫ್‌ಸೈಟ್ ಉತ್ಪಾದನಾ ತಂತ್ರಜ್ಞಾನ ಮತ್ತು ಡಿಎಫ್‌ಎಂಎ (ತಯಾರಿಕೆ ಮತ್ತು ಜೋಡಣೆಗಾಗಿ ವಿನ್ಯಾಸ) ಪರಿಕಲ್ಪನೆಯು ಕೆಲಸವನ್ನು ವೇಗವಾಗಿ ಪೂರ್ಣಗೊಳಿಸುವ ಸಮಯವನ್ನು ಖಚಿತಪಡಿಸಿದೆ. ನಿಯಂತ್ರಿತ ಯೋಜನೆ ಮತ್ತು ಯಂತ್ರ ತಯಾರಿಕೆಯನ್ನು ನೀಡಿರುವ ಈ ಉತ್ಪನ್ನದ ವಿನ್ಯಾಸದ ದಕ್ಷತೆ ಮತ್ತು ನಿಖರತೆಯು ತುಂಬಾ ಉತ್ತಮವಾಗಿದೆ. ಇವು ನಿರ್ಮಾಣ ಸ್ಥಳದಲ್ಲಿ ವಸ್ತುಗಳ ಬಳಕೆಯ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿದೆ ಎಂಬುದನ್ನು ಖಚಿತಪಡಿಸುತ್ತದೆ” ಎಂದರು.
‘ಈಗಾಗಲೇ ಮೇಕಾನಿಕಲ್, ವಿದ್ಯುತ್ ಮತ್ತು ಕೊಳಾಯಿ ನಳಗಳ ಕೆಲಸ ಮುಗಿದಿವೆ. ಕೇವಲ ಗುಣಮಟ್ಟವನ್ನು ಖಾತರಿಪಡಿಸುವುದು ಮಾತ್ರವಲ್ಲದೆ, ಅಂತಿಮವಾಗಿ ಯಾವುದಕ್ಕೂ ಸರಿಸಾಟಿಯಿಲ್ಲದ ಉತ್ಪನ್ನ ನಿರ್ಮಾಣವಾಗಲಿದೆ’ ಎಂದಿದ್ದಾರೆ.
ವೈಷ್ಣವಿ ಸೆರೆನ್‌ನ ಮನೆ ಮಾಲೀಕರಾದ ರೇಖಾ ಶ್ರೀನಿವಾಸ್ ಬೇಗ ಮನೆಗಳ ಸ್ವಾಧೀನ ಸಿಗುವ ಕಾರಣ ತುಂಬಾ ಉತ್ಸುಕರಾಗಿದ್ದಾರೆ. “ಪ್ರಾಮಾಣಿಕ ಮತ್ತು ಬದ್ಧತೆಯಿರುವ ಡೆವಲಪರ್‌ನಿಂದ ಮನೆಯನ್ನು ಖರೀದಿಸಿದ್ದಕ್ಕಾಗಿ ನನ್ನ ಕುಟುಂಬ ಮತ್ತು ನಾನು ಸಂತೋಷಪಡುತ್ತೇವೆ. ನಾವು 2023 ರ ಆರಂಭದಲ್ಲಿ ಮನೆ ಸ್ವಾಧೀನ ಸಿಗುತ್ತದೆ ಎಂದು ನಿರೀಕ್ಷಿಸುತ್ತಿದ್ದೇವು. ಆದರೆ, ಈಗಲೇ ಸಿಕ್ಕಿರುವ ಕಾರಣ ಅಲ್ಲಿಗೆ ತೆರಳಲು ತುಂಬಾ ಉತ್ಸುಕರಾಗಿದ್ದೇವೆ. ವೈಷ್ಣವಿ ಗ್ರೂಪ್ ಅವರು ಭರವಸೆ ನೀಡಿದ್ದಕ್ಕಿಂತ ಹೆಚ್ಚಿನದನ್ನು ನೀಡಿದೆ. ನಾವು ವೈಷ್ಣವಿ ಸೆರೆನ್ ಸಮುದಾಯದಲ್ಲಿ ವಾಸಿಸಲು ಎದುರು ನೋಡುತ್ತಿದ್ದೇವೆ” ಎಂದು ರೇಖಾ ಶ್ರೀನಿವಾಸ್ ಸಂತಸ ಹಂಚಿಕೊಂಡಿದ್ದಾರೆ.
