#CM #siddramyya #started #whatsap #channel
ಬೆಂಗಳೂರು;ಸರ್ಕಾರ ಆರಂಭಿಸಿದ ಮೊಟ್ಟಮೊದಲ ವಾಟ್ಸ್ ಆ್ಯಪ್(Whatsap) ಚಾನೆಲ್ Chief Minister of Karnataka ಕ್ಕೆ ನಿರೀಕ್ಷೆ ಮೀರಿ ಸ್ಪಂದನೆ ದೊರಕಿದ್ದು, ಒಂದೇ ವಾರದಲ್ಲಿ 50 ಸಾವಿರಕ್ಕೂ ಅಧಿಕ ಜನ ಚಂದಾದಾರರಾಗಿದ್ದಾರೆ.ಜನರಿಗೆ ಬೆರಳ ತುದಿಯಲ್ಲಿ ಸರ್ಕಾರದ ದೈನಂದಿನ ಆಗುಹೋಗುಗಳ ಮಾಹಿತಿ ಒದಗಿಸಿ, ಆಡಳಿತವನ್ನು ಮತ್ತಷ್ಟು ಪಾರದರ್ಶಕವಾಗಿಸಲು ಚಾನೆಲ್ ಆರಂಭಿಸಲಾಗಿದೆ.ಕಳೆದವಾರವಷ್ಟೇ ಅಂದರೆ ಸೆ. 12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಚಾನೆಲ್ ಗೆ ಚಾಲನೆ ನೀಡಿದ್ದರು. ಇದಕ್ಕೆ ಈಗಾಗಲೇ 50 ಸಾವಿರಕ್ಕೂ ಅಧಿಕ ಚಂದಾದಾರ (Subscribers)) ಆಗಿದ್ದಾರೆ.ದೇಶದ ಸರ್ಕಾರವೊಂದರ ಮುಖ್ಯಸ್ಥರ ಪೈಕಿ ಮೊಟ್ಟಮೊದಲ ವಾಟ್ಸಪ್ ಚಾನೆಲ್ ಅನ್ನು ಆರಂಭಿಸಿದ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ.
ನೀವು ಕೂಡ ವಾಟ್ಸ್ ಆ್ಯಪ್ ನ ಚಾನೆಲ್ ಸೆಕ್ಷನ್(Section) ನಲ್ಲಿ Chief Minister of Karnataka ಎಂದು ಸರ್ಚ್(Search) ಮಾಡಿ ಚಂದಾದಾರರಾಗಬಹುದು.ಚಾನೆಲ್‌ನಲ್ಲಿ ಸಿಎಂ ದೈನಂದಿನ ಚಟುವಟಿಕೆ, ತೆಗೆದುಕೊಂಡ ಮಹತ್ವದ ನಿರ್ಧಾರಗಳು, ಸಭೆಗಳ ಪ್ರಮುಖ ಅಂಶಗಳು, ಹೊಸ ಯೋಜನೆ ಮಾಹಿತಿ, ಆರೋಪ ಅಥವಾ ಪ್ರಚಲಿತ ಘಟನೆಗಳಿಗೆ ಪ್ರತಿಕ್ರಿಯೆಗಳು ಸೇರಿದಂತೆ ಸಾಕಷ್ಟು ಮಾಹಿತಿಯು ನೇರವಾಗಿ ಸಿಗಲಿದೆ.ಸಿಎಂ ವಾಟ್ಸಪ್ ಚಾನೆಲ್ ಸೇರಬೇಕು ಎಂಬುವವರು ನಿಮ್ಮ ವಾಟ್ಸಪ್ ಚಾನಲ್ ಸೆಕ್ಷನ್‌ನಲ್ಲಿ Chief Minister of Karnataka ಎಂದು ಸರ್ಚ್ ಮಾಡಬೇಕು. ಬಳಿಕ ಸಿಎಂ ಅಧಿಕೃತ ಚಾನೆಲ್ ಕಾಣಿಸಲಿದೆ. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಮುಖ್ಯಮಂತ್ರಿಗಳ ಅಧಿಕೃತ ಚಾನಲ್ ಅನ್ನು ಸೇರಬಹುದು.