ಬೆಂಗಳೂರು :ಬಿಪಿಎಲ್(BPL) ಎಪಿಎಲ್(APL) ಕಾರ್ಡ್‌ದಾರ ಒಂದು ಲಕ್ಷದಷ್ಟು ಪರಿಶೀಲನೆ ಅರ್ಜಿ ತಿರಸ್ಕೃತವಾಗಿದೆ(Reject) ಎನ್ನಲಾಗಿದ್ದು,ಈ ಮೂಲಕ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಮುಂದಾಗಿದ್ದ ಮಹಿಳೆಯರಿಗೆ ದೊಡ್ಡ ಸಮಸ್ಸೆ ಎದುರಾಗಿದೆ,ಸುಮಾರು 93 ಸಾವಿರಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ತಿರಸ್ಕೃತಗೊಂಡಿವೆ.ಎಪಿಎಲ್ ಕಾರ್ಡ್ದಾರರ ಬಹುತೇಕ ಅರ್ಜಿಗಳು ತಿರಸ್ಕೃತಗೊಂಡಿವೆ.ಬಿಪಿಎಲ್, ಎಪಿಎಲ್(APL) ಕಾರ್ಡ್‌ದಾರರಿಗೆ ತಿದ್ದುಪಡಿ ಮಾಡಿಸಲು ಅವಕಾಶ ನೀಡಲಾಗಿತ್ತು. ಅದರಂತೆ 3.70 ಲಕ್ಷ ಅರ್ಜಿಗಳನ್ನು ಪರಿಶೀಲಿಸಿದ್ದ ಆಹಾರ ಇಲಾಖೆ ಅಧಿಕಾರಿಗಳು 3.70 ಲಕ್ಷ ಅರ್ಜಿಗಳ ಪೈಕಿ 1,17,646 ಅರ್ಜಿಗಳ ತಿದ್ದುಪಡಿಗೆ ಅನುಮತಿ ನೀಡಿದೆ.ಆದರೆ ತಿದ್ದು ಪಡಿಗಾಗಿ ಅರ್ಜಿ ಸಲ್ಲಿಸದವರ ಪೈಕಿ 93 ಸಾವಿರ ಅರ್ಜಿಗಳು ತಿರಸ್ಕಾರಗೊಂಡಿದೆ ಎನ್ನಲಾಗಿದೆ.ಅರ್ಜಿ ಹಾಕಿದವರಲ್ಲಿ ಶೇ.70ರಷ್ಟು ಎಪಿಎಲ್ ಕಾರ್ಡ್ದಾರರಿದ್ದಾರೆ.ಒಂದು ತಿಂಗಳಲ್ಲಿ ಹೊಸ ತಿದ್ದುಪಡಿಗೆ 53,219 ಮಂದಿ ಅರ್ಜಿ ಸಲ್ಲಿಸಿದ್ದಾರೆ.ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ ಮಾಡಬಹುದಾಗಿತ್ತು. ಇದಲ್ಲದೇ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಬಯೊಮೆಟ್ರಿಕ್ಸ್ ಮಾಡಿಸುವುದು, ಯಜಮಾನನ ಹೆಸರಿನಲ್ಲಿರುವ ಪಡಿತರ ಚೀಟಿ ಯಜಮಾನಿಗೆ ವರ್ಗಾಯಿಸುವುದಕ್ಕೆ ಅವಕಾಶ ನೀಡಿತ್ತು.ಅದರಂತೆ ಆಹಾರ ಇಲಾಖೆ ತಿದ್ದುಪಡಿಗಾಗಿ ಅರ್ಜಿಸಲ್ಲಿಸಿದವರನ್ನು ಇಲಾಖೆ ನಿಯಮ ಅನುಸಾರವಾಗಿ ಪರಿಶೀಲನೆ ನಡೆಸಿ ಅರ್ಹರಿಗೆ ಮಾತ್ರ ತಿದ್ದುಪಡಿ ಅರ್ಜಿಗಳಿಗೆ ಮುಂದಿನ ಅವಕಾಶ ನೀಡಲಾಗಿದೆ.