ಬೆಂಗಳೂರು;ಎಲ್‌ಐಸಿಯು ಹಲವಾರು ಯೋಜನೆಗಳನ್ನು ಹೊಂದಿದೆ. ಆ ಯೋಜನೆಗಳಲ್ಲಿ ಎಲ್‌ಐಸಿ(LIC) ಜೀವನ ಪ್ರಗತಿ ಯೋಜನೆ(Jeevan pragati scheeme) ಕೂಡಾ ಒಂದಾಗಿದೆ.LIC ಜೀವನ್ ಪ್ರಗತಿ ಯೋಜನೆಯು ಅನೇಕ ಪ್ರಯೋಜನಗಳನ್ನು ಹೊಂದಿದೆ. ನೀವು ಈ ಯೋಜನೆಗೆ ಸೇರಿದರೆ ನೀವು ದಿನಕ್ಕೆ 200 ರೂ. ಅಂದರೆ ತಿಂಗಳಿಗೆ ರೂ.6 ಸಾವಿರ ಹಾಗೂ ವರ್ಷಕ್ಕೆ ರೂ.72 ಸಾವಿರ ಹೂಡಿಕೆ ಮಾಡಬೇಕು. ಈ ಯೋಜನೆಯಲ್ಲಿ 20 ವರ್ಷಗಳು ಪೂರ್ಣಗೊಂಡ ನಂತರ ನೀವು ಬೋನಸ್(Bonus) ಜೊತೆಗೆ 28 ರೂ.ಲಕ್ಷಗಳನ್ನು ಪಡೆಯುತ್ತೀರಿ. ಈ ಯೋಜನೆಯಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ರಿಸ್ಕ್ ಕವರ್(Risk cover) ಹೆಚ್ಚಾಗುತ್ತದೆ. ಎಲ್‌ಐಸಿಯ ಕಡಿಮೆ ಅವಧಿಯ ಪಾಲಿಸಿಗಳಲ್ಲಿ ಎಲ್‌ಐಸಿ ಜೀವನ ಪ್ರಗತಿ ಯೋಜನೆ ಕೂಡಾ ಒಂದಾಗಿದೆ. ಈ ಪಾಲಿಸಿಯಲ್ಲಿ ನಾವು ಅತೀ ಉತ್ತಮ ಹಾಗೂ ಹೆಚ್ಚು ವಿಮೆ ಸುರಕ್ಷತೆಯನ್ನು(Insurance safety) ಪಡೆಯಲು ಸಾಧ್ಯವಾಗುವುದು ಮಾತ್ರವಲ್ಲ, ಮೆಚ್ಯೂರಿಟಿ ವೇಳೆ ಉತ್ತಮ ರಿಟರ್ನ್ ಅನ್ನು ಕೂಡಾ ಪಡೆಯಲು ಸಾಧ್ಯವಾಗಲಿದೆ. ನಾವು ಕೆಲವೇ ವರ್ಷಗಳಲ್ಲಿ ಈ ಪಾಲಿಸಿಯಲ್ಲಿ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗಲಿದೆ. ಈ ಯೋಜನೆಯು (LIC Jeevan pragati yojana) ಕನಿಷ್ಠ 12 ವರ್ಷ, ಗರಿಷ್ಠ 20 ವರ್ಷ ಅವಧಿ ಹೊಂದಿದೆ.ಪಾಲಿಸಿದಾರನ ಮರಣದ ನಂತರ, ಬೋನಸ್ ಮತ್ತು ವಿಮಾ ಮೊತ್ತವನ್ನು ಸೇರಿಸಿ ಅವನ ಕುಟುಂಬ ಅಥವಾ ನಾಮಿನಿಗೆ ನೀಡಲಾಗುತ್ತದೆ. ಈ ಯೋಜನೆಯಲ್ಲಿ 20 ವರ್ಷಗಳು ಪೂರ್ಣಗೊಂಡಾಗ, ನೀವು ಬಡ್ಡಿಯೊಂದಿಗೆ ಸಂಪೂರ್ಣ 28 ಲಕ್ಷ ರೂ. ಪಡೆಯುತ್ತೀರಿ.12 ವರ್ಷದಿಂದ 45 ವರ್ಷದೊಳಗಿನವರು ಈ ವಿಮಾ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ, ನೀವು ಪ್ರೀಮಿಯಂ ಮೊತ್ತವನ್ನು ಅರ್ಧ ವಾರ್ಷಿಕ ಮತ್ತು ವಾರ್ಷಿಕ ಆಧಾರದ ಮೇಲೆ ಠೇವಣಿ ಮಾಡಬಹುದು.