ವೈಷ್ಣವಿ ಸೆರೆನ್:
ವೈಷ್ಣವಿ ಸೆರೆನ್ ಉತ್ತರ ಬೆಂಗಳೂರಿನ ಯಲಹಂಕದಲ್ಲಿರುವ 896-ಯೂನಿಟ್ ಅಪಾರ್ಟ್‌ಮೆಂಟ್ ಪ್ರಾಜೆಕ್ಟ್ ಆಗಿದೆ. ಆಸ್ತಿಯ ಮುಖ್ಯಾಂಶಗಳೆಂದರೆ 20,000 ಚದರ ಅಡಿ ಕ್ಲಬ್‌ಹೌಸ್, 36+ ಸೌಕರ್ಯಗಳು ಮತ್ತು 60% ಕ್ಕಿಂತ ಹೆಚ್ಚು ಓಪನ್ ಪ್ಲೇಸಸ್ ಹೊಂದಿದೆ.
ವೈಷ್ಣವಿ ಗ್ರೂಪ್:
ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಕಂಪನಿಯಾದ ವೈಷ್ಣವಿ ಗ್ರೂಪ್ ತನ್ನ ಸಮಗ್ರತೆ, ಬದ್ಧತೆ ಮತ್ತು ಸತತವಾಗಿ ನಿರೀಕ್ಷೆಗಳನ್ನು ಮೀರಿದ ಬ್ರಾಂಡ್ ಆಗಿ ರಿಯಲ್ ಎಸ್ಟೇಟ್ ವಿಭಾಗದಲ್ಲಿ ಗುರುತಿಸಿಕೊಳ್ಳುವ ಸ್ಪಷ್ಟ ಗುರಿಯೊಂದಿಗೆ ಪ್ರಾರಂಭವಾಯಿತು. ಇದನ್ನು 1998 ರಲ್ಲಿ ಅದರ ಪ್ರಮುಖ ನಾಯಕ, ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಸಿ ಎನ್ ಗೋವಿಂದರಾಜು ಅವರು ಪ್ರಾರಂಭಿಸಿದರು.
ಈಗಾಗಲೇ ವೈಷ್ಣವಿ ಗ್ರೂಪ್ ಬಹಳ ದೂರ ಸಾಗಿದೆ, ಉನ್ನತ-ಆದಾಯದ ಗುಂಪಿನ ಬೆಳವಣಿಗೆಗಳಲ್ಲಿ ಒಂದು ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಅದು ತನ್ನ ಗ್ರಾಹಕರ ನೆಲೆಯ ನಡುವೆ ಅಳಿಸಲಾಗದ ಗುರುತು ಹಾಕಿದೆ. ವೈಷ್ಣವಿ ಗ್ರೂಪ್‌ನ ವಾಣಿಜ್ಯ ಯೋಜನೆಗಳು ಗ್ರೇಡ್ A ಕಟ್ಟಡಗಳಾಗಿವೆ. IGBC ಪ್ಲಾಟಿನಂ ಪ್ರಮಾಣೀಕರಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಅವುಗಳ ಕಾರ್ಯತಂತ್ರದ ಸ್ಥಳಗಳು ಮತ್ತು ಹೆಚ್ಚು ಪರಿಣಾಮಕಾರಿ ವಿನ್ಯಾಸಗಳಿಗಾಗಿ ಮೆಚ್ಚುಗೆ ಪಡೆದಿದೆ. ಕಂಪನಿಯು ಪ್ರಸ್ತುತ ಅಭಿವೃದ್ಧಿಯ ವಿವಿಧ ಹಂತಗಳಲ್ಲಿ 9 ಮಿಲಿಯನ್ ಚದರ ಅಡಿ ಯೋಜನೆಗಳನ್ನು ಹೊಂದಿದೆ.
ವೈಷ್ಣವಿ ಪ್ರಶಾಂತ ರೇರಾ ಸಂಖ್ಯೆ: PRM/KA/RERA/1251/309/PR/180905/001990
ಹೆಚ್ಚಿನ ಮಾಹಿತಿಗಾಗಿ, ಲಾಗಿನ್ ಮಾಡಿ: www.vaishnaviserene.com
ಸಂಪರ್ಕಗಳು: ಶ್ರೀಮತಿ ಪ್ರಿಯಾ, priya@vaishnavigroup.com, +9199009 62